ಹಲವಾರು ಷರತ್ತುಗಳ ಬಳಿಕ ಬಿಗ್ ಬಾಸ್ ನಿರೂಪಣೆಗೆ ಸುದೀಪ್ ಅಸ್ತು, ಫಿದಾ ಆದ ಕನ್ನಡಿಗರು

 | 
Vjk
ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮ ಮುಗಿದು ಹೆಚ್ಚು ಕಮ್ಮಿ 5 ತಿಂಗಳು ಉರುಳಿವೆ. ಹೀಗಿರುವಾಗಲೇ ‘ಬಿಗ್ ಬಾಸ್ ಕನ್ನಡ 12’ ಶೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಹೋಗಬಹುದು ಅನ್ನೋದಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್‌ ಹೋಸ್ಟ್‌ ಆಗಿ ವಾಪಸ್ ಬರ್ತಾರಾ, ಇಲ್ವಾ ಎಂಬ ಡೌಟ್‌ ವೀಕ್ಷಕರಿಗೆ ಕಾಡುತ್ತಿದೆ. ಈ ಮಧ್ಯೆ ಹೊಸ ಸೀಸನ್‌ನ ಕಿಚ್ಚ ಸುದೀಪ್‌ ಅವರೇ ಹೋಸ್ಟ್ ಮಾಡ್ತಾರಂತೆ ಎಂಬ ಅಂತೆ - ಕಂತೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತಿದೆ. 
ಬಿಗ್ ಬಾಸ್‌ ಕನ್ನಡ 12 ಕಾರ್ಯಕ್ರಮದ ತೆರೆಹಿಂದಿನ ಕೆಲಸಗಳಿಗೆ ಚಾಲನೆ ಕೊಡಲಾಗಿದ್ಯಂತೆ. ಈ ಬಾರಿಯೂ ಹೋಸ್ಟ್ ಆಗಿ ಕಿಚ್ಚ ಸುದೀಪ್ ಅವರೇ ಮುಂದುವರೆಯುತ್ತಾರಂತೆ. ಇದಕ್ಕಾಗಿ ಕಿಚ್ಚ ಸುದೀಪ್‌ ಕೆಲವು ಕಂಡೀಷನ್‌ಗಳನ್ನ ಹಾಕಿದ್ದಾರೆ, ಅವೆಲ್ಲದಕ್ಕೂ ‘ಬಿಗ್ ಬಾಸ್’ ಆಯೋಜಕರು ಒಪ್ಪಿಕೊಂಡಿದ್ದಾರಂತೆ ಎಂದು ಕಿರುತೆರೆ ಲೋಕದಲ್ಲಿ ಗುಲ್ಲೆಬ್ಬಿದೆ.
ಬೇರೆ ಭಾಷೆಗಳಿಗಿಂತಲೂ ಕನ್ನಡದ ‘ಬಿಗ್ ಬಾಸ್‌’ ಒಂದು ಕೈ ಮೇಲಿರಬೇಕು, ಕನ್ನಡಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು, ವಿವಾದಾತ್ಮಕ ಸ್ಪರ್ಧಿಗಳು ಇರಬಾರದು ಅಂತ ಕಿಚ್ಚ ಸುದೀಪ್‌ ಕಂಡೀಷನ್‌ ಹಾಕಿದ್ದಾರಂತೆ. ಅದಕ್ಕೆ ‘ಬಿಗ್ ಬಾಸ್’ ಆಯೋಜಕರು ಓಕೆ ಅಂದಿದ್ದಾರಂತೆ. ಹಾಗಂತ ಗುಲ್ಲೋ ಗುಲ್ಲು.ಇದಿಷ್ಟು ಕಿರುತೆರೆ ಅಂಗಳಲ್ಲಿ ಕೇಳಿಬರುತ್ತಿರುವ ಗಾಸಿಪ್ ಅಷ್ಟೇ. ಇದೇ ವಿಚಾರ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಆಗ್ತಿದೆ. ಅಷ್ಟಕ್ಕೂ, ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಕೆಲಸಗಳಿಗೆ ಚಾಲನೆ ಸಿಕ್ಕಿದ್ಯೋ, ಇಲ್ವೋ ಎಂಬುದೇ ಪಕ್ಕಾ ಇಲ್ಲ.
ಕಿಚ್ಚ ಸುದೀಪ್‌ ವಾಪಸ್ ಬರುವ ಬಗ್ಗೆ ಅಭಿನಯ ಚಕ್ರವರ್ತಿ ಕಡೆಯಿಂದಾಗಲಿ, ಕಲರ್ಸ್ ಕನ್ನಡ ವಾಹಿನಿ ಕಡೆಯಿಂದಾಗಲಿ, ಬಿಗ್ ಬಾಸ್ ಆಯೋಜಕರ ಕಡೆಯಿಂದಾಗಲಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕಳೆದ ಸೀಸನ್‌ ನಡೆಯುವಾಗಲೇ.. ‘ಇದೇ ನನ್ನ ಕಡೆಯ ಸೀಸನ್‌’ ಅಂತ ಕಿಚ್ಚ ಸುದೀಪ್ ಘೋಷಿಸಿಬಿಟ್ಟಿದ್ದರು. ‘ಬಿಗ್ ಬಾಸ್‌’ಗಾಗಿ ಹೆಚ್ಚು ಸಮಯ ಮೀಸಲಿಡಬೇಕಿದೆ, ಸಿನಿಮಾ ಕಡೆಗೆ ಗಮನ ಹರಿಸಬೇಕಿದೆ ಅಂತಲೂ ಕಿಚ್ಚ ಸುದೀಪ್‌ ಹೇಳಿದ್ದರು. ಅಂದ್ಮೇಲೆ.. ಈಗ ನಿರ್ಧಾರ ಬದಲಿಸಿ ಹೊಸ ಸೀಸನ್‌ಗೆ ಕಿಚ್ಚ ಸುದೀಪ್‌ ಮರುಳುತ್ತಾರಾ? ಕಾದು ನೋಡೋಣ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.