ಗಂಡ ಇಲ್ಲ ಎನ್ನುವ ಕೊರಗು ನನ್ನ ಕಾಡುತ್ತಿದೆ, ನಟಿ ವಿಜಯಲಕ್ಷ್ಮಿ ಭಾವುಕ
Oct 22, 2024, 19:31 IST
|
ನಟಿ ವಿಜಯಲಕ್ಷ್ಮೀ ಎಂದೊಡನೆ ತಟ್ ಅಂತ ನೆನಪಾಗಲಿಕ್ಕಿಲ್ಲ. ಹೌದು ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಬಹುಭಾಷಾ ನಟಿ ವಿಜಯಲಕ್ಷ್ಮಿಇತ್ತೀಚೆಗೆ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ತಮ್ಮ ಜೀವನ ಅಕ್ಕನ ಜೀವನದ ಬಗ್ಗೆ ಆಗಾಗ ನೋವು ತೋಡಿಕೊಳ್ಳುವ ವಿಜಯಲಕ್ಷ್ಮಿ ಅಕ್ಕನ ಮದುವೆ ಸಮಯದಲ್ಲಿ ಏನಾಯ್ತು..? ಬದುಕು ಯಾಕೆ ಹೀಗಾಯ್ತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
ಹಬ್ಬ ಚಿತ್ರದ ಶೂಟಿಂಗ್ ಸಮಯದಲ್ಲಿ ನಾನು ಜಯಪ್ರದಾ ತುಂಬಾ ಕ್ಲೋಸ್ ಆಗಿದ್ದೇವು. ಹೀಗಾಗಿ ಒಂದು ದಿನ ಜಯಪ್ರದಾ ಜೊತೆ ಮಾತನಾಡುವಾಗ ಕೇಳಿದರು. ಹಬ್ಬ ಚಿತ್ರದಲ್ಲಿ ನನ್ನದು ರಾಮ್ ಕುಮಾರ್ ಅವರ ಹಾಡಿನ ಶೂಟಿಂಗ್ ಇತ್ತು ಆ ಸಮಯದಲ್ಲಿ ಕೇಳಿದರು. ನಮ್ಮ ಅಣ್ಣನಿಗೆ ಇನ್ನೂ ಮದುವೆ ಆಗಿಲ್ಲ. ಎಲ್ಲರೂ ನಿಮ್ಮ ಅಕ್ಕನ ಬಗ್ಗೆ ಹೇಳಿದರು, ನಿಮ್ಮಕ್ಕ ಒಳ್ಳೆ ಹುಡುಗಿ ಎಂದು ವಿಷ್ಣು ಸರ್ ಹೇಳಿದರು ಎಂದರು.
ಅವರು ತೆಲುಗು ನಾಯ್ಡು, ನಾವು ಕರ್ನಾಟಕದ ನಾಯ್ಡು ಹೀಗಾಗಿ ಹೈದರಾಬಾದ್‌ನಲ್ಲೇ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟರು. ಮದುವೆಗೆ ನಾನು ಕೂಡ ದುಡಿದು ಹಣ ಹಾಕಿದ್ದೆ. ಅವರು ರಿಸೆಪಕ್ಷನ್ ಮಾಡಿದರು ನಾವು ಮದುವೆ ಮಾಡಿಕೊಟ್ಟೆವು' ಎಂದು ಅಕ್ಕನ ಬದುಕಿನ ದುರಂತರದ ಬಗ್ಗೆ ವಿವರಿಸಿದ ವಿಜಯಲಕ್ಷ್ಮಿ ಒಂದು ಹೆಣ್ಣಿಗೆ ಗಂಡ, ತಾಳಿ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಕೂಡ ಮಾತನಾಡಿದ್ದಾರೆ.
ಪ್ರತಿಯೊಂದು ಹೆಣ್ಣು ಗಂಡನು ಬಿಟ್ಟು ಬರಬೇಕು ಅಂತಲೋ ಆ ಜೀವನ ಬಿಟ್ಟು ಬರಬೇಕೋ ಅಂತಲೋ ಯಾವ ಹೆಣ್ಣು ಬಯಸಲ್ಲ. ನಾನು ಎಲ್ಲಾ ಮಹಿಳೆಯರ ದೃಷ್ಟಿಯಿಂಧ ಹೇಳುತ್ತಿದ್ದೇನೆ. ಅವರು ತಮ್ಮ ತಾಳಿ, ಗಂಡ, ಆ ಕುಂಕುಮ, ಹೂವು ಅವರಿಗೆ ಅದು ದೇವರಾಗಿರುತ್ತದೆ. ಏನೇ ಸಾಧನೆ ಮಾಡಿದರೂ ಕೂಡ ತಾಳಿ, ಕುಂಕುಮ ದೇವರಾಗಿರುತ್ತದೆ.
ನಾನು ಕೂಡ ಎಷ್ಟು ಸಾಧನೆ ಮಾಡಿದ್ದೇನೆ. ನನಗೂ ಆ ಕೊರತೆ ಇದೆ. ನನ್ನ ಗಂಡ ಅಂತಾ ಒಬ್ಬರು ಇಲ್ಲ ನನಗೆ. ನನ್ನ ತಾಳಿ ಇಲ್ಲ. ನನ್ನ ಕುಂಕುಮ ಇಲ್ಲ. ನನಗೆ ಆ ಕೊರತೆ ಇದೆ. ಯಾರೋ ಒಬ್ಬರೂ ಎಲ್ಲಾ ಪದ್ಧತಿಯನ್ನು ಮೀರಿ ಹೊರಗೆ ಬರುತ್ತಾರೆ ಎಂದರೆ ಅದು ಅವರ ಜೀವನಕ್ಕೆ ಎಷ್ಟು ಕೆಟ್ಟದಾಗಿ ಕಂಡಿರಬಹುದು. ಅಲ್ಲಿ ನೆಮ್ಮದಿ ಇಲ್ಲ ಎಂದು ಹೊರಗಡೆ ಬಂದು ಬಿಡುತ್ತಾರೆ ಎಂದು ಹೇಳಿದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.