ರವಿಚಂದ್ರನ್ ಜೊತೆ ನಟಿಸಿದ ನಟಿ ದುಡ್ಡಿಗಾಗಿ ಮಾಡುತ್ತಿರುವ ಕೆಲಸ ಏನು ಗೊ.ತ್ತಾ

 | 
ಹಗಹ೭

ಕನ್ನಡದಲ್ಲಿ ಬೆರಳಣಿಕೆ ಚಿತ್ರದಲ್ಲಿ ನಟಿಸಿದರೂ ತಮ್ಮ ಅಭಿನಯ ಮತ್ತು ಸಹಜ ಸೌಂದರ್ಯದಿಂದಲೇ ತಮ್ಮದೇಯಾದ ಛಾಪು ಮೂಡಿಸಿರೋ ನಟ ಮಧುಬಾಲಾ. 1993ರಲ್ಲಿ ಅಣ್ಣಯ್ಯ, ನಂತರ ರನ್ನ ಚಿತ್ರದಲ್ಲಿ ಕಿಚ್ಚ ಸುದೀಪ್​ ಅವರ ಅತ್ತೆಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ಮಧುಬಾಲ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸಿನಿಮಾಗಳಲ್ಲಿಯೂ ಫೇಮಸ್​ ಆಗಿದ್ದಾರೆ.

ಇತ್ತೀಚಿನ  ಕೆಲ ವರ್ಷಗಳ ಹಿಂದೆ ಮಾಡಿದ ರನ್ನ ಚಿತ್ರದಲ್ಲಿನ ಅತ್ತೆಯ ಪಾತ್ರವಂತೂ ಎಂದಿಗೂ ಮರೆಯುವಂತಿಲ್ಲತಮ್ಮ ವೈಯಕ್ತಿಕ ಜೀವನದ ಕೆಲವೊಂದಿಷ್ಟು ಆಸಕ್ತಿಕರ ಸಂಗತಿಗಳನ್ನು ತಿಳಿಸಿದ್ದಾರೆ. ಅದೇನೆಂದರೆ, ಬಹುಭಾಷಾ ನಟಿಯಾಗಿರುವ ಮಧುಬಾಲಾ ಅವರು . ಒಂದೇ ಸಮಯದಲ್ಲಿ ಮೂರ್ನಾಲ್ಕು ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅದೆಷ್ಟೋ ಸೂಪರ್ ಹಿಟ್‌ ಆಫರ್‌ಗಳನ್ನೂ ಕೈಬಿಟ್ಟವರು.

ಆದರೆ ಸಿನಿಮಾ ಕೆರಿಯರ್​ನ ಉತ್ತುಂಗದಲ್ಲಿರುವಾಗಲೇ ಉದ್ಯಮಿ ಆನಂದ್​ ಎಂಬುವರನ್ನು ಮದುವೆಯಾಗಿದ್ದು, ಈಗ ಸುಖ ಸಂಸಾರ ನಡೆಸುತ್ತಿದ್ದಾರೆ. ಕೆಲಕಾಲ ಚಿತ್ರರಂಗದಿಂದ ದೂರ ಉಳಿದು ಇದೀಗ ಮತ್ತೆ  ಸಿನಿಮಾ ರಂಗಕ್ಕೆ ಕಂಬ್ಯಾಕ್​ ಮಾಡಿದ್ದಾರೆ.  ಆದರೆ ಸ್ಫುರದ್ರೂಪಿಯಾಗಿರುವ ಮಧುಬಾಲಾ ಅವರನ್ನು ಮದುವೆಯಾಗಲು ನಟರೆಲ್ಲರೂ ರೆಡಿ ಇರುವಾಗ ಉದ್ಯಮಿಯನ್ನು ಆಯ್ಕೆ ಮಾಡಿಕೊಂಡರು. 

ಮದುವೆಯ ಸಂದರ್ಭದಲ್ಲಿ ಆನಂದ್​ ಅವರಿಗೆ ತಲೆಗೂದಲು ಇರಲಿಲ್ಲ. ಇದೀಗ ತಲೆ ಬೋಳಿಸುವುದು ಫ್ಯಾಷನ್​ ಆಗಿದ್ದು, ಅದೇ ಚೆಂದ ಎನ್ನುವವರೂ ಇದ್ದರೂ, ಮಧುಬಾಲಾ ಅವರ ಮದುವೆಯ ಸಂದರ್ಭದಲ್ಲಿ ನಟರನ್ನುಬಿಟ್ಟು ಇವರನ್ನೇಕೆ ಆಯ್ಕೆ ಮಾಡಿಕೊಂಡರು ಎಂದು ಹಲವರು ಪ್ರಶ್ನಿಸಿದ್ದರಂತೆ.

ಅದಕ್ಕೆ ಮಧುಬಾಲಾ ತಾವು ಆಗಲೂ ಇದಕ್ಕೆ ಉತ್ತರ ಕೊಟ್ಟಿದ್ದಿದೆ, ಈಗಲೂ ಮತ್ತೊಮ್ಮೆ ಹೇಳುತ್ತಿದ್ದೇನೆ ಎನ್ನುವ ಮೂಲಕ ನಟರನ್ನು ರಿಜೆಕ್ಟ್​  ಮಾಡಿ ಕೂದಲೇ ಸೌಂದರ್ಯ ಎನ್ನುವ ಸಂದರ್ಭದಲ್ಲಿಯೂ ಬೋಳು ತಲೆಯ ಉದ್ಯಮಿಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣ ಕೊಟ್ಟಿದ್ದಾರೆ. 

ಅಷ್ಟಕ್ಕೂ ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ನಟನನ್ನೇ ಮದುವೆಯಾಗಬೇಕೆಂದು ಬಯಸಿದವಳು. ಆದರೆ ಸಿನಿಮಾದಲ್ಲಿ ತಳವೂರಿದ ಮೇಲೆ ನಟರ ಬಗ್ಗೆ ಚೆನ್ನಾಗಿ ಅರಿತುಬಿಟ್ಟೆ. ನಟರ ಬಗ್ಗೆ ಸಾಕಷ್ಟು ಅನುಭವವೂ ಆಯಿತು.  ಇಂದು ಒಬ್ಬಳು, ನಾಳೆ ಇನ್ನೊಬ್ಬಳು, ಮತ್ತೊಂದು ದಿನ ಮತ್ತೊಬ್ಬಳು.ಇದು ಬಹುತೇಕ ನಟರ ಪ್ರವೃತ್ತಿ. ಇದನ್ನು ನೋಡಿ ಅಸಹ್ಯ ಹುಟ್ಟಿತು. 

ಆಗಲೇ ನಾನು ಯಾವುದೇ ಕಾರಣಕ್ಕೂ ನಟರನ್ನು ಮದುವೆಯಾಗಬಾರದು ಎಂದು ಡಿಸೈಡ್​ ಮಾಡಿಬಿಟ್ಟೆ ಎಂದಿದ್ದಾರೆ. ಒಂದಾನೊಂದು ಕಾಲದಲ್ಲಿ ಸಾಲ ತೀರಿಸಲು ಮನೆ ತೋಟ ಎಲ್ಲವನ್ನು ಮಾರಿದ್ದೆ ಎಂದು ಕೂಡಾ ಇವರು ಹೇಳಿಕೊಂಡಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.