ಬಾಲಿವುಡ್ ಗೆ ಹಾರಿದ ಶ್ರೀಲೀಲಾ; 'ಇನ್ನುಮುಂದೆ ನನ್ನ ಲೆವೆಲೆ ಬೇರೆ' ಎಂದ ನ ಟಿ
ಬ್ಯೂಟಿ ಶ್ರೀಲೀಲಾಗೆ ತೆಲುಗಿನಲ್ಲಿ ಭಾರೀ ಬೇಡಿಕೆಯಿದೆ. ಸೌಂದರ್ಯದ ಜೊತೆ ಪ್ರತಿಭೆ ಇರುವ ಶ್ರೀಲೀಲಾ ಬ್ರೇಕ್ ನಂತರ ಮತ್ತಷ್ಟು ಬ್ಯೂಸಿಯಾಗಿದ್ದಾರೆ. ತೆಲುಗಿನ ಜೊತೆ ಬಾಲಿವುಡ್‌ನಿಂದಲೂ ಕಿಸ್ ನಟಿಗೆ ಬುಲಾವ್ ಬರುತ್ತಿದೆ. ಶ್ರೀಲೀಲಾ ಬೆಂಗಳೂರಿನ ಕಾಲೇಜು ಜೊತೆಗೆ ಮೆಡಿಕಲ್ ಓದುತ್ತಿದ್ದಾರೆ. ಇದರ ಪರೀಕ್ಷೆಯ ನಿಮಿತ್ತ ಗುಂಟೂರು ಖಾರಂ ಸಿನಿಮಾದ ನಂತರ ಬ್ರೇಕ್ ಆಗಿದ್ದರು.
ಪರೀಕ್ಷೆ, ಓದು ಅಂತ ಬ್ಯೂಸಿಯಿದ್ದ ನಟಿ ಮತ್ತೆ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿರಿಯ ನಟ ಶ್ರೀಕಾಂತ್ ಅವರ ಮಗ ನಟಿಸಿದ ಪೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ನಟಿ, ಕಡಿಮೆ ಅವಧಿಯಲ್ಲಿ ಮಹೇಶ್ ಬಾಬು ಅವರಂತಹ ಸ್ಟಾರ್ ಹೀರೋಗಳೊಂದಿಗೆ ನಟಿಸಿ ಸೈ ಎನಿಸಿಕೊಂಡ್ರು. ಸ್ಟಾರ್ ನಟರ ಮೊದಲ ಆಯ್ಕೆ ಆಗಿ ಬೆಳೆದಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಆಗುತ್ತಿದ್ದಂತೆ ನಟಿ ಶ್ರೀಲೀಲಾ ಒಂಬತ್ತು ಚಿತ್ರಗಳಿಗೆ ಸಹಿ ಹಾಕಿದ್ರು. ಭಗವಂತ ಕೇಸರಿ ಹಿಟ್ ಆಯ್ತು. ಬಳಿಕ ಬಂದ ಶ್ರೀಲೀಲಾ ಚಿತ್ರಗಳು ಫ್ಲಾಪ್ ಲಿಸ್ಟ್ಗೆ ಸೇರಿದೆ. ಇದೀಗ ಶ್ರೀಲೀಲಾ ಸೋಲಿನ ಸುಳಿಯಿಂದ ಹೊರ ಬರಲು ಅಳೆದು ತೂಗಿ ಸಿನಿಮಾಗಳನ್ನು ಆಯ್ಕೆ ಮಾಡುತ್ತಿದ್ದಾರಂತೆ. ಸಿನಿಮಾ ಫ್ಲಾಪ್ ಆದ್ರೂ ಶ್ರೀಲೀಲಾಗೆ ಆಫರ್ ಗಳು ಕಡಿಮೆ ಆಗಿಲ್ಲ.
ಈ ಬ್ಯೂಟಿಗೆ ಒಳ್ಳೊಳ್ಳೆ ಆಫರ್ ಗಳು ಬರುತ್ತಿವೆಯಂತೆ. ಅವುಗಳಲ್ಲಿ ಶ್ರೀಲೀಲಾ ಕಥೆಗಳನ್ನು ಅಳೆದು-ತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ. ಇದೀಗ ಬಾಲಿವುಡ್ ಯಂಗ್ ಹೀರೋ ವರುಣ್ ಧವನ್ ಸಿನಿಮಾದಲ್ಲಿ ನಟಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದಾರಂತೆ. ವರುಣ್ ಧವನ್ ತಂದೆ ಡೇವಿಡ್ ಧವನ್, ಶೀಘ್ರವೇ ಮಗನಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರಂತೆ. ಕಾಮಿಡಿ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.