ಕತ್ತಲ ಕೋಣೆಯ ಪರದೆಯ ಮೇಲೆ ತನ್ನ ನಿಜ ಬ್ಯೂಟಿ ತೋರಿಸಿದ ಮೇಘಾ ಶೆಟ್ಟಿ

 | 
Ja
ನಮ್ಮ ಮಂಗಳೂರು ಪ್ರತಿಭೆ ಕನ್ನಡದ ಜೊತೆ ಜೊತೆಯಲಿ ಧಾರವಾಹಿ ಮೂಲಕ ಪರಿಚಯವಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಮೇಘಾ ಶೆಟ್ಟಿಯವರು ಅವರು ನಿರ್ಮಾಣಕ್ಕೂ ಇಳಿದಿರುವ ವಿಚಾರ ಗೊತ್ತಿದೆ. ಇದೀಗ ಅವರು ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಸೋಂಟ ತೋರಿಸಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಒಂದಷ್ಟು ಫೋಟೋಗಳ ಜೊತೆಗೆ ಚೆಂದ ವಿಡಿಯೋ ಹಂಚಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ. ಫ್ಯಾನ್ಸ್ ಇವರ ಸೊಂಟಕ್ಕೆ, ಅಂದಕ್ಕೆ ಮಾರು ಹೋಗಿದ್ದಾರೆ.
ವೃತ್ತಿ ಜೀವನವದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ನಟಿ ಮೇಘಾ ಶೆಟ್ಟಿಯವರ ಗ್ರಾಮಾಯಣ,ಪರೇಷನ್ ಲಂಡನ್ ಕೆಫೆ ತೆರೆಗೆ ಬರಲಿರುವ ಸಿನಿಮಾಗಳು. ಇವು ಸೇರಿ ಕೆಲವು ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿ ಇರುವ ನಟಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಡಿಯೋ, ಫೋಟೋ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ ರಂಜಿಸುತ್ತಾರೆ. ಈ ಬಾರಿ ತಿಳಿ ಗುಲಾಬಿ ಸೀರೆಯುಟ್ಟು ಬಳಕುವ ಬಳ್ಳಿಯಂತೆ ಸುಂದರ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಅವುಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ನೋಡಿದರೆ ಫ್ಯಾನ್ಸ್ 'ಮೇಘ ಸುಂದರಿ', ಯು ಆರ್ ಬ್ಯೂಟಿಫುಲ್ ಎಂದೆಲ್ಲ ಮೇಘ ಶೆಟ್ಟಿಯವರ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ. 'ಹುಡುಗೀರ್ ಸೊಂಟ ಮೋಟಿ ನೋಡಿ ನಮ್ಮ ಹುಡುಗ್ರ ಜೀವನ ಅರ್ಧ ಹಾಳಾಗೋಯ್ತು' ಎಂದು ಫ್ಯಾನ್ಸ್ ಕಮೆಂಟ್ ಹಾಕಿದ್ದಾರೆ. ನೀವು ನನ್ನ ನೆಚ್ಚಿನ ನಾಯಕ ನಟಿ, ಅನು ಬಂಗಾರಿ'' ಎಂದೆಲ್ಲ ಕರೆದು ತಮ್ ಅಭಿಮಾನ ಮೆರೆದಿದ್ದಾರೆ. ಸುಬ್ಬಿ, ಕ್ಯೂಟ್ ಎಂದು ಹಾರ್ಟ್, ಕಿಸ್ ಎಮೋಜಿ ಅನ್ನು ಕೆಲವರು ರವಾನಿಸಿದ್ದಾರೆ.
ಕೆಜಿಎಫ್ -2 ಮೆಹಬೂಬಾ ಹಾಡಿನೊಂದಿಗೆ ಅದೇ ಸೀರೆಯ ವಿಡಿಯೋವನ್ನು ಪೋಸ್ಟ್ ಮಾಡಿ 'ನಿನ್ನೊಂದಿಗೆ ನಾನು ಬರುವೆ,ಎದುರಾಗೆ ಬಂದರು ಜಗವೇ' ಎಂಬ ಶಿರ್ಷಿಕೆ ನೀಡಿದ್ದಾರೆ. ಕೇವಲ 13 ಗಂಟೆಗಳಲ್ಲಿ ವಿಡಿಯೋ 46 ಸಾವಿರಕ್ಕೂ ಹೆಚ್ಚು ವೀಕ್ಷಣೆ, ನೂರಾರು ಲೈಕ್ಸ್, ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಇನ್ನೂ ಫೋಟೋ ಪೋಸ್ಟ್‌ಗೆ 31.5 ಸಾವಿರ ಲೈಕ್ಸ್‌ಗಳು ಬಂದಿವೆ. 
ವ್ಯಾಯಾಮ ಮೂಲಕ ಆರೋಗ್ಯದ ಕಡೆಗೆ, ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ನಟಿ ಅನು ಸಿರಿಮನೆ ಅಂತಲೇ ಹೆಚ್ಚು ಫೇಮಸ್ಸು. ನಟಿ ಮೇಘಾ ಅವರು ಇತ್ತೀಚೆಗೆ ಧಾರವಾಹಿ ನಿರ್ಮಾಣಕ್ಕೆ ಇಳಿದಿದ್ದಾರೆ. 'ಗೌರಿ ಶಂಕರ' ಧಾರವಾಹಿ ನಿರ್ಮಿಸಿದ್ದ ಅವರು, ಸದ್ಯ 'ಮುದ್ದು ಸೊಸೆ' ಧಾರವಾಹಿಗೆ ಹಣ ಹೂಡಿದ್ದಾರೆ. ಇದೇ ಧಾರವಾಹಿಯಲ್ಲಿ ನಟಿ ಮೇಘಾ ಇತ್ತೀಚೆಗೆ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.