ಮಹಿಳೆಯ ಸೀರೆ ಉಟ್ಟು ಬಸ್ಸಿನಲ್ಲಿ ಪ್ರಯಾಣಿಸಿದ ಯುವಕ, ಬಸ್ಸಿನ ಮಧ್ಯದಲ್ಲಿ ಆಟ ತುಂಟಾಟ

 | 
ಕಿ

ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸಿರುವುದರಿಂದ ದಿನಂಪ್ರತಿ ಒಂದೊಂದು ವಿಚಿತ್ರ ಘಟನೆಗಳು ನಡೆಯುತ್ತಿವೆ. ಅಂತೆಯೇ ಇದೀಗ ವ್ಯಕ್ತಿಯೊಬ್ಬ ಬುರ್ಕಾ ಧರಿಸಿ ಬಸ್ನಲ್ಲಿ ಫ್ರೀಯಾಗಿ ಪ್ರಯಾಣಿಸಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಹೌದು, ಮಹಿಳೆಯರಿಗೆ ಉಚಿತ ಪ್ರಯಾಣದ ಆಫರ್ ನಿಂದಾಗಿ ಪುರುಷರಿಗೆ ಬಸ್ ನಲ್ಲಿ ಸೀಟ್ ಸಿಗುತ್ತೋ ಇಲ್ವೋ ಅನ್ನೋ ಭಯ ಬೇರೆ. ಜೊತೆಗೆ ನಮಗೂ ಫ್ರೀ ಇದ್ದಿದ್ದರೆ ಚೆನ್ನಾಗಿರ್ತಿತ್ತಲ್ವಾ? ಎಂಬ ಕೊರಗು ಒಂದೆಡೆ. ಈ ನಡುವೆಯೂ ಪುರುಷರು ಬಸ್ ನಲ್ಲಿ ಪ್ರಯಾಣ ಮಾಡಲು ಹರಸಾಹಸ ಪಡುತ್ತಿದ್ದಾರೆ. ಅಂತೆಯೇ ಇದೀಗ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ, ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಜಾರಿಗೊಳಿಸಲಾದ ಶಕ್ತಿ ಯೋಜನೆಯ ಲಾಭ ಪಡೆಯಲು ಬುರ್ಖಾ ಧರಿಸಿ ಬಂದು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಹೌದು. ಬುರ್ಖಾ ಧರಿಸಿದ ವ್ಯಕ್ತಿಯನ್ನು ವೀರಭದ್ರಯ್ಯ ಎಂದು ಗುರುತಿಸಲಾಗಿದ್ದು, ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬಸ್ ನಿಲ್ದಾಣದಲ್ಲಿ ಈ ಬುರ್ಖಾ ಹಾಕಿದ ಆಸಾಮಿ ಪತ್ತೆಯಾಗಿದ್ದಾನೆ. ಮೂಲತಃ ವಿಜಯಪುರ ಜಿಲ್ಲೆ ನಿವಾಸಿಯಾಗಿರೋ ವೀರಭದ್ರಯ್ಯ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬುರ್ಖಾ ಧರಿಸಿ ಉಚಿತ ಪ್ರಯಾಣ ಮಾಡಿಕೊಂಡು ಬಂದಿದ್ದಾನೆ. 

ವಿಚಿತ್ರ ಅಂದರೆ ಬುರ್ಖಾ ಧರಿಸಿದ್ದ ವೀರಭದ್ರಯ್ಯನ ಬಳಿ ಮಹಿಳೆಯರ ಆಧಾರ್‌ ಕಾರ್ಡ್‌ ಕೂಡ ಪತ್ತೆಯಾಗಿದೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಫ್ರೀ ಬಸ್ ಅವಾಂತರದಲ್ಲಿ ಇನ್ನು ಏನೇನು ನೋಡಬೇಕೋ ತಿಳಿಯದಾಗಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.