ಸಾಯುವ ಕೊನೆ ಕ್ಷಣ ಸಿಲ್ಕ್ ಸ್ಮಿತಾ ಅವರನ್ನು ಬಳಸಿಕೊಂಡಿದ್ದು ಯಾರು, ಕಣ್ಣೀರ ಕಥೆ

ರವಿಂಚಂದ್ರನ್ ನಟನೆಯ 'ಹಳ್ಳಿಮೇಷ್ಟ್ರು' ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಪಾತ್ರವನ್ನು ಇಂದಿಗೂ ಯಾರೂ ಮರೆತಿಲ್ಲ. ಹಳ್ಳಿ ಮೇಷ್ಟ್ರೇ ಹಾಡಿನಲ್ಲಿ ಕಾಣಿಸಿಕೊಂಡ ನಟಿ ಇಂದು ಇಲ್ಲ. ಆದರೆ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಮರೆಯಲು ಆಗುವುದೇ. ನಟನೆಯ ಮೂಲಕ ಮಾದಕ ನೋಟದಿಂದ ಯುವಕರ ಮನಗೆದ್ದ ಸ್ಮೀತಾ ಜನಿಸಿದ್ದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಎಲ್ಲೂರಿನಲ್ಲಿ 1960 ರ ಡಿಸೆಂಬರ್ 2ರಂದು ಸರಸಮ್ಮ ಮತ್ತು ರಾಮುಲುಗೆ ಮಗಳಾಗಿ ಜನಿಸಿದರು.
ಇವರು ಮೂಲ ವಿಜಯಲಕ್ಷ್ಮಿ ವಾಟ್ಲಪಟ್ಲಾ. ಬೆಳೆಯುತ್ತಾ ಬೆಳೆಯುತ್ತಾ ಆಕೆಯ ಸೌಂದರ್ಯಕ್ಕೆ ಮಾರುಹೋಗುತ್ತಿದ್ದರು. ಬಡತನದಿಂದ ವಿದ್ಯಾಭ್ಯಾಸ ಕೂಡ ಎಸ್ಎಸ್ಎಲ್ಸಿಗೆ ಮುಗಿದಿತ್ತು. ಕಪ್ಪು ಬಣ್ಣ ಇವಳದಾದ್ರು ಇವಳ ಅಂದ ಚಂದ ಮೈಮಾಟಕ್ಕೆ ಮಾರುಹೋಗದವರಿಲ್ಲ. ಬಡತನದ ಜೊತೆಗೆ ಚಿಕ್ಕವಯಸ್ಸಿನಲ್ಲಿ ಬಾಲ್ಯ ವಿವಾಹಕ್ಕೆ ಒಳಗಾದ ಈಕೆಗೆ ಕಷ್ಟಗಳ ಸುರಿಮಳೆಎದುರಾಗಿತ್ತು .
ಮದುವೆ ನಂತರ ಮನೆಯವರ ಕಿರುಕುಳಕ್ಕಾಗಿ ಮನೆ ತೊರೆದು ಊರು ಬಿಟ್ಟು ಚೆನ್ನೈನತ್ತ ಹೋಗಿದ್ದರು ಸಿಲ್ಕ್ ಸ್ಮಿತಾ. ಸಿನಿಮಾದ ಹುಚ್ಚು ಸಿಲ್ಕ್ ಸ್ಮಿತಾಗೆ ಮೊದಲಿನಿಂದಲೂ ಇತ್ತು. ದಿನ ಪೂರ್ತಿ ರೆಡಿಯೋ ಕೇಳುತ್ತಾ ಮುಳುಗಿಹೋಗುತ್ತಿದ್ದರು. ಇದನ್ನು ಗಂಡನ ಮನೆಯವರಿಗೆ ಸಹಿಸಲು ಆಗಲಿಲ್ಲ. ಈಕೆ ಮೇಲೆ ಅನುಮಾನ. ಪ್ರತಿದಿನ ಗಂಡ ಕುಡಿದು ಬಂದು ಸಿಲ್ಕ್ ಸ್ಮಿತಾ ಮೇಲೆ ಹಲ್ಲೆ ಮಾಡುತ್ತಿದ್ದರಂತೆ. ಪ್ರತಿ ಹಂತದಲ್ಲೂ ಸಿಲ್ಕ್ ಸ್ಮಿತಾ ಸೌಂದರ್ಯವೇ ಆಕೆಗೆ ಮುಳುವಾಗಿತ್ತು. ಗಂಡನ ಮನೆ ಬಿಟ್ಟು ಗೊತ್ತು ಗುರಿ ಇಲ್ಲದ ಚೆನ್ನೈಗೆ ಬಂದಿದ್ದರು ಸಿಲ್ಕ್.
ಇಲ್ಲಿ ವಿಧವೆಯೊಬ್ಬಳು ಸಿಲ್ಕ್ ಸ್ಮಿತಾಗೆ ಆಶ್ರಯ ನೀಡಿದ್ದರು. ಆಕೆಯ ಹೋಟೆಲ್ನಲ್ಲೇ ಕೆಲಸ ಮಾಡಿಕೊಂಡಿದ್ದರು ಸಿಲ್ಕ್. ಆದರೆ ಸಿನಿಮಾ ಮೇಲಿರುವ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ. ಅವಕಾಶಕ್ಕಾಗಿ ಅಲೆದಾಡುತ್ತಿದ್ದರು. ಹೋದಕಡೆಯಲ್ಲೆಲ್ಲಾ ಈಕೆಯ ಸೌಂದರ್ಯಕ್ಕೆ ಮರುಳಾಗುತ್ತಿದ್ದರು. ಎಲ್ಲರಿಗೂ ಈಕೆಯ ದೇಹದ ಮೇಲೆ ವ್ಯಾಮೋಹ ಮೂಡುತ್ತಿತ್ತು.
ತಾನೂ ಮೇಕಪ್ ತೊಟ್ಟು ಸ್ಟಾರ್ ಆಗಬೇಕೆಂದು ಅಂದುಕೊಂಡಿದ್ದ ಸಿಲ್ಕ್ ಸ್ಮಿತಾ ಮತ್ತೊಬ್ಬರಿಗೆ ಮೇಕಪ್ ಮಾಡುವ ಕೆಲಸಕ್ಕೆ ಸೇರಿಕೊಂಡಿದ್ದರು.
ಬೆಳಿಗ್ಗೆ ಶೂಟಿಂಗ್ ಇದ್ದಾಗೆಲ್ಲ ಮೇಕಪ್ ಕೆಲಸ. ರಾತ್ರಿಯಾದರೆ ಅಸಿಸ್ಟೆಂಟ್ ಡೈರೆಕ್ಟರ್, ನಿರ್ದೇಶಕರ ಜೊತೆ ಮಂಚ ಹಂಚಿಕೊಳ್ಳಬೇಕಿತ್ತು. ರಾತ್ರಿಯೆಲ್ಲ ಈಕೆ ಜೊತೆ ಇರುತ್ತಿದ್ದ ನಿರ್ದೇಶಕರು ಬೆಳಗ್ಗೆ ಆಗುತ್ತಿದ್ದಂತೆ ಈಕೆ ಮುಖ ಕೂಡ ನೋಡುತ್ತಿರಲಿಲ್ಲವಂತೆ. ಟಚಪ್ ಲೇಡಿ ಮೇಕಪ್ ಆರ್ಟಿಸ್ಟ್ ಆಗಿ ಸಿನಿಮಾ ಇಂಡಸ್ಟ್ರಿಗೆ ಪಾದ ಇಟ್ಟಿದ್ದ ಸ್ಮಿತಾಳನ್ನು ಗುರುತಿಸಿದ್ದು ಎವಿಎಂ ಸ್ಟುಡಿಯೋದ ಪ್ರಸಿದ್ಧ ನಿರ್ದೇಶಕ ವಿನು ಚಕ್ರವರ್ತಿ.
ಆಕೆಯ ಹಾವಭಾವ ನಡೆ ನುಡಿ ಗಮನಿಸಿ ಆಕೆಯನ್ನು ಈ ಲೋಕಕ್ಕೆ ಕರೆತಂದರು. ಈ ಸ್ಮಿತಾಳ ಮೂಲ ಹೆಸರು ವಿಜಯಲಕ್ಷ್ಮಿ ವಾಡ್ಲಾ ಪಟ್ಲ ನಂತರ ಸ್ಮಿತಾ ಎಂದು ಬದಲಾಗಿತ್ತು. ಈ ಸಿನಿಮಾದಲ್ಲಿ ಅವರು ಸಾರಾಯಿ ಅಂಗಡಿ ಮಾಲೀಕಳಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಈಕೆಯ ರೇಂಜ್ ಚೇಂಜ್ ಆಗಿತ್ತು. ಎಲ್ಲರೂ ಈಕೆಯನ್ನು ಸೆಕ್ಸ್ ಬಾಂಬ್ ಎಂದು ಕರೆಯಲು ಶುರು ಮಾಡಿದ್ದರು.
ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಪ್ರತಿಯೊಂದು ಭಾಷೆಯಲ್ಲೂ ಮಿಂಚಲು ಶುರು ಮಾಡಿದ್ದರು ಸಿಲ್ಕ್ ಸ್ಮಿತ್. ಈಕೆ ನಟಿಸಿದ್ದ ಬಹುತೇಕ ಸಿನಿಮಾಗಳು ಈಕೆಗೆ ಹೆಸರು ತಂದುಕೊಟ್ಟಿತ್ತು. ಚಿಕ್ಕ ಚಿಕ್ಕ ರೋಲ್ಗಳಿಗೆ ತೃಪ್ತಿ ಪಟ್ಟುಕೊಳ್ಳದ ಸಿಲ್ಕ್, ರಜನಿಕಾಂತ್, ಕಮಲ್ ಹಾಸನ್, ಮೋಹನ್ ಲಾಲ್ ಜೊತೆ ನಟಿಸಿದ್ದರು. ಇದಾದ ಬಳಿಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿಯಾಗಿದ್ದರು. ಗೆದ್ದ ಮಗ, ಪ್ರಚಂಡ ಕುಳ್ಳ, ಹಳ್ಳಿಮೇಷ್ಟ್ರು, ಅಳಿಮಯ್ಯ, ಚಿನ್ನ, ಲಾಕಪ್ ಡೆತ್ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹಂತ ಹಂತವಾಗಿ ಸಿಲ್ಕ್ ಸ್ಮಿತಾ ಬೆಳೆಯುತ್ತಾ ಹೋಗುತ್ತಾರೆ. ಆ ಕಾಲದಲ್ಲೇ ಒಂದು ಸಿನಿಮಾಗೆ 50 ಸಾವಿರ ಸಂಭಾವನೆ ಪಡೆಯುತ್ತಿದ್ದರಂತೆ. ದುಡ್ಡು ಹೆಚ್ಚಾದಗ ಈಕೆಯ ಸಹವಾಸ ಕೂಡ ಹೆಚ್ಚಾಗುತ್ತೆ. ಸ್ಟಾರ್ ನಟರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಾರೆ. ಸೂಪರ್ ಸ್ಟಾರ್ ಆಗಿದ್ದ ಕೃಷ್ಣ ಅವರ ಜೊತೆ ಸಿಲ್ಕ್ ಸ್ಮಿತಾ ಸಂಬಂಧ ಇತ್ತು. ಇನ್ನೂ ಕೆಲವರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು ಸಿಲ್ಕ್ ಸ್ಮಿತಾ. ಈಕೆಗೆ ಮನಸ್ಸಿನಲ್ಲಿ ಒಂದು ವಿಚಾರ ಕಾಡುತ್ತಿತ್ತು. ಎಲ್ಲರೂ ತನ್ನ ದೇಹಕ್ಕೆ ಆಸೆ ಪಡುತ್ತಾರೆ. ಆದರೆ, ಮನಸ್ಸಿನಲ್ಲಿ ಏನಿದೆ ಎಂದು ಯಾರು ತಿಳಿದುಕೊಳ್ಳುತ್ತಿಲ್ಲ ಎಂದು ಕೊರಗುತ್ತಿದ್ದರು.
ನೇರ ನಿಖರ ನುಡಿಯ ನಟಿ ಸಮಯ ಮತ್ತು ತನ್ನ ಕೆಲಸದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದರು. 1994ರ ಬಳಿಕ ಈಕೆಗೆ ಅವಕಾಶಗಳ ಸಿಕ್ಕಿದ್ದು ಬೆರಳಿಕೆಯಷ್ಟು. ಈಕೆಗೆ ಸ್ಪರ್ಧೆ ನೀಡುವಂತ ನಟಿಮಣಿಯರು ಬಂದಿದ್ದರು. ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿ ಸುಟ್ಟುಕೊಂಡಿದ್ದರು. ಇದೇ ವೇಳೆ ಸೂಪರ್ ಸ್ಟಾರ್ ನಟನ ಜೊತೆ ಲವ್ನಲ್ಲಿ ಬಿದ್ದಿದ್ದರು. ಅದೂ ಕೂಡ ಹೆಚ್ಚು ದಿನ ಇರಲಿಲ್ಲ.1995 ರಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸ್ಮಿತಾ ಮದ್ಯವ್ಯಸನಕ್ಕೆ ತಮ್ಮನ ಆಹ್ವಾನಿಸಿಕೊಂಡು ಬಿಟ್ಟಿದ್ದರು.
ಸ್ಮಿತಾಳ ಗೆಳತಿ ಅನುರಾಧ ಹಾಗೂ ರವಿಚಂದ್ರನ್ ಜೊತೆ ಇವರ ಮಾತು ಕೊನೆಯದಾಗಿತ್ತು. ಅನುರಾಧ ಸ್ಮಿತಾಳನ್ನು ಭೇಟಿಯಾಗುವ ಮೊದಲೇ ಸ್ಮಿತಾ ಅದಾಗಲೇ ಈ ಲೋಕಕ್ಕೆ ಗುಡ್ ಬೈ ಹೇಳಿದ್ರು. ಚೆನ್ನೈನ ಅವ್ರ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿರುವ ಇವರ ಶವ ಅನೇಕ ನಿಗೂಢತೆಗಳಿಗೆ ಕಾರಣವಾಗಿತ್ತು. ಇನ್ನೂ ಈಕೆಯ ಸಾವಿನ ರಹಸ್ಯ ಏನು ಎಂದು ಯಾರಿಗೂ ಗೊತ್ತಿಲ್ಲ. ಈಕೆಗೆ ಮೋಸ ಮಾಡಿದ ಆ ಸೂಪರ್ ಸ್ಟಾರ್ ಯಾರು ಅಂತ ಇಂದಿನವರೆಗೂ ಗೊತ್ತಿಲ್ಲ. ಹಲವು ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಸಿ ಮಿಂಚಿ ಮರೆಯಾದ ಸಿಲ್ಕ್ ಸ್ಮಿತಾಳ ಸಾವು ಇಂದಿಗೂ ನಿಗೂಢವಾಗಿದೆ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.