ಸ್ನಾನ ಮಾಡುವಾಗ ‌ಅಲ್ಲೂ ಬರುತ್ತಾರೆ; ಮಲಗಿದ್ದಾಗ ಕೂಡ ನೆಮ್ಮದಿ ಇಲ್ಲ‌ ಎಂದ ಪಾರು ನ ಟಿ

 | 
ುರಗ

ಕನ್ನಡದ ಪಾರು ಸಿರೀಯಲ್‌ನ ಮೂಲಕ ಎಲ್ಲರ ಗಮನ ಸೆಳೆದ ನಟಿ ಸಿತಾರಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ನಟಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಇದೀಗ ಬಣ್ಣದ ಲೋಕದಲ್ಲಿ ನೆಲೆಯೂರಿದ್ದಾರೆ. ಜೀವನದಲ್ಲಿ ಕರಾಳ ದಿನಗಳನ್ನು ನೋಡಿರುವ ಸಿತಾರಾ ಅವರ ಬದುಕಿನಲ್ಲಿಯೂ ಕೆಲವು ಕಹಿ ಮತ್ತು ಅಹಿತಕರ ಘಟನೆಗಳೂ ನಡೆದಿವೆ.  

ರಂಗಭೂಮಿಯಿಂದಲೇ ನಟನೆಗೆ ಪಾದಾರ್ಪಣೆ ಮಾಡಿದ ನಟಿ ಸಿತಾರಾ. ಅದೇ ರಂಗಭೂಮಿಯಲ್ಲಿದ್ದಾಗ ಆದ ಕೆಟ್ಟ ಅನುಭವಗಳು ಯಾವ ಹೆಣ್ಣಿಗೂ ಆಗಬಾರದು. ನನಗೆ ಬಂದ ಈ ಕಷ್ಟ ಯಾರಿಗೂ ಬರಬಾರದು ಎಂದು ನಟಿ ಇಂದಿಗೂ ಕಣ್ಣೀರು ಹಾಕುತ್ತಿದ್ದಾರೆ. ಹಾಗಾದರೆ ಇಷ್ಟು ಸಿತಾರಾ ಇಷ್ಟು ದುಃಖಿತರಾಗಲು ಕಾರಣವೇನು..? ಅವರ ಬಾಳಲ್ಲಿ ಎದುರಾದ ಆ ಸಮಸ್ಯೆ ಎಂಥದ್ದು? ಎನ್ನುವುದರ ಕುರಿತು ತಾವೇ ಸ್ವತಃ ಹೇಳಿಕೊಂಡಿದ್ದಾರೆ. 

ಅಪ್ಪ ಅಮ್ಮನ ಪ್ರೀತಿ ಇಲ್ಲದೇ ಅನಾಥವಾಗಿ ಮಠದಲ್ಲಿ ಬೆಳೆದ ಸಿತಾರಾ ಆ ಮಠ ಬಿಟ್ಟು ಹೊರಬಂದ ಮೇಲೆ ಸಿತಾರಾ ಅನುಭವಿಸಿದ ನೋವು, ಸಂಕಟದ ಆ ದಿನಗಳ ಬಗ್ಗೆ ಕಲಾಮಾಧ್ಯಮ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.ನಿಮ್ಮನ್ನು ನೀವು ನಂಬುವುದಾದರೇ ಮಾತ್ರ ಮನೆ ಬಿಟ್ಟು ಹೊರಬನ್ನಿ..ಯಾರನ್ನೋ ಅವಲಂಬಿಸಿ ಹೊರಬಂದರೆ, ನನ್ನ ಥರ ಕಣ್ಣೀರು ಹಾಕಬೇಕಾಗುತ್ತದೆ. 

ಸಾಣೆಹಳ್ಳಿ ಮಠ ಬಿಟ್ಟು ಬಂದು ನಾನು ತಪ್ಪು ಮಾಡಿದ್ದೆ.  ಕೆಲಸ ಅರಸಿ ನೀನಾಸಂಗೆ ಹೋದೆ. ಮೊದಲೇ ಮನೆ ಇರಲಿಲ್ಲ.. ತಿರುಗಾಟವೇ ನನ್ನ ಜೀವನವಾಗಿತ್ತು.   ತಿರುಗಾಟದ ಸಮಸ್ಯೆಯಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಇದ್ದೇನ. ಕೆಲವು ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲು ಪ್ರಯತ್ನಿಸಿದರು. 

ಹಿಂದೆ ಮುಂದೆ ಯಾರು ಇಲ್ಲ ಎಂದು ತಿಳಿದಾಕ್ಷಣ ಅವರ ವರ್ತನೆ ನಿಜಕ್ಕೂ ಅಹಿತಕರವಾಗಿರುತ್ತಿತ್ತು. ಇದೀಗ ನನ್ನ ಜೀವನದಲ್ಲಿ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡವರ ಹೆಸರು ಹೇಳಿದರೆ ಅವರ ಕುಟುಂಬವೇ ಬೀದಿಗೆ ಬರುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.