ರಾತ್ರಿಯೆಲ್ಲ ಗಂಡನಿಗೆ ಮಾಲ್ಡೀವ್ಸ್ ತೋರಿಸಿ, ಬೆಳಗ್ಗೆ ಲೇಟ್ ಆಗಿ ಎದ್ದ ಸೋನಲ್ ದಂಪತಿಗಳು
Oct 9, 2024, 12:55 IST
|
ಕಾಟೇರ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂತೇರೊ ವೈವಾಹಿಕವನ್ನು ಎಂಜಾಯ್ ಮಾಡುತ್ತಿದ್ದಾರೆ. ಹಿಂದೂ ಸಂಪ್ರದಾಯ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಎರಡೆರಡು ಬಾರಿ ವಿವಾಹವಾಗಿದ್ದ ಈ ಜೋಡಿ ಒಂದಷ್ಟು ದಿನ ಸೈಲೆಂಟ್ ಆಗಿತ್ತು. ಆದರೆ, ಅವರ ಅಭಿಮಾನಿಗಳಿಗೆ ಮಾತ್ರ ಇನ್ನೂ ಈ ಜೋಡಿ ಹನಿಮೂನ್‌ಗೆ ಹೋಗಿಲ್ವಲ್ಲ ಅಂತ ಕೇಳುತ್ತಲೇ ಇತ್ತು.
ತರುಣ್ ಸುಧೀರ್, ಸೋನಾಲ್ ಮಾಂತೇರೊ ಇಬ್ಬರೂ ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯವನ್ನು ಗೌಪ್ಯವಾಗಿಯೇ ಇಟ್ಟಿದ್ದರು. ಇನ್ನೇನು ಮದುವೆ ಆಗಬೇಕು ಅಂತ ನಿರ್ಧರಿಸಿದಾಗಲೇ ತಮ್ಮ ಲವ್ ಸ್ಟೋರಿಯನ್ನು ರಿವೀಲ್ ಮಾಡಿದ್ದರು. ಈ ಲವ್ ಸ್ಟೋರಿ ಮೊದಲು ಅವರ ನೆಚ್ಚಿನ ನಟ ದರ್ಶನ್‌ಗೂ ಗೊತ್ತಿತ್ತು.
ತರುಣ್ ಸುಧೀರ್ ಹಾಗೂ ಸೋನಾಲ್ ಮೊಂತೇರೊ ಇದೇ ವರ್ಷ ಆಗಸ್ಟ್ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಕೆಂಗೇರಿ ಸಮೀಪದ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸ್ಯಾಂಡಲ್‌ವುಡ್ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಆಗಮಿಸಿ ನವ ಜೋಡಿಗೆ ಆಶೀರ್ವಾದ ಮಾಡಿದ್ದರು. ಇಲ್ಲಿಂದ ಈ ಜೋಡಿ ತಮ್ಮ ಲೋಕದಲ್ಲಿ ಕಳೆದು ಹೋಗಿದ್ದರು.
ಸದ್ಯ ಈ ಜೋಡಿ ಈಗ ವಿದೇಶಿ ಪ್ರವಾಸದಲ್ಲಿ ಇದೆ. ಈ ನವ ದಂಪತಿ ಹನಿಮೂನ್ ಮೂಡ್‌ನಲ್ಲಿದೆ. ಸೆಲೆಬ್ರಿಟಿಗಳ ಸ್ವರ್ಗ ಅಂತಲೇ ಕರೆಯುವ ಮಾಲ್ಡೀವ್ಸ್‌ಗೆ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂತೇರೊ ತೆರಳಿದ್ದಾರೆ. ಎರಡು ದಿನಗಳ ಹಿಂದಷ್ಟೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದ್ವೀಪಗಳ ರಾಷ್ಟ್ರದಲ್ಲಿ ಸುತ್ತಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಅವರ ಅಭಿಮಾನಿಗಳು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಸೋನಾಲ್ ಮಾಂತೇರೊ ಮಾಲ್ಡೀವ್ಸ್ ಪ್ರವಾಸದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗೇ "ನನ್ನವನೊಂದಿಗೆ ಸ್ವರ್ಗವನ್ನು ಹುಡುಕುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಮಾಲ್ಡೀವ್ಸ್‌ನ ಸುಂದರ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋದಲ್ಲಿ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂತೇರೊ ಇಬ್ಬರೂ ಸುಂದರ ಕ್ಷಣಗಳನ್ನು ಕಳೆದಿದ್ದಾರೆ. ಅಲ್ಲಿನ ರೆಸಾರ್ಟ್‌ನಲ್ಲಿ ಇಬ್ಬರೂ ಕೈ ಕೈ ಹಿಡಿದು ಸುತ್ತಾಡಿದ್ದಾರೆ. ತಮ್ಮ ಬದುಕಿನ ಸುಂದರ ಕ್ಷಣಗಳನ್ನು ಕಳೆದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.