ಶಾಂತಿ ಪ್ರಿಯರ ಮತ್ತೊಂದು ಕಚಡ ಕೆಲಸ, ಇಡೀ ದೇಶವೇ ಅ.ಸಹ್ಯ ಪಡುತ್ತಿದೆ

 | 
Gf g

ಪ್ಯಾಲೆಸ್ತೀನ್‌ನ ಹಮಾಸ್ ಭಯೋತ್ಪಾದಕರು ಇಸ್ರೇಲ್‌ನಲ್ಲಿ ವಿಧ್ವಂಸಕ ಕೃತ್ಯಗಳನ್ನು ಮರೆಯುತ್ತಿದ್ದಾರೆ. ಕ್ಷಿಪಣಿ ದಾಳಿಯ ನಂತರ ಹಮಾಸ್ ಉಗ್ರರು ಗಡಿಗೆ ಹೊಂದಿಕೊಂಡಿರುವ ಹಲವು ಪ್ರದೇಶಗಳನ್ನು ಪ್ರವೇಶಿಸಿದ್ದಾರೆ. ಹಮಾಸ್ ಭಯೋತ್ಪಾದಕರು ಇಸ್ರೇಲ್ ಜನರನ್ನು ಕೊಂದಿದ್ದಲ್ಲದೆ, ಕೆಲವೆಡೆ ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. 

ಈ ಮಧ್ಯೆ ಹಮಾಸ್ ಭಯೋತ್ಪಾದಕರು ಜಪಾನ್ ಮೂಲದ ಯುವತಿಯೊಬ್ಬಳನ್ನು ಅಪಹರಿಸಿ ನಗ್ನವಾಗಿ ಪರೇಡ್ ನಡೆಸಿದ ಅಮಾನವೀಯ ಘಟನೆ ನಡೆದಿದೆ.
ಯುವತಿಯೊಬ್ಬಳ ಬೆತ್ತಲೆ ದೇಹವನ್ನು ಪಿಕಪ್ ಟ್ರಕ್‌ನ ಹಿಂಬದಿಯಲ್ಲಿ ಕಟ್ಟಿ ಬಿಗಿದು ಇರಿಸಿಕೊಂಡು ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದು, ಆಕೆಯ ದೇಹದ ಮೇಲೆ ಇಬ್ಬರು ದಢೂತಿ ದೇಹದ ಪುರುಷರು ಕೂತಿದ್ದಾರೆ.

ಹಮಾಸ್ ಉಗ್ರರು ಆರಂಭದಲ್ಲಿ ಅದು ಇಸ್ರೇಲ್‌ನ ಮಹಿಳಾ ಸೈನಿಕರೊಬ್ಬರ ದೇಹ ಎಂದು ಹೇಳಿಕೊಂಡಿದ್ದಾಗಿ ವಾಹಿನಿಯೊಂದು ವರದಿ ಮಾಡಿತ್ತು. ಆದರೆ ಆ ವಿಡಿಯೋದಲ್ಲಿ ಇರುವ ಮಹಿಳೆ ತನ್ನ ಸಹೋದರಿ ಶಾನಿ ಲೌಕ್ ಎಂದು ಆದಿ ಲೌಕ್ ಟ್ವಿಟ್ಟರ್‌ನಲ್ಲಿ ಖಚಿತಪಡಿಸಿದ್ದಾರೆ. ಶನಿವಾರ ಬಳಿಗ್ಗೆ ಇಸ್ರೇಲ್ ಗಡಿ ಭಾಗದೊಳಗೆ ಹಮಾಸ್ ಉಗ್ರರು ನುಸುಳಿ ದಾಳಿ ನಡೆಸಿ, ಪಟ್ಟಣಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಸಂದರ್ಭದಿಂದ ಶಾನಿ ಲೌಕ್ ನಾಪತ್ತೆಯಾಗಿದ್ದಾರೆ ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

ವಿಡಿಯೋದಲ್ಲಿ ಹಮಾಸ್ ಉಗ್ರರು ಬೆತ್ತಲೆ ಮೆರವಣಿಗೆ ನಡೆಸಿರುವುದು ಶಾನಿ ಲೌಕ್ ಅವರನ್ನು ಎಂದು ದೃಢಪಡಿಸಿರುವ ತೊಮಾಸಿನಾ ವೀನ್‌ಟ್ರಾಬ್ ಲೌಕ್, ಶಾನಿ ಕುರಿತು ಸಕಾರಾತ್ಮಕ ಸುದ್ದಿ ಬರಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಕಿಬ್ಬುಟ್ಸ್ ರೀಮ್ ಸಮೀಪ ಸಂಗೀತ ಉತ್ಸವದಲ್ಲಿ ನೆರೆದಿದ್ದ ಜನರ ಮೇಲೆ ರಾಕೆಟ್‌ಗಳನ್ನು ಹಾರಿಸಿದ ಉಗ್ರರು, ಗುಂಡಿನ ದಾಳಿ ನಡೆಸಿದ್ದರು. ಅಲ್ಲಿದ್ದ ನೋವಾ ಅರ್ಗಮಾನಿ ಎಂಬ ಮಹಿಳೆಯನ್ನು ಎಳೆದೊಯ್ದಿದ್ದರು.

ಶಾನಿ ಲೌಕ್‌ ಅವರ ತಾಯಿಯ ವಿಡಿಯೋ ಸಂದೇಶವನ್ನು ವೈಸ್‌ಗ್ರಾಡ್ 24 ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದೆ. ಅದರಲ್ಲಿ ಅವರು ತಮ್ಮ ಮಗಳ ಗುರುತನ್ನು ದೃಢಪಡಿಸಿದ್ದಾರೆ. ಆಕೆ ಈಗ ಎಲ್ಲಿದ್ದಾಳೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ.

ಶಾನಿ ಲೌಕ್‌ ಮೇಲೆ ಹಮಾಸ್ ಉಗ್ರರ ಮಾಡಿದ ಕ್ರೌರ್ಯದ ವಿಡಿಯೋಗಳು ಹರಿದಾಡುತ್ತಿದ್ದು, ಉಗ್ರರು ಕುಳಿತ ವಾಹನದ ಸುತ್ತಲಿನಿಂದ ಜನರು ಕಿರುಚುವುದು, ಅಳುವುದು ಮಾಡುತ್ತಿದ್ದರೆ, ಉಗ್ರರು ಅವರನ್ನು ಅಣಕಿಸುತ್ತಾ ಮಹಿಳೆಯ ದೇಹದ ಮೇಲೆ ಉಗಿಯುವುದು ಕಾಣಿಸಿದೆ. ಅದನ್ನೆಲ್ಲ ಕಂಡ ತಾಯಿಯು ಅವಳ ದೇಹವನ್ನಾದರು ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.