ಸೌಂದರ್ಯ ಸಾ ವು ನಾಗವಲ್ಲಿಗೆ ದೂರು, ನಿಜವಾದ ಕೊ ಲೆ ಆರೋಪಿ ವಿರುದ್ಧ ದೂರು ದಾಖಲು
Mar 16, 2025, 10:47 IST
|

ಹೌದು... ಬಹುಭಾಷೆಯಲ್ಲಿ ಸಿನಿಮಾ ಮಾಡಿದ ಸೌಂದರ್ಯ ಕರ್ನಾಟಕದಲ್ಲೂ ಪ್ರಸಿದ್ಧ ನಟಿ. ಆದರೆ ಅವರು ಕೇವಲ 31ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದರು. 2004 ಏಪ್ರಿಲ್ 17ರಂದು ಸೌಂದರ್ಯ ಅವರು ಭಾರತೀಯ ಜನತಾ ಪಕ್ಷ ಮತ್ತು ತೆಲುಗು ದೇಶಂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಕರೀಂನಗರಕ್ಕೆ ಹೋಗುತ್ತಿದ್ದಾಗ ಅವರ ಖಾಸಗಿ ವಿಮಾನ ಅಪಘಾತಕ್ಕೀಡಾಗಿ ಅವರು ನಿಧನರಾದರು. ವಿಮಾನ ಅಪಘಾತದಲ್ಲಿ ಅವರ ದೇಹ ಸುಟ್ಟು ಕರಕಲಾಗಿ ಹೋಗಿತ್ತು. ಕೊನೆಯದಾಗಿ ಕುಟುಂಬಕ್ಕೆ ಅವರ ಮುಖ ನೋಡಲು ಕೂಡ ಆಗಲಿಲ್ಲ.
ಈ ದುರಂತ ಘಟನೆ ನಡೆದು 21 ವರ್ಷಗಳು ಕಳೆದಿವೆ. ಈ ಪ್ರಕರಣದಲ್ಲಿ ಈಗ ಒಬ್ಬ ಸ್ಟಾರ್ ನಟನ ಹೆಸರು ಬೆಳಕಿಗೆ ಬರುತ್ತಿದೆ. ಟಾಲಿವುಡ್ ನ ಖ್ಯಾತ ಹಿರಿಯ ನಟ ಮೋಹನ್ ಬಾಬು ವಿರುದ್ಧ ದೂರು ದಾಖಲಿಸಲಾಗಿದೆ. ನಟಿ ಸೌಂದರ್ಯ ಅವರ ಸಾವಿಗೆ ನಟ ಮೋಹನ್ ಬಾಬು ಕಾರಣ ಎಂದು ದೂರಿನಲ್ಲಿ ಹೇಳಲಾಗಿದೆ. ಚಿಟ್ಟಿಮಲ್ಲು ಎಂಬಾತ ಖಮ್ಮಂ ಎಸಿಪಿ ಮತ್ತು ಖಮ್ಮಂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಕನ್ನಡ ನಟಿ ಸೌಂದರ್ಯ ಅವರು ಶಂಷಾಬಾದ್ ಪ್ರದೇಶದ ಜಲ್ಪಲ್ಲಿ ಗ್ರಾಮದಲ್ಲಿ 6 ಎಕರೆ ಭೂಮಿಯನ್ನು ಖರೀದಿಸಿದ್ದರು. ಮೋಹನ್ ಬಾಬು ಅವರಿಗೆ ಆ ಭೂಮಿ ಮೇಲೆ ಕಣ್ಣು ಬಿದ್ದಿತ್ತು. ಹೀಗಾಗಿ ಆ ಭೂಮಿಯನ್ನು ಮಾರಾಟ ಮಾಡಲು ಮೋಹನ್ ಬಾಬು ಸೌಂದರ್ಯ ಹಾಗೂ ಅವರ ಸಹೋದರನನ್ನು ಕೇಳಿದ್ದರು. ಆದರೆ ನಟಿ ಸೌಂದರ್ಯ ಮತ್ತು ಅವರ ಸಹೋದರ ಅಮರನಾಥ್ ಆ ಭೂಮಿಯನ್ನು ಮಾರಾಟ ಮಾಡಲು ಒಪ್ಪಲಿಲ್ಲ.
ಈ ವಿಷಯವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದೇ ಕಾರಣಕ್ಕೆ ಮೋಹನ್ ಬಾಬು ದ್ವೇಷ ಹೊಂದಿದ್ದರು ಎಂದು ದೂರುದಾರ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,17 Mar 2025
FactCheck:ಮಗು ನಾಮಕರಣಕ್ಕೆ ಭೇಟಿ ಕೊಟ್ಟ ದರ್ಶನ್, ಫಿದಾ ಆದ ಸುಮಲತಾ
Sun,16 Mar 2025
ನಿವೇದಿತಾ ಜೊತೆ ನನಗೆ ಸಂಬಂಧ ಇಲ್ಲ ಸ್ವಾಮಿ; ಮೌನಮುರಿದ ಸೃಜನ್ ಲೋಕೇಶ್
Sun,16 Mar 2025
ಕನ್ನಡಿಗರಿಗೆ ಬಿಸಿಬಿಸಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದ ನಿವೇದಿತಾ ಗೌಡ
Sun,16 Mar 2025