ಕೋಪ ಬಿಟ್ಟು ಮತ್ತೆ ಒಂದಾದ ನಟ ದಶ೯ನ್ ಹಾಗೂ ದೊಡ್ಮನೆ ಕುಟುಂಬ, ಸಿನಿ ಅಭಿಮಾನಿಗಳಲ್ಲಿ ಸಂಭ್ರಮ

 | 
Gf

 ಇಂದು ಇಡೀ ಕನ್ನಡ ಚಿತ್ರರಂಗ ಮತ್ತು ಕನ್ನಡ ಸಿನಿಮಾ ಪ್ರೇಮಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಅದರಲ್ಲೂ ಕನ್ನಡಿಗರ ಸಿನಿಮಾ ಕ್ಷೇತ್ರ ಛಿದ್ರವಾಗುತ್ತಿದೆ ಎಂಬ ಆರೋಪ, ಪ್ರತ್ಯಾರೋಪಕ್ಕೆ ಇಂದು ಸಡನ್ ಬ್ರೇಕ್ ಬಿದ್ದಿದೆ. ಫ್ಯಾನ್ಸ್ ಪಾಲಿನ ಪ್ರೀತಿಯ ನಟ ಡಿ-ಬಾಸ್, ದೊಡ್ಮನೆಯ ಯುವ ಕುಡಿ ಯುವ ರಾಜ್‌ಕುಮಾರ್‌ಗೆ ಪ್ರೀತಿಯ 'ಅಪ್ಪು'ಗೆ ಕೊಟ್ಟಿದ್ದಾರೆ. ಈ ಮೂಲಕ ಕನ್ನಡಿಗರ ಸಿನಿಮಾ ಜಗತ್ತಿನ ಒಗ್ಗಟ್ಟು, ಅಭಿಮಾನಿ ದೇವರುಗಳಿಗೆ ಸರ್ಪ್ರೈಸ್ ಕೊಟ್ಟಿದೆ.

ಹೌದು, ಕನ್ನಡ ಚಿತ್ರರಂಗಕ್ಕೆ ಇನ್ನೇನು ಶತಕ ತುಂಬಲಿದೆ. ಶತಮಾನೋತ್ಸವ ಸಂಭ್ರಮದ ಸಮೀಪದಲ್ಲೇ ಚಿತ್ರರಂಗದಲ್ಲಿ ಒಂದಷ್ಟು ಗೊಂದಲ ಎದ್ದಿತ್ತು. ಅಭಿಮಾನಿಗಳ ನಡುವೆಯು ಕಿಡಿ ಹೊತ್ತಿತ್ತು. ಆದ್ರೆ ಅದೆಲ್ಲಾ ಇಂದು ಆರಿ ಹೋಗಿದೆ ಪ್ರೀತಿಯ ತಂಗಾಳಿ ಬೀಸಿಬಿಟ್ಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಯುವ' ಸೆಟ್‌ಗೆ ಭೇಟಿ ನೀಡಿದ್ದಾರೆ. ಯುವ ರಾಜ್‌ಕುಮಾರ್ ಸೇರಿದಂತೆ ಇಡೀ ಚಿತ್ರತಂಡದ ಜೊತೆ ಮಾತನಾಡಿದ್ದಾರೆ. ಈ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು ಫ್ಯಾನ್ಸ್ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಂದು ಇದೇ ಫೋಟೋಗಳು ಹವಾ ಎಬ್ಬಿಸಿವೆ.

ಎಚ್‌ಎಂಟಿ ಫ್ಯಾಕ್ಟರಿಯಲ್ಲಿ 'ಯುವ' ಸಿನಿಮಾ ಚಿತ್ರೀಕರಣ ಅಬ್ಬರದಿಂದ ಸಾಗಿದೆ. ಸಿನಿಮಾ ಸೆಟ್‌ಗೆ ಇಂದು ಡಿ-ಬಾಸ್ ಸರ್ಪ್ರೈಸ್ ನೀಡಿದ್ರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರವಲ್ಲ ಇಡೀ 'ಕಾಟೇರ' ಚಿತ್ರತಂಡ ಎಂಟ್ರಿ ಕೊಟ್ಟಿತ್ತು. ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಇಬ್ಬರೂ ಯುವ ರಾಜ್‌ಕುಮಾರ್, ಸಂತೋಷ್‌ ಆನಂದ್‌ ರಾಮ್ & ಸಪ್ತಮಿ ಗೌಡ ಸೇರಿದಂತೆ ಸಿನಿಮಾ ತಂಡದ ಜೊತೆ ಕೆಲ ಹೊತ್ತು ಮಾತನಾಡಿದ್ದಾರೆ. ಇದೀಗ ಈ 'ಉತ್ತಮ ಬೆಳವಣಿಗೆ' ಬಗ್ಗೆ ಭರ್ಜರಿ ಕಮೆಂಟ್ಸ್ ಬರುತ್ತಿವೆ. ಹಾಗೇ ಕನ್ನಡ ಸಿನಿಮಾ ಇಂಡಸ್ಟ್ರಿಯ ಒಗ್ಗಟ್ಟನ್ನು ಸಾರಿ ಸಾರಿ ಹೇಳಿದಂತಿದೆ.

ಇನ್ನು ದೊಡ್ಮನೆ ಯುವ ಕುಡಿ ಯುವ ರಾಜ್‌ಕುಮಾರ್ ಅವರ ಮೊದಲ ಸಿನಿಮಾ ಭರ್ಜರಿ ತಯಾರಿಯೊಂದಿಗೆ ಸಿದ್ಧವಾಗುತ್ತಿದೆ. ಯುವ ಮೊದಲ ಸಿನಿಮಾಗೆ ಹೊಂಬಾಳೆ ಸಂಸ್ಥೆಯೇ ಬಂಡವಾಳ ಹೂಡಿದೆ. 'ಯುವ' ಸಿನಿಮಾ ಸೆಟ್ಟೇರಿದ ದಿನದಿಂದ ಹೆಚ್‌ಎಂಟಿ ಫ್ಯಾಕ್ಟರಿಯಲ್ಲಿ ಸೆಟ್‌ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಯುವ ಈ ಸಿನಿಮಾ ಮೂಲಕ ಯುವ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಸಂತೋಷ್ ಆನಂದ್‌ ರಾಮ್ ನಿರ್ದೇಶನದ ಚಿತ್ರದಲ್ಲಿ 'ಕಾಂತಾರ' ಸಿನಿಮಾ ಬೆಡಗಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ನಟ ದರ್ಶನ್ ಕೂಡ ಸಿನಿಮಾ ಸೆಟ್‌ಗೆ ಭೇಟಿ ನೀಡಿ ಖುಷಿ ಖುಷಿಯಾಗಿ ಮಾತನಾಡಿದ್ದಾರೆ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.