ಒಂದು ತಿಂಗಳ ಬಳಿಕ ಪ್ರೇಯಸಿಯ ಮಾತಿಗೆ ತಲೆಕೆಡಿಸಿಕೊಂಡ ಯುವಕ ಕಣ್ಣೀರು, ನ್ಯಾಯಾಲಯದಲ್ಲಿ ಏನಾಯಿತು ಗೊತ್ತಾ

 | 
Dj

ಈ ಪ್ರೀತಿ ಮಾಯೆ ಹುಷಾರು. ಅನ್ನೋದು ಸುಮ್ನೆ ಅಲ್ಲ ಸಮಾಜದಲ್ಲಿ ಪ್ರೀತಿಗಾಗಿ ಅನೇಕರು ವಿವಿಧ ರೀತಿಯಲ್ಲಿ ರಿಯಾಕ್ಟ್ ಆಗುತ್ತಿರುತ್ತಾರೆ. ತಾವು ಪ್ರೀತಿಸಿದ ವ್ಯಕ್ತಿ ತಮಗೆ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೆಲವರು ಕೊಲೆ ಸಹ ಮಾಡಿದ್ದಾರೆ. ಇದೀಗ ಕೇರಳದ ಯುವಕನೋರ್ವ ತನ್ನ ಪ್ರೇಯಸಿಗಾಗಿ ನ್ಯಾಯಾಲಯದಲ್ಲೇ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ನಡೆದಿದೆ.

ಕೇರಳದ ತ್ರಿಶೂರ್‍ ಜಿಲ್ಲೆ 31 ವರ್ಷದ ವಿಷ್ಣು ಎಂಬಾತ 23 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ಮನೆಯಲ್ಲಿ ಒಪ್ಪದ ಕಾರಣದಿಂದ ಅವರಿಬ್ಬರೂ ಓಡಿ ಹೋಗಿದ್ದರು. ಒಂದು ತಿಂಗಳಿನಿಂದ ಜೊತೆಗೆ ವಾಸ ಮಾಡುತ್ತಿದ್ದರು. ಇನ್ನೂ ಯುವತಿಯ ತಂದೆ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ತನ್ನ ಮಗಳನ್ನು ಅಕ್ರಮವಾಗಿ ಬಂಧನ ಮಾಡಿದ್ದಾರೆ. ಅವಳನ್ನು ಬಿಡಿಸಿಕೊಡುವಂತೆ ಮನವಿ ಮಾಡಿದ್ದರು. 

ದೂರಿನ ಮೇರೆಗೆ ಪೊಲೀಸರು ಇಬ್ಬರನ್ನೂ ಪತ್ತೆ ಮಾಡಿ ಕೋರ್ಟ್‌ನಲ್ಲಿ ಹಾಜರುಪಡಿಸಿದ್ದರು. ಈ ವೇಳೆ ಆ ಯುವತಿ ಪೋಷಕರೊಂದಿಗೆ ಹೋಗುವುದಾಗಿ ನಮ್ಮಿಬ್ಬರ ನಡುವೆ ಸ್ನೇಹ ಹಾಗೂ ಸಹೋದರತ್ವ ಭಾವನೆ ಬಿಟ್ಟರೇ ಬೇರೆ ಯಾವುದೇ ಭಾವನೆ ಇಲ್ಲ ಎಂದು ಆಕೆ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದರು. ಅಷ್ಟೇಅಲ್ಲದೇ ನಾನು ವಿಷ್ಣು ಜೊತೆಗೆ ಬಲವಂತದಿಂದ ಇದ್ದೆ. ನಾನು ಅವನನ್ನು ಬಿಟ್ಟು ಹೋದರೇ ಆತ್ಮಹತ್ಯೆ ಮಾಡಿಕೊಳ್ಳವುದಾಗಿ ಬೆದರಿಕೆ ಸಹ ಹಾಕಿದ್ದ. 

ಜೊತೆಗೆ ನನ್ನನ್ನೂ ಸಹ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ಕಾರಣದಿಂದ ನಾನು ಅವನೊಂದಿಗೆ ಇದ್ದೆ. ಇನ್ನೂ ಆತನಿಗೆ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, ಅವರ ಸಂಬಂಧದಲ್ಲಿ ಬಿರುಕು ಬಿದ್ದಿದೆ. ಆದ್ದರಿಂದ ಈಗ ನನ್ನ ಮದುವೆಯಾಗು ಎಂದು ಬೆದರಿಕೆ ಹಾಕುತ್ತಿದ್ದ ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ. ಆಕೆಯ ಹೇಳಿಕೆಯನ್ನು ಪಡೆದ ಬಳಿಕ ಆಕೆಯನ್ನು ಪೋಷಕರ ಜೊತೆಗೆ ಹೋಗಲು ಅವಕಾಶ ನೀಡಿದ್ದಾರೆ.

ನ್ಯಾಯಾಧೀಶರು ಯುವತಿಯನ್ನು ಪೋಷಕರೊಂದಿಗೆ ಹೋಗಲು ತಿಳಿಸಿದ ಕೂಡಲೇ ವಿಷ್ಣು ತನ್ನ ಜೇಬಿನಲ್ಲಿದ್ದ ಚಾಕುವಿನಿಂದ ನ್ಯಾಯಾಲಯದ ಆವರಣದಲ್ಲೇ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ ಎನ್ನಲಾಗಿದೆ. ಕತ್ತನ್ನು ಸಹ ಕೊಯ್ದುಕೊಳ್ಳಲು ಪ್ರಯತ್ನ ಮಾಡಿದ್ದನಂತೆ. ಆದರೆ ಸ್ಥಳದಲ್ಲಿದ್ದ ಪೊಲೀಸರನ್ನು ಆತನನ್ನು ತಡೆದಿದ್ದಾರೆ. ಕೂಡಲೇ ಗಾಯಗೊಂಡ ಯುವಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.