ಬಹುದಿನಗಳ ಬಳಿಕ ಒಮ್ಮೆಲೇ ಸಿ ಡಿದೆದ್ದ ಸ್ನೇಹಿತ್ ಗೌಡ;

 | 
Ye

ನಟ, ಮಾಡೆಲ್ ಸ್ನೇಹಿತ್ ಗೌಡ ಬಿಗ್ ಬಾಸ್ ಸೀಸನ್ 10ರಲ್ಲಿ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಅಷ್ಟೇ ಅಲ್ಲದೆ, ಸೀಸನ್’ನ ಮೊದಲ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ರು ಸ್ನೇಹಿತ್. ಆದರೆ ಕೆಲವೊಂದು ಎಡವಟ್ಟು, ಪಕ್ಷಪಾತ ಧೋರಣೆಯಿಂದ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದ ಸ್ನೇಹಿತ್ ಇದೀಗ ದೊಡ್ಮನೆಯಿಂದ ಹೊರಬಂದಿದ್ದಾರೆ.

ಸ್ನೇಹಿತ್ ಅಭಿನಯದ ಮೊದಲ ಸಿನಿಮಾ ಚಿರವಾದ ನೆನಪು 2016 ರಲ್ಲಿ ಬಿಡುಗಡೆಯಾಗಿತ್ತು. ಅಂದಹಾಗೆ ಸ್ನೇಹಿತ್ ಹಿನ್ನೆಲೆ ತಿಳಿಯುವುದಾದರೆ, 19 ಆಗಸ್ಟ್ 1995 ರಂದು ಬೆಂಗಳೂರಿನಲ್ಲಿ ಜನಿಸಿದ ಸ್ನೇಹಿತ್, ವಿದ್ಯಾಭ್ಯಾಸವನ್ನೂ ಸಹ ರಾಜ್ಯ ರಾಜಧಾನಿಯಲ್ಲಿ ಪೂರೈಸಿದರು. ಸ್ನೇಹಿತ್ ಗೌಡ ಅವರ ತಂದೆಯ ಹೆಸರು ಮಾಯಾತೆರೆ ಸುರೇಶ್. ಇವರು ಕನ್ನಡ ಚಲನಚಿತ್ರ ನಿರ್ಮಾಪಕರು.

ಸ್ನೇಹಿತ್ ಗೌಡ ಅವರ ತಮ್ಮ ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಸೇಂಟ್ ಕ್ಲಾರೆಟ್ ಶಾಲೆಯಲ್ಲಿ ಪೂರ್ಣಗೊಳಿಸಿದರೆ, ಪದವಿ ಶಿಕ್ಷಣವನ್ನು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪೂರೈಸಿದರು. ಇನ್ನು ಸ್ನೇಹಿತ್ ಗೌಡ ಅಭಿನಯಿಸಿದ ಮೊದಲ ಟಿವಿ ಶೋ ನಮ್ಮನೆ ಯುವರಾಣಿ. ಇದರಲ್ಲಿ ಅವರು ಪ್ರಣವ್ ರಾಜಗುರು ಆಗಿ ಕಾಣಿಸಿಕೊಂಡಿದ್ದರು. 

ಅಂದಹಾಗೆ ಸ್ನೇಹಿತ್ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 10 ರಿಂದ ಕಳೆದ ದಿನವಷ್ಟೇ ಹೊರಬಂದಿದ್ದಾರೆ. ಇನ್ನು ಕೆಲ ಮೂಲಗಳ ಪ್ರಕಾರ ಸ್ನೇಹಿತ್ ಪ್ರತೀ ವಾರಕ್ಕೆ 2 ಲಕ್ಷ ರೂ ಸಂಭಾವನೆ ಪಡೆಯುತ್ತಿದ್ದರು, ಈ ಹಿನ್ನೆಲೆಯಲ್ಲಿ 64 ದಿನಕ್ಕೆ ಅಂದರೆ 9 ವಾರಗಳಿಗೆ ಸ್ನೇಹಿತ್ ಬರೋಬ್ಬರಿ 18 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ. 

ಇತ್ತೀಚಿಗೆ ಅವರ ಸ್ನೇಹಿತೆಯ ಕಾರಣದಿಂದ ಟ್ರೊಲ್ ಆಗ್ತಿದ್ದಾರೆ. ಟ್ರೊಲ್ ಮಾಡುವ ಮುನ್ನ ಇನ್ನೊಬ್ಬರ ಸ್ಥಿತಿಯು ಬಗ್ಗೆ ಯೋಚಿಸಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.