ಬಿಗ್ ಬಾಸ್ ಮನೆಗೆ ಗ್ರಾಂಡ್‌ ಎಂಟ್ರಿ ನೀಡಲಿದ್ದಾರೆ ವಿಜಯ್ ರಾಘವೇಂದ್ರ, ಅವರ ಬಾಯಲ್ಲೇ ಕೇಳಿ

 | 
G jdc

ಈ ವರ್ಷ ನಟ ವಿಜಯ್ ರಾಘವೇಂದ್ರ ಅವರ ಬದುಕಿನಲ್ಲಿ ಕೆಲವು ಕಹಿ ಘಟನೆಗಳು ನಡೆದವು. ಪತ್ನಿಯ ಅಕಾಲಿಕ ಮರಣದಿಂದ ಅವರು ತೀವ್ರ ನೋವು ಅನುಭವಿಸಬೇಕಾಯಿತು. ಹಾಗಂತ ಕರ್ತವ್ಯ ಮರೆಯುವಂತಿಲ್ಲ. ಪತ್ನಿಯನ್ನು ಕಳೆದುಕೊಂಡ ನಂತರ ಕೆಲವೇ ದಿನಗಳಲ್ಲಿ ಅವರು ಸಿನಿಮಾದ ಕೆಲಸಗಳಿಗೆ ಮರಳಿದರು. ತಾವು ಒಪ್ಪಿಕೊಂಡಿದ್ದ ಕೆಲಸಗಳನ್ನೆಲ್ಲ ಮುಗಿಸಿಕೊಟ್ಟರು.

ಈಗ ಅವರು ನಟಿಸಿದ ಹೊಸ ಸಿನಿಮಾ ಮರೀಚಿ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಇದೆ. ಈ ಸಿನಿಮಾಗೆ ಸಿಧ್ರುವ್ ಸಿದ್ದು ಅವರು ನಿರ್ದೇಶನ ಮಾಡಿದ್ದಾರೆ. ವಿಜಯ್​ ರಾಘವೇಂದ್ರ ಅವರಿಗೆ ಚಿತ್ರರಂಗದಲ್ಲಿ ಇರುವ ಅನುಭವ ಅಪಾರ. ಬಾಲನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

 ಇಂಥ ಅನುಭವಿ ಕಲಾವಿದನ ಜೊತೆ ಮರೀಚಿ ಸಿನಿಮಾದಲ್ಲಿ ಹೊಸ ಪ್ರತಿಭೆಗಳು ಬಣ್ಣ ಹಚ್ಚಿದ್ದಾರೆ. ಈಗಾಗಲೇ ಗುರುತಿಸಿಕೊಂಡ ನಟ-ನಟಿಯರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಒಂದು ರೀತಿಯಲ್ಲಿ ಹೊಸಬರು ಮತ್ತು ಹಳಬರ ಸಂಗಮದಂತಿದೆ ಈ ಸಿನಿಮಾದ ಪಾತ್ರವರ್ಗ. ವಿಜಯ್​ ರಾಘವೇಂದ್ರ ಅವರ ಮಡದಿಯ ಪಾತ್ರದಲ್ಲಿ ಸೋನು ಗೌಡ ಅಭಿನಯಿಸಿದ್ದಾರೆ. 
 
ನಿಜ ಜೀವನದ ರೀತಿಯ ಈ ಸಿನಿಮಾದಲ್ಲಿ ಕೂಡ ಪತ್ನಿಯನ್ನು ಕಳೆದುಕೊಳ್ಳುವಂತಹ ದೃಶ್ಯದಲ್ಲಿ ಅವರು ನಟಿಸಿದ್ದು ಎಮೋಷನಲ್​ ಆಗಿದೆ. ವಿಜಯ್​ ರಾಘವೇಂದ್ರ ಅವರು ಮರೀಚಿ ಸಿನಿಮಾದಲ್ಲಿ ಪೊಲೀಸ್​ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಅವರ ತಂಡದಲ್ಲಿ ಕೆಲಸ ಮಾಡುವ ಯುವ ಪೊಲೀಸ್​ ಅಧಿಕಾರಿಯಾಗಿ ಹೊಸ ನಟಿ ಶ್ರುತಿ ಪಾಟೀಲ್​ ಅವರು ಸಿನಿಮಾದುದ್ದಕ್ಕೂ ಕಾಣಿಸಿಕೊಳ್ಳುತ್ತಾರೆ. ಸರಣಿ ಕೊಲೆಯ ಬಗ್ಗೆ ಹೆಣೆದಿರುವ ಕಥೆ ಈ ಚಿತ್ರದಲ್ಲಿ ಇದೆ. 

ಬೇರೆ ಬೇರೆ ಕಡೆಗಳಲ್ಲಿ ನಡೆದ ವಿಚಿತ್ರವಾದ ಕೊಲೆ ಪ್ರಕರಣದ ತನಿಖೆ ಮಾಡುವ ಭೈರವ್​ ನಾಯಕ್​ ಎಂಬ ನಿಷ್ಠಾವಂತ ಪೊಲೀಸ್​ ಆಗಿ ವಿಜಯ್​ ರಾಘವೇಂದ್ರ ನಟಿಸಿದ್ದಾರೆ. ಈ ಸಿನೆಮಾದ ಬಿಡುಗಡೆಗೆ ಮುನ್ನ ಯುವ ನಟ  ಅಭಿ ದಾಸ್​, ಸ್ಪಂದನಾ ಸೋಮಣ್ಣ ಅವರೊಂದಿಗೆ ಬಿಗ್ಬಾಸ್ ಮನೆಯಲ್ಲಿ ಇರುವ ರೀತಿಯಲ್ಲಿ ಸ್ಕ್ರಿಪ್ಟನ್ನು ಮಾಡಿ ಪ್ರಮೋಷನ್ ಮಾಡಿದ್ದಾರೆ. 

ಅದನ್ನು ನೋಡಿ ಹಲವರು ವಿಜಯ್ ರಾಘವೇಂದ್ರ ಮತ್ತೇ ಬಿಗ್ಬಾಸ್ ಮನೆಗೆ ಕಾಲಿಟ್ಟರೇನೋ ಎನ್ನುವ ಅನುಮಾನ ಮೂಡಿಸುವಂತೆ ಮಾಡಿತ್ತು. ಆದರೆ ಇದು ಮರೀಚಿ ಸಿನೆಮಾದ ಬಿಡುಗಡೆಗೆ ಮಾಡಿದ ಹೊಸ ಪ್ರಯೋಗವಾಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.