ಆಟದ ಸಮಯದಲ್ಲಿ ಪಾಂಡ್ಯ ರೋಹಿತ್ ನಡುವೆ ಕಿತ್ತಾಟ; ತ.ಲೆಕೆಡಿಸಿಕೊಂಡ ಕಾಮೆಂಟ್ರಿ ಮ್ಯಾನ್

 | 
Hdhsu

ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರು ಸೋಲಿನ ಆರಂಭ ಪಡೆದರು. ರವಿವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈಗೆ ಆರು ರನ್ ಸೋಲಾಗಿದೆ. ಗುಜರಾತ್ ನೀಡಿದ್ದ 169 ರನ್ ಗುರಿಯನ್ನು ಬೆನ್ನಟ್ಟಲು ಮುಂಬೈ ವಿಫಲವಾಯಿತು.

ಆಟದ ಉದ್ದಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಅವರನ್ನು ಟ್ರೋಲ್ ಮಾಡಲಾಯಿತು. ಡೀಪ್‌ನಲ್ಲಿ ಫೀಲ್ಡಿಂಗ್ ಮಾಡಲು ರೋಹಿತ್‌ ಗೆ ಹಾರ್ದಿಕ್ ಗೆ ಹೇಳಿದ ರೀತಿಯಿಂದ ಮುಂಬೈ ಹೊಸ ನಾಯಕ ಟ್ರೋಲ್ ಗೆ ಒಳಗಾದರು. ರೋಹಿತ್ ಹಿರಿತನಕ್ಕೆ ಮೈದಾನದಲ್ಲಿ ಗೌರವ ಕೊಡಲಿಲ್ಲ ಎಂದು ಹಾರ್ದಿಕ್‌ ಗೆ ರೋಹಿತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದರು.

ಮೈದಾನದಲ್ಲಿಯೂ ಹಾರ್ದಿಕ್ ವಿರುದ್ಧ ಅಭಿಮಾನಿಗಳು ಸಾಕಷ್ಟು ಕಿರುಚಾಡಿದರು. ಕಳೆದೆರಡು ಸೀಸನ್ ನಲ್ಲಿ ಗುಜರಾತ್ ಪರ ಆಡಿದ್ದ ಹಾರ್ದಿಕ್ ಈ ಬಾರಿ ಮುಂಬೈ ಪಾಳಯ ಸೇರಿದ್ದರು. ಅಚ್ಚರಿಯ ರೀತಿಯಲ್ಲಿ ರೋಹಿತ್ ಅವರನ್ನು ನಾಯಕತ್ವದಿಂದ ಇಳಿಸಿ ಹಾರ್ದಿಕ್ ಗೆ ಜವಾಬ್ದಾರಿ ನೀಡಲಾಗಿತ್ತು.

ಪಂದ್ಯ ಮುಗಿದ ಬಳಿಕ ರೋಹಿತ್ ಕೆಲವು ಮುಂಬೈ ಮತ್ತು ಗುಜರಾತ್ ಆಟಗಾರರೊಂದಿಗೆ ಮಾತನಾಡುತ್ತಿದ್ದಾಗ, ಹಾರ್ದಿಕ್ ಅವರು ರೋಹಿತ್ ರನ್ನು ಹಿಂದಿನಿಂದ ತಬ್ಬಿಕೊಳ್ಳಲು ಬಂದರು. ಆದರೆ ಇದು ಇಬ್ಬರು ಆಟಗಾರರ ನಡುವೆ ಅನಿಮೇಟೆಡ್ ವಾದಕ್ಕೆ ಕಾರಣವಾಗುತ್ತದೆ. ರೋಹಿತ್ ಹಾರ್ದಿಕ್ ಜೊತೆ ಅಸಮಾಧಾನದಿಂದ ಮಾತನಾಡುವುದನ್ನು ಕಾಣಬಹುದು.

ಜಸ್ಪ್ರೀತ್ ಬುಮ್ರಾ ಬೌಲಿಂಗ್​ ಮಾಡೋ ಮುನ್ನ ಫೀಲ್ಡಿಂಗ್‌ ಸೆಟ್‌ ಮಾಡಿದ್ರು. ಈ ಸಂದರ್ಭದಲ್ಲಿ ಬೂಮ್ರಾಗೆ ಹಾರ್ದಿಕ್​​​ ಸಲಹೆಗಳನ್ನು ನೀಡಿದ್ರೂ ನಿರ್ಲಕ್ಷ್ಯ ಮಾಡಿರೋ ಆರೋಪ ಕೇಳಿ ಬಂದಿದೆ. ಹಾರ್ದಿಕ್​​​ ಪಾಂಡ್ಯ ಫೀಲ್ಡಿಂಗ್​​ ಸೆಟ್​ ಮಾಡಲು ಬೂಮ್ರಾ ಬಿಡಲಿಲ್ಲ. ಇದು ಒಬ್ಬರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದ್ದು, ಆಗ ರೋಹಿತ್ ಶರ್ಮಾ ಮಧ್ಯ ಪ್ರವೇಶಿಸಿದರು. 

ರೋಹಿತ್ ಪ್ರವೇಶ ಮಾಡಿದ ಕೂಡಲೇ ಹಾರ್ದಿಕ್​​​ ಪಾಂಡ್ಯ ಅಲ್ಲಿಂದ ಕಾಲ್ಕಿತ್ತರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.