ತಮಿಳು ನಟ ದಳಪತಿ ವಿಜಯ್ ಸಂಭಾವನೆ ಎಷ್ಟು ಗೊತ್ತಾ, ನಟ ಯಶ್ ಗಿಂತ ನಾಲ್ಕು ಪಟ್ಟು ಹೆಚ್ಚು

 | 
ಹಗ

ಸ್ಟಾರ್ ನಟರ ಸಿನಿಮಾಗಳು ಹೆಚ್ಚು ಕಲೆಕ್ಷನ್ ಮಾಡಲು ಬಾಕ್ಸ್ ಆಫೀಸ್‌ನಲ್ಲಿ ಪರಸ್ಪರ ಸ್ಪರ್ಧೆ ಮಾಡುವುದು ಸಾಮಾನ್ಯ, ಅಂತೆಯೇ ಸ್ಟಾರ್ ನಟರು ಸಂಭಾವನೆ ವಿಷಯದಲ್ಲಿ ಪರಸ್ಪರ ಪೈಪೋಟಿಗೆ ಬಿದ್ದಂತಿದ್ದಾರೆ.
ಅದರಲ್ಲಿಯೂ ದಕ್ಷಿಣ ಭಾರತದ ನಟರಂತೂ ಭಾರಿ ದುಬಾರಿ ಸಂಭಾವನೆ ಪಡೆಯುವುದರಲ್ಲಿ ಒಬ್ಬರ ಮೇಲೋಬ್ಬರು ಪೈಪೋಟಿ ನಡೆಸುತ್ತಿದ್ದಾರೆ.

ಆದರೆ ಎಲ್ಲರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಶ್ರೇಯ ಮಾತ್ರ ತಮಿಳಿನ ಸ್ಟಾರ್ ನಟ ವಿಜಯ್‌ ರದ್ದು. ವಿಜಯ್ ಪಡೆವಷ್ಟು ಸಂಭಾವನೆಯನ್ನು ಭಾರತದ ಇನ್ನಾವ ನಟನೂ ಪಡೆಯುವುದಿಲ್ಲ. ಶಾರುಖ್ ಖಾನ್, ಸಲ್ಮಾನ್ ಖಾನ್ ಸಹ ಅಷ್ಟು ಸಂಭಾವನೆ ಪಡೆಯುವುದಿಲ್ಲ. ಇದೀಗ ಬಿಡುಗಡೆ ಆಗಿರುವ 'ವಾರಿಸು' ಸಿನಿಮಾಕ್ಕೆ ವಿಜಯ್‌ರ ಸಂಭಾವನೆ ಇನ್ನೂ ಸ್ವಲ್ಪ ಹೆಚ್ಚಳ ಆಗಿದೆ. 

ವಿಜಯ್ ನಟನೆಯ 'ವಾರಿಸು' ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಉತ್ತಮ ಗಳಿಕೆಯನ್ನೇ ಕಂಡಿದೆ. ಸಿನಿಮಾವನ್ನು ಜನಪ್ರಿಯ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡಿದ್ದು, ಈ ಸಿನಿಮಾಕ್ಕೆ ವಿಜಯ್ ಬರೋಬ್ಬರಿ 150 ಕೋಟಿ ರುಪಾಯಿ ಸಂಭಾವನೆ ಪಡೆದಿದ್ದಾರೆ. ಭಾರತದಲ್ಲಿ ಈ ವರೆಗೆ ಇನ್ನಾವ ನಟನೂ ಇಷ್ಟು ದೊಡ್ಡ ಸಂಭಾವನೆಯನ್ನು ಸಿನಿಮಾ ಒಂದಕ್ಕೆ ಪಡೆದಿಲ್ಲ. ಶಾರುಖ್ ಖಾನ್ ಸಹ ಇಲ್ಲ.

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂಬ ಖ್ಯಾತಿ ಈ ಮೊದಲು ರಜನೀಕಾಂತ್ ಬಳಿ ಇತ್ತು. ಅವರು ರೋಬೋ ಸಿನಿಮಾಕ್ಕಾಗಿ 100 ಕೋಟಿ ಸಂಭಾವನೆ ಪಡೆದಿದ್ದರು. ಆ ಬಳಿಕ ಇತ್ತೀಚೆಗೆ ವಿಜಯ್‌ ಹಾಗೂ ಪ್ರಭಾಸ್ ಅವರುಗಳು ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂಬ ಖ್ಯಾತಿಗೆ ಪಾತ್ರರಾದರು. ಇದೀಗ ವಿಜಯ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂಬ ಖ್ಯಾತಿಯನ್ನು ಹೊತ್ತು ಮುಂದೆ ಸಾಗುತ್ತಿದ್ದಾರೆ. ಸಲ್ಮಾನ್, ಶಾರುಖ್, ಪ್ರಭಾಸ್ ಅವರುಗಳೆಲ್ಲ ವಿಜಯ್‌ರ ನಂತರದ ಸ್ಥಾನದಲ್ಲಿದ್ದಾರೆ.

ವಿಜಯ್‌ ತಮ್ಮ ಹಿಂದಿನ ಸಿನಿಮಾ 'ಬೀಸ್ಟ್'ಗೆ ನೂರು ಕೋಟಿ ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ವಿಜಯ್‌ರ ಸಿನಿಮಾ ಒಂದೇ ವಾರದಲ್ಲಿ ನೂರರಿಂದ ಇನ್ನೂರು ಕೋಟಿ ಕಲೆಕ್ಷನ್ ಅನ್ನು ಬಾಕ್ಸ್ ಆಫೀಸ್‌ನಲ್ಲಿ ಮಾಡುತ್ತದೆ ಹೀಗಿರುವಾಗ ಅವರು ನೂರು ಅಥವಾ ನೂರೈವತ್ತು ಕೋಟಿ ಸಂಭಾವನೆ ಪಡೆಯುವುದು ದೊಡ್ಡ ವಿಷವೇನಲ್ಲ ಎನ್ನಿಸುತ್ತದೆ. ನಿರ್ಮಾಪಕರು ಸಹ ಖುಷಿಯಿಂದಲೇ ವಿಜಯ್‌ಗೆ ದೊಡ್ಡ ಮೊತ್ತದ ಸಂಭಾವನೆಯನ್ನು ನೀಡುತ್ತಾರೆ.ಪಗ

ವಿಜಯ್‌ರ 'ವಾರಿಸು' ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಕೌಟುಂಬಿಕ ಸಿನಿಮಾ ಆಗಿರುವ ಇದು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಸಿನಿಮಾದ ಹಿಂದೆ ಬಿಡುಗಡೆ ಆಗಿದ್ದ ವಿಜಯ್‌ರ 'ಬೀಸ್ಟ್' ಸಿನಿಮಾ ಫ್ಲಾಪ್ ಆಗಿತ್ತು. ಹಾಗಿದ್ದರೂ ಸಹ ಸುಮಾರು 150 ಕೋಟಿಗೂ ಹೆಚ್ಚು ಹಣ ಗಳಿಸಿತ್ತು. ಇದೀಗ ವಿಜಯ್, ಲೋಕೇಶ್ ಕನಕರಾಜ್ ಜೊತೆ ಸಿನಿಮಾ ಮಾಡಲು ಸಹಿ ಮಾಡಿದ್ದು, ಈ ಸಿನಿಮಾ ಪಕ್ಕಾ ಹಿಟ್ ಎನ್ನಲಾಗುತ್ತಿದೆ.ವಕ

ಸದ್ಯ ವಿಜಯ್, ರಶ್ಮಿಕಾ ಮಂದಣ್ಣ ನಟನೆಯ `ವಾರಿಸು’ ಸಿನಿಮಾ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈ ಬೆನ್ನಲ್ಲೇ ವಿಜಯ್ ಸಂಭಾವನೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.