ಹೌದು ನಾನು ಮಕ್ಕಳ ಕಳ್ಳಿ, ಮಾಧ್ಯಮಗಳ ಪ್ರಶ್ನೆಗೆ ಕೌಂಟರ್ ಕೊಟ್ಟ ಮೋಕ್ಷಿತಾ ಪೈ
Feb 1, 2025, 07:49 IST
|

ಬಿಗ್ಬಾಸ್ ಸೀಸನ್ 11 ಮುಗಿದು 1 ವಾರ ಕಳೆದರೂ ಎಲ್ಲೆಲ್ಲೂ ಅದರದೇ ಸುದ್ದಿ. ಹೌದು ಕಣ್ರೀ ಬಿಗ್ ಬಾಸ್' ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿದ್ದ ಮೋಕ್ಷಿತಾ ಪೈ ಅವರು ಫಿನಾಲೆಯಲ್ಲಿ 3ನೇ ರನ್ನರ್ ಅಪ್ ಆಗಿ ಹೊರಬಂದಿದ್ದು ಆಯ್ತು . ಬಿಗ್ಬಾಸ್ ಇಂದ ಬಂದ ಹಣದಲ್ಲಿ ಒಂದು ಭಾಗವನ್ನು ಅಂಗವಿಕಲ ಮಕ್ಕಳಿಗೆ ದಾನ ಮಾಡಿದ್ದೂ ಆಯ್ತು.ಆದ್ರೆ ಅದೆಲ್ಲಕ್ಕಿಂತ ಹೆಚ್ಚಾಗಿ ಸುದ್ಧಿ ಆಗಿದ್ದು ಅಂದ್ರೆ ಮಕ್ಕಳ ಕಳ್ಳಿ ಮೋಕ್ಷಿತಾ ಅನ್ನೋದು.ಅಷ್ಟಕ್ಕೂ ಅವ್ರು ನಿಜವಾಗಿ ಕದ್ದಿದ್ದು ಹೌದಾ? ಅದ್ಕೆ ಅವ್ರೇ ಹೇಳಿದ್ದಾದ್ರು ಏನು? ಐಶ್ವರ್ಯ ಪೈ ಅನ್ನೊ ಇವರು ಮೊಕ್ಷಿತಾ ಆಗಿದ್ದು ಹೇಗೆ? ಬನ್ನಿ ನೋಡ್ಕಂಡ್ ಬರೋಣ.
ಸ್ನೇಹಿತರೇ...ಈ ಮೊದಲು ಮೋಕ್ಷಿತಾ ಅವರು ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಆಗ ಅವರ ಹೆಸರು ಮೋಕ್ಷಿತಾ ಅಂತ ಇರಲಿಲ್ಲವಂತೆ. ಆಗ ಬಾಯ್ ಫ್ರೆಂಡ್ ಜೊತೆ ಸೇರಿ ಆಕೆ ಟ್ಯೂಷನ್ ಗೆ ಬರುತ್ತಿದ್ದ ಮಗುವನ್ನು ಕಿಡ್ನ್ಯಾಪ್ ಮಾಡಿದ್ದರು ಎನ್ನುವ ಆರೋಪವನ್ನು ಸಹ ಎದುರಿಸಿದ್ದರು.ಈ ಘಟನೆ ನಡೆದು ಹಲವು ವರ್ಷಗಳು ಕಳೆದಿವೆ. ಕೋರ್ಟ್ ಕೂಡ ಈ ಬಗ್ಗೆ ವಿಚಾರಣೆ ನೀಡಿ ತೀರ್ಪು ಕೂಡ ನೀಡಿತ್ತು. ಇಮೋಕ್ಷಿತಾ ಬಿಗ್ ಬಾಸ್ ಮನೆಯಲ್ಲಿದ್ದಾಗ ಈ ಸುದ್ದಿ ಮತ್ತೆ ವೈರಲ್ ಕೂಡಾ ಮಾಡಲಾಗಿತ್ತು.ಮೋಕ್ಷಿತಾ ನಿಜವಾದ ಮುಖ ಇದೇ ಎಂದು ಕೆಲವರು ಫೋಟೋಗಳನ್ನು ಪೋಸ್ಟ್ ಮಾಡಿ ಟ್ರೋಲ್ ಮಾಡಿದ್ರು. ಇದ್ರಿಂದ ಮೋಕ್ಷಿತಾ ಫ್ಯಾಮಿಲಿಯವರು ಕೂಡ ಬೇಸರಗೊಂಡಿದ್ರು. ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಕಿಡ್ನ್ಯಾಪ್ ವಿವಾದದ ಬಗ್ಗೆ ಮೋಕ್ಷಿತಾ ಓಪನ್ ಆಗಿ ಮಾತಾಡಿದ್ದಾರೆ.
ಹೌದು ಸ್ನೇಹಿತರೇ...ನಾನು ನಿರಪರಾಧಿ ಅಂತ ಸರ್ಟಿಫಿಕೇಟ್ ಇದೆ. ಮತ್ತೆ ಇದೇ ವಿಚಾರ ಇಟ್ಕೊಂಡು ಟ್ರೋಲ್ ಮಾಡ್ತಾರೆ ಅಂದ್ರೆ ನಾನು ಏನು ಹೇಳೋಕೆ ಆಗೋದಿಲ್ಲ. ಅದೀಗ ಮುಗಿದು ಹೋಗಿರೋ ವಿಚಾರ. ಈಗ ಅದನ್ನು ಕೆದಕೋದಿಕ್ಕೆ ಇಷ್ಟ ಪಡಲ್ಲ. ನನಗೆ ಕಾನೂನು ಮೂಲಕ ಆ ಟ್ರೋಲ್ ಮಾಡಿದವರಿಗೆ ಉತ್ತರ ಕೊಡುವ ಮನಸ್ಸು ಇಲ್ಲ. ಆ ನೋವು ಏನು ಅಂತ ನನಗೆ ಗೊತ್ತು, ಹೀಗಾಗಿ ನಾನು ಆಕ್ಷನ್ ತಗೊಳ್ತಿಲ್ಲ. ನಾನಂತೂ ಯಾರಿಗೂ ತೊಂದರೆ ಕೊಡೋದಿಲ್ಲ. ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಈ ವಿಚಾರ ಯಾಕೆ ಹೊರಗಡೆ ಬಂತು ಅಂತ ನನಗೆ ಗೊತ್ತಿಲ್ಲ. ಈ ಸಮಯದಲ್ಲಿ ಆ ರೀತಿ ಆಗಿದ್ದೂ ಒಳ್ಳೆಯದೇ ಆಗಿದೆ. ನನ್ನ ಅಭಿಮಾನಿಗಳು ನನ್ನ ಪರ ನಿಂತಿದ್ದು ನಿಜಕ್ಕೂ ಖುಷಿ ಕೊಟ್ಟಿದೆ ಅಂತ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.
https://www.youtube.com/live/MnN3tz5Xio4?si=o1X7AV15VPF6PyTR
ಸ್ನೇಹಿತರೇ... ಇನ್ನು ಈ ಮೊದಲು ಐಶ್ವರ್ಯಾ ಪೈ ಆಗಿದ್ದ ಇವರು ಪಾರು ಧಾರಾವಾಹಿ ನಟಿಸುವ ಸಮಯದಲ್ಲಿ ಮೊಕ್ಷಿತಾ ಪೈ ಎಂದು ಹೆಸರು ಬದಲಾಯಿಸಿ ಕೊಂಡಿದ್ರು. ಇನ್ನು ಈ ಕುರಿತಾಗಿಯೂ ಮಾತಾ ಡಿರುವ ಅವ್ರು ನನಗೆ ಹೆಸರು ಇಡುವಾಗ ನ್ಯೂಮರಾಲಜಿ ಪ್ರಕಾರ ಹೆಸರು ಇಟ್ಟಿರಲಿಲ್ಲ. ಮೋ ಹಾಗೂ ಟ ಅಕ್ಷರದಿಂದ ಹೆಸರು ಇಡಬೇಕಿತ್ತು. ಪಾರು ಧಾರಾವಾಹಿ ಮಾಡುವಾಗ ಹೆಸರು ಬದಲಾಯಿಸಿ ಅಂತ ಹೇಳಿದ್ದರು. ಇದಾದ ಬಳಿಕ ಯಶಸ್ಸು ಸಿಗುತ್ತದೆ ಅಂತ ಹೇಳಿದ್ದರು. ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ, ನನಗೆ ಈ ಹೆಸರು ಆಗಿ ಬರತ್ತಾ ಅಂತ ನಾವು ಕೇಳಿದ್ದೇವೆ. ಸಂಖ್ಯಾಶಾಸ್ತ್ರಜ್ಞರು ನನಗೆ ಮೊನಿಷಾ ಅಂತ ಹೆಸರಿಡಿ ಅಂದರು. ಆಗ ನನಗೆ ಮೋಕ್ಷಿತಾ ಅಂತ ಹೆಸರು ಇಟ್ಟಿದ್ದಾರೆ. ನನಗೆ ಮರುನಾಮಕರಣ ಮಾಡಿದ್ದಾರೆ. ಚಿತ್ರರಂಗಕ್ಕೋಸ್ಕರ ನಾನು ಹೆಸರು ಬದಲಾಯಿಸಿಕೊಂಡಿದ್ದೇನೆ. ನಾನು ಎಲ್ಲರಿಗೂ ಸ್ಪಷ್ಟನೆ ಕೊಡೋಕೆ ಆಗೋದಿಲ್ಲ. ನನ್ನ ಜೊತೆಯಲ್ಲಿ ಇದ್ದವರಿಗೆ ನಾನು ಏನು ಅಂತ ಗೊತ್ತಿರತ್ತೆ ಎಂದು ಮೋಕ್ಷಿತಾ ಪೈ ಅವರು ಹೇಳಿಕೊಂಡಿದ್ದಾರೆ.
ಇನ್ನು ಸರಳತೆಯಿಂದ ಮನಗೆದ್ದಿರುವ ಈ ಚಲುವೆ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಹೌದು ಸ್ನೇಹಿತರೇ
ಮೋಕ್ಷಿತಾ ಅವರೇ ಹೇಳುವಂತೆ ಅವರದ್ದು ಒಂದು ಸಿನಿಮಾ ಕಂಪ್ಲೀಟ್ ಆಗಿದೆ. ಇನ್ನೊಂದು ಸಾಂಗ್ ಬಾಕಿ ಇದೆಯಂತೆ. ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಮೋಕ್ಷಿತಾ ಕಪ್ಪು ಹುಡುಗಿಯಾಗಿರುತ್ತಾರಂತೆ. ಹೀಗೆ ಹೇಳುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ ಮೋಕ್ಷಿತಾ.
ಒಟ್ಟಿನಲ್ಲಿ ಹೇಳುವುದಾದರೆ ಹಳೆಯದೆಲ್ಲ ಮರೆತು ಹೊಸದಾಗಿ ಬದುಕ ಕಟ್ಟಿಕೊಂಡು ಈಗ ಬಿಗ್‌ಬಾಸ್ ಆಟ ಮುಗಿಸಿ ಹೊರ ಬಂದಿರುವ ಮೋಕ್ಷಿತಾ ಸಿನಿಮಾ ಮಾಡಲು ಶುರು ಮಾಡಿದ್ದಾರೆ. ಜೊತೆಗೆ ಎಲ್ಲರ ಆಶೀರ್ವಾದ ಇರಲಿ ಎನ್ನುವ ಮನವಿ ಕೂಡ ಮಾಡಿದ್ದಾರೆ. ಮನೆ ಮಗಳು ಮೋಕ್ಷಿತಾ ಸಿನಿಮಾಗಳಲ್ಲಿ ಹೇಗೆ ಕಾಣಿಸಲಿದ್ದಾರೆ ಎನ್ನುವ ಕುತೂಹಲ ಸದ್ಯ ಅಭಿಮಾನಿಗಳಿಗೆ ಮೂಡಿರೋದಂತು ಸತ್ಯ.