ವೈಷ್ಣವಿ ಗೌಡ ಮದುವೆ 'ಗೌಡ ಸಮುದಾಯದಂತೆ' ನಡೆಯಲೇಇಲ್ಲ, ಬೇಸರ ವ್ಯಕ್ತಪಡಿಸಿದ ಕನ್ನಡಿಗರು

 | 
ರಕಗ
ಸೀರಿಯಲ್ ನಟಿ ವೈಷ್ಣವಿ ಗೌಡ ಅವರು ಸಪ್ತಪದಿ ತುಳಿದಿದ್ದಾರೆ. ಅನುಕೂಲ್ ಮಿಶ್ರಾ ಜೊತೆ ಅವರ ಮದುವೆ ನೆರವೇರಿದೆ. ಈ ವಿವಾಹ ಸಮಾರಂಭಕ್ಕೆ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಅನೇಕರು ಸಾಕ್ಷಿ ಆಗಿದ್ದಾರೆ. ಮದುವೆ ಬಳಿಕ ವೈಷ್ಣವಿ ಗೌಡ ಅವರು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ವೈಷ್ಣವಿ ಗೌಡ ಅವರು ಮದುವೆ ಆಗಿರುವ ಹುಡುಗನ ಹೆಸರು ಅನುಕೂಲ್ ಮಿಶ್ರಾ. ಏರ್​ಫೋರ್ಸ್​ ಆಫೀಸರ್ ಆಗಿ ಅವರು ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಮಿಶ್ರಾ ಮತ್ತು ವೈಷ್ಣವಿ ಗೌಡ ಅವರದ್ದು ಲವ್ ಮ್ಯಾರೇಜ್ ಅಲ್ಲ, ಅಪ್ಪಟ ಅರೇಂಜ್ ಮ್ಯಾರೇಜ್.ಅಮೂಲ್ಯ, ವಿಜಯ್ ಸೂರ್ಯ, ನಿವೇದಿತಾ ಗೌಡ, ಅಲೋಕ್, ಕಾರುಣ್ಯ ರಾಮ್ ಮುಂತಾದ ಸೆಲೆಬ್ರಿಟಿಗಳು ಈ ಮದುವೆಗೆ ಹಾಜರಿ ಹಾಕಿದ್ದಾರೆ. ಮದುವೆಯಲ್ಲಿ ಸೆಲೆಬ್ರಿಟಿಗಳೆಲ್ಲ ಕುಣಿದು ಕುಪ್ಪಳಿಸಿದ್ದಾರೆ. ವೈಷ್ಣವಿ ಗೌಡ ವಿವಾಹ ಅದ್ದೂರಿಯಾಗಿ ನಡೆದಿದೆ.
ಅನೇಕ ವರ್ಷಗಳಿಂದ ವೈಷ್ಣವಿ ಗೌಡ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸೀರಿಯಲ್​ನಲ್ಲಿ ನಟಿಸುವ ಮೂಲಕ ಅಪಾರ ಖ್ಯಾತಿ ಗಳಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 8’ ರಿಯಾಲಿಟಿ ಶೋನಲ್ಲೂ ವೈಷ್ಣವಿ ಗೌಡ ಅವರು ಸ್ಪರ್ಧಿಸಿದ್ದರು.ವೈಷ್ಣವಿ ಗೌಡ ಅವರಿಗೆ ಮೊದಲಿನಿಂದಲೂ ಮದುವೆ ಪ್ರಪೋಸಲ್ ಬರುತ್ತಿದ್ದವು. ಆದರೆ ಯಾವುದನ್ನೂ ಅವರು ಒಪ್ಪಿಕೊಂಡಿರಲಿಲ್ಲ. ಅಂತಿಮವಾಗಿ ಉತ್ತರ ಭಾರತದ ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆದ್ರೆ ಬೇಸರದ ಸಂಗತಿ ಎಂದರೆ ಮದುವೆ ಗೌಡರ ಸ್ಟೈಲ್ ನಲ್ಲಿ ನಡೆದೇ ಇಲ್ಲ. ಬದಲಾಗಿ ಉತ್ತರ ಭಾರತದ ಸ್ಟೈಲ್ ಅಲ್ಲಿ ನಡೆದಿದ್ದು ಇಂತಹ ಪದ್ಧತಿಗೆ ಅದ್ಯಾಕೆ ಒಪ್ಪಿಕೊಂಡರು ಅರ್ಥವಾಗ್ತಿಲ್ಲ. ನಮ್ಮ ಕರ್ಣಾಟಕದಲ್ಲಿ ಗೌಡರ ಜಾತಿಯಲ್ಲಿ ಒಳ್ಳೆಯ ಹುಡುಗರಿದ್ದರು. ಆದರೆ ಅವರೆಲ್ಲರ ನಿರಾಕರಿಸಿ ದೂರದ ಉತ್ತರಭಾರತದ ಹುಡುಗನನ್ನು ಮದುವೆ ಆಗಿದ್ದು ಅವರ ಸಂಪ್ರದಾಯದಂತೆ ಮದುವೆ ಆಗಿದ್ದು ಅದೆಷ್ಟು ಸರಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.