ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಲು 'ಅದು' ದಪ್ಪ ಇರಬೇಕು ಅಂತಾರೆ, ಕನ್ನಡ ಚಿತ್ರರಂಗದ ಬಗ್ಗೆ ಮೌನಮುರಿದ ನಟಿ
Jun 2, 2025, 10:32 IST
|

ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯದ ಕುರಿತು ಮಾತಾಡುವ ಮೂಲಕ ಅನೇಕರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳು ಇಲ್ಲಾಗಿವೆ. ಹೀಗಾಗಿಯೇ ಲಿಂಗ, ಬಣ್ಣ, ಜನಾಂಗದಂತೆ ದೇಹದ ಗಾತ್ರ ಪರಿಗಣಿಸಿ ಮಾಡಲಾಗುವ ಈ ತಾರತಮ್ಯದ ಕುರಿತು ಇಲ್ಲಿಯವರೆಗೆ ಹಲವರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ದೇಹ ರಚನೆಯ ಕುರಿತು ಎದುರಾದ ಟೀಕೆಗಳ ಕುರಿತು ಹಲವರು ಮಾತನಾಡಿದ್ದಾರೆ. ಉದಾಹರಣೆಗೆ ಸುರ್ವೀನ್ ಚಾವ್ಲಾ.
ಹೌದು, ಸುರ್ವೀನ್ ಚಾವ್ಲಾ.. ಡಾ.ಶಿವರಾಜ್ ಕುಮಾರ್ ಅಭಿನಯದ 'ಪರಮೇಶ ಪಾನವಾಲಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ಆ ನಂತರ ತೆಲುಗಿನ 'ರಾಜು ಮಹಾರಾಜು' ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದ ಸುರ್ವೀನ್ ಪಂಜಾಬಿ ಮತ್ತು ಹಿಂದಿ ಭಾಷೆಯಲ್ಲಿ ಮಿಂಚಿದ್ದೇ ಹೆಚ್ಚು. ಅದರಲ್ಲಿಯೂ ಹೇಟ್ ಸ್ಟೋರಿ 2 ಇವರಿಗೆ ಒಳ್ಳೆಯ ಹೆಸರು ತಂದು ಕೊಡ್ತು.
ಇಂಥಾ ಸುರ್ವೀನ್ ಚಾವ್ಲಾ ಸದ್ಯ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮಗಾದ ಅನುಭವದ ಕುರಿತು ಮಾತನಾಡಿದ್ದಾರೆ. ಸೌತ್ ಇಂಡಸ್ಟ್ರೀಯಲ್ಲಿ ಮಿಂಚಬೇಕು ಅಂದರೆ ಎಲ್ಲ ದಪ್ಪಗಿರಬೇಕು ಎಂದು ಹೇಳಿದ್ದಾರೆ. ಹೌಟರ್ ಪ್ಲೈಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸುರ್ವೀನ್ ಚಾವ್ಲಾ ದಕ್ಷಿಣ ಭಾರತೀಯ ಚಿತ್ರರಂಗದವರಿಗೆ ದಪ್ಪ ಇರಬೇಕು ಎಂದು ಹೇಳಿದ್ದಾರೆ.ಸಂದರ್ಶನದಲ್ಲಿ ನೀವು ತುಂಬಾ ತೆಳ್ಳಗಿದ್ದೀರಿ, ನಿಮ್ಮ ದೇಹದ ಯಾವ ಭಾಗ ಕೂಡ ಪುಟಿಯುವುದಿಲ್ಲ ಎಂದು ನನಗೆ ಹೇಳಿದ್ದರು ಎಂದಿರುವ ಸುರ್ವೀನ್ ಈಗ ಆದರೆ ಈ ರೀತಿ ಮಾತನಾಡಲು ಸ್ವಲ್ಪ ಯೋಚನೆ ಮಾಡ್ತಾರೆ, ಆದರೆ.. ನಾನು ಸೌತ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ನನ್ನ ದೇಹದ ಕುರಿತು ನನ್ನ ಮುಖಕ್ಕೆ ಹೊಡೆದಂತೆ ಕಾಮೆಂಟ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ನನ್ನ ದೇಹಾಕೃತಿಯನ್ನು ಟೀಕಿಸಿದ್ದಕ್ಕೆ ನಾನು ಹಲವು ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದೇನೆ ಎಂದು ಕೂಡ ಹೇಳಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023