ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಜಯ್ ರಾಘವೇಂದ್ರ ಮಗ ಶೌರ್ಯ, ರಾಜ್ಯಕ್ಕೆ ಮಾದರಿಯಾದ ಚಿನ್ನರಿ ಮುತ್ತನ ಮಗ
May 4, 2025, 09:19 IST
|

ಮುದ್ದಿನ ಮಗನ ಕೆನ್ನೆಗೆ ವಿಜಯ್ ರಾಘವೇಂದ್ರ ಹಾಗೂ ಪತ್ನಿ ಸ್ಪಂದನಾ ವಿಜಯ್ ಮುತ್ತಿಡುವ ಹಳೆಯ ಫೋಟೊ ಒಂದನ್ನು ವಿಜಯ್ ರಾಘವೇಂದ್ರ ಶೇರ್ ಮಾಡಿದ್ದು, ಚಿನ್ನ, ನಿನ್ನ ಮಗ ಪಾಸ್ ಆಗಿದ್ದಾನೆ ಎಂದು ಹೆಂಡ್ತಿಯನ್ನು ನೆನಪಿಸುತ್ತಾ ಪೋಸ್ಟ್ ಮಾಡಿದ್ದಾರೆ. ಶೌರ್ಯ ವಿಜಯ್ ಐಎಸ್ಸಿ 12ನೇ ತರಗತಿಯಲ್ಲಿ ಓದುತ್ತಿದ್ದರು. ಇವರಿಗೆ ಪರೀಕ್ಷೆಯಲ್ಲಿ ಎಷ್ಟು ಪರ್ಸಂಟೇಜ್ ಬಂದಿದೆ.
ಯಾವ ಸ್ಕೂಲ್ ನಲ್ಲಿ ಓದುತ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ ನಟ ತಮ್ಮ ಮಗನ ಯಶಸ್ಸನ್ನು ಹಂಚಿಕೊಳ್ಳುವ ಮೂಲಕ ತಾವೂ ಸಂಭ್ರಮಿಸಿದ್ದಾರೆ. ಮಗನ ಪರೀಕ್ಷೆಯ ಸಮಯದಲ್ಲಿ ವಿಜಯ್ ರಾಘವೇಂದ್ರ ಕಾಳಜಿಯಿಂದ ಮಗನ ಜೊತೆಯಾಗಿ ನಿಂತು ಆತನಿಗೆ ಧೈರ್ಯ ತುಂಬಿದ್ದರು. ಮಗನ ಪರೀಕ್ಷೆ ಮುಗಿಯುತ್ತಿದ್ದಂತೆ ನಟ ಆತನನ್ನು ಕರೆದುಕೊಂಡು ಸಮ್ಮರ್ ವೆಕೇಶನ್ ಎಂಜಾಯ್ ಮಾಡಲು ಗೋವಾಕ್ಕೆ ತೆರಳಿದ್ದರು.
ಇನ್ನು ನಿನ್ನೆಯಷ್ಟೇ ಶೌರ್ಯ ಅಮ್ಮ ಸ್ಪಂದನಾ ವಿಜಯ್ ಅವರ ಹಳೆಯ ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಲ್ಯಾಪ್‌ಟಾಪ್‌ನಲ್ಲಿ ನನ್ನ ಫೋಟೋಗಳನ್ನು ಸ್ಕ್ರೋಲ್ ಮಾಡಿದಾಗ ಈ ಚಿತ್ರಗಳು ಸಿಕ್ಕವು...ಇದನ್ನೆಲ್ಲಾ ನೋಡಿ ಎಂದು ಬರೆದುಕೊಂಡಿದ್ದರು. ಈ ಫೋಟೊಗಳ ಜೊತೆಗೆ ಹಿನ್ನೆಲೆಯಲ್ಲಿ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರದ ‘ಧಿಕ್ಕಾರ ನಿನಗೆ ದೇವರೆ ಉಸಿರು ಈ ಇರುವರೆಗೆ, ಕಸಿದುಕೊಂಡ ಜೀವವ ಮರಳಿ ಕೊಡು ನನಗೆ, ಧಿಕ್ಕಾರ ನಿನಗೆ ದೇವರೆ ನಿನ್ನ ಈ ನಡೆಗೆ, ಕ್ಷಮಿಸಲಾರೆ ನಿನ್ನನ್ನು ನಾನು ಕೊನೆವರೆಗೆ ಎನ್ನುವ ಹಾಡನ್ನು ಹಾಕಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023