ಚಿಕನ್ ಬಿರಿಯಾನಿ ಹಂಚುವಾಗ ದೊಡ್ಡ ಯಡವಟ್ಟು ಮಾಡಿಕೊಂಡ ಶಿವಣ್ಣ, ಅಭಿಮಾನಿಗಳಿಗೆ ಭಾರೀ ನಿರಾಶೆ

 | 
ರಂ

 ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೊ ಖ್ಯಾತಿಯ ನಟ ಶಿವರಾಜಕುಮಾರ್‌ ಇದೇ ಜುಲೈ 12ರಂದು 62ನೇ ವಸಂತಕ್ಕೆ ಕಾಲಿಟ್ಟರು. ಇನ್ನು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು. ಅವರ ಆಸೆಗೆ ನಿರಾಸೆ ಮಾಡಬಾರದು ಎಂದು ಶಿವಣ್ಣ ಕೂಡ ಈ ಸಲ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಅಭಿಮಾನಿಗಳು ತಂದಿದ್ದ ಬೃಹತ್‌ ಗಾತ್ರದ ಹಾರವನ್ನು ಹಾಕಿಕೊಂಡು, ಕೇಕ್‌ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಿದ ಶಿವಣ್ಣ, ತಮ್ಮ ಜನ್ಮದಿನದ ಪ್ರಯುಕ್ತ ಇಡೀ ದಿನವನ್ನು ಅಭಿಮಾನಿಗಳ ಜೊತೆ ಭೇಟಿ ಮತ್ತು ಮಾತುಕತೆಗಾಗಿ ಮೀಸಲಿರಿಸಿದ್ದರು. ಸುಮಾರು ಮೂರು ವರ್ಷಗಳ ಕಾಲ ಕೋವಿಡ್‌ ಆತಂಕ ಅದಾದ ನಂತರ ನಟ ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ನಿಧನದ ದುಃಖ, ಹೀಗೆ ಸುಮಾರು ಸುಮಾರು ನಾಲ್ಕು ವರ್ಷಗಳಿಂದ ನಟ ಶಿವರಾಜಕುಮಾರ್‌ ಜನ್ಮದಿನದ ಸಂಭ್ರಮಾಚರಣೆಗಳಿಂದ ದೂರ ಉಳಿದಿದ್ದರು. ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಶಿವರಾಜಕುಮಾರ್‌ ಬಹಿರಂಗವಾಗಿ ತಮ್ಮ ಜನ್ಮದಿನ ಆಚರಣೆಗೆ ಮುಂದಾಗಿದ್ದರು.

ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬುಧವಾರ ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ವರನಟ ಡಾ. ರಾಜಕುಮಾರ್‌, ಪಾರ್ವತಮ್ಮ ರಾಜಕುಮಾರ್‌ ಮತ್ತು ಸೋದರ ಪುನೀತ್‌ ರಾಜಕುಮಾರ್‌ ಸಮಾಧಿಗೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ತಂದೆ-ತಾಯಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಶಿವರಾಜಕುಮಾರ್‌, ಬಳಿಕ ಅಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಭೇಟಿಯಾಗಿ, ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸಿದರು.

ಇನ್ನು 20000 ಜನರಿಗೆ ತಯಾರಿಸಲಾಗಿದ್ದ ಬಿರಿಯಾನಿ ಅನ್ನು. ತಾವು ತಿನ್ನದೆ ಒಂದಿಬ್ಬರ ಪ್ಲೇಟಿಗೆ ಹಾಕಿ ಶಿವಣ್ಣ ಊಟದ ಸ್ಥಳದಿಂದ ನಿರ್ಗಮಿಸಿದ್ದಾರೆ.
ಇದಾದ ಮೇಲೆ ಅಲ್ಲಲ್ಲಿ ಶಿವರಾಜ್ ಕುಮಾರ್, ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಅಭಿಮಾನಿ ಸಂಘಗಳೂ ಸೇರಿದಂತೆ ವಿವಿದ ಅಭಿಮಾನಿ ಸಂಘಗಳಿಂದ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮಗಳೂ ನಡೆಯಿತು. ಅಲ್ಲಿ ಭೇಟಿನೀಡಿ ಧನ್ಯವಾದವನ್ನು ಅರ್ಪಿಸಿದರು.

ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.