ಹನುಮಂತನ ಮನೆಗೆ ಅನುಶ್ರೀ ಭೇಟಿ, ದೊಡ್ಡ ಮೊತ್ತದ ಹಣ ಕೊಟ್ಟು ಮೆಚ್ಚುಗೆ ಹೊರಹಾಕಿದ್ದಾರೆ
Feb 2, 2025, 17:28 IST
|

ಈದೀಗ ಎಲ್ಲೆಲ್ಲೂ ಈಗ ಹನುಮಂತ ಬಗ್ಗೆಯೇ ಚರ್ಚೆ ನಡೀತಿದೆ. ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಹನುಮಂತ ಗೆಲುವಿನ ನಗೆ ಬೀರಿದ್ದಾರೆ. ಇನ್ನುಳಿದ 15 ಜನ ಸ್ಪರ್ಧಿಗಳನ್ನು ಹಿಂದಿಕ್ಕಿ ಟ್ರೋಫಿ ಎತ್ತಿ ಹಿಡಿದಿದ್ದಾರೆ. 50 ಲಕ್ಷ ರೂಪಾಯಿ ನಗದು ಬಹುಮಾನ ಕೂಡ ಅವರಿಗೆ ಸಿಕ್ಕಿದೆ. ಹಾಡು ಹಕ್ಕಿಗೆ ಬಿರುದು ಸನ್ಮಾನ ಸಿಕ್ಕಂತಾಗಿದೆ.
ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕು ಮುನ್ನ ಕೂಡ ಹನುಮಂತ ಲಮಾಣಿ ಬಗ್ಗೆ ಕನ್ನಡ ವೀಕ್ಷಕರಿಗೆ ಪರಿಚಯ ಇತ್ತು. ಕಾರಣ ಜೀ ಕನ್ನಡ ರಿಯಾಲಿಟಿ ಶೋಗಳಲ್ಲಿ ಹನುಮಂತ ಭಾಗವಹಿಸಿದ್ದರು. ಮುಖ್ಯವಾಗಿ ಸರಿಗಮಪ ಸೀಸನ್ 15ರಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿದ್ದರು. ಆ ಶೋವನ್ನು ಅನುಶ್ರೀ ನಿರೂಪಣೆ ಮಾಡಿದ್ದರು. ಹಾಗಾಗಿ ಇಬ್ಬರ ನಡುವೆ ಉತ್ತಮ ಒಡನಾಟ ಇದೆ.
ಹನುಮಂತ ಎಲ್ಲರನ್ನು ಅಕ್ಕ, ಅಣ್ಣ ಎಂದೇ ಕರೆಯುತ್ತಾರೆ. ಇನ್ನು ಅನುಶ್ರೀ ನೆಚ್ಚಿನ ಅಕ್ಕ. ಅನುಶ್ರೀ ಪ್ರತಿವಾರ ಸರಿಗಮಪ ಶೋನಲ್ಲಿ ಚಿಲ್ಲೂರ ಬಡ್ನಿ ಹೈದನನ್ನು ಹುರಿದುಂಬಿಸುತ್ತಿದ್ದರು. ವೇದಿಕೆ ಮೇಲೆ ಮಾತ್ರವಲ್ಲ, ವೇದಿಕೆ ಹೊರಗೆ ಕೂಡ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ವೇಳೆ ಕೂಡ ಇಬ್ಬರು ಮತ್ತೆ ಗಮನ ಸೆಳೆದಿದ್ದರು.
ಕಪ್ಪು ಬಣ್ಣದ ಪಲ್ಸರ್ 150 ಬೈಕ್ ಅನ್ನು ಹನುಮಂತನಿಗೆ ಅನುಶ್ರೀ ಕೊಟ್ಟಿದ್ದಾರೆ. ಅದನ್ನು ಹೇಳಿಕೊಳ್ಳುವುದು ಬೇಡ ಎಂದು ಆಕೆ ನಿರ್ಧರಿಸಿದಂತಿದೆ. ಅಂದಹಾಗೆ ಆ ಬೈಕ್ ಮೇಲೆ ಅನುಶ್ರೀ ಫೋಟೊ ಕೂಡ ಇದೆ. ಇತ್ತೀಚೆಗೆ ಯೂಟ್ಯೂಬರ್ ಒಬ್ಬರು ಹನುಮಂತ ಲಮಾಣಿ ಮನೆಗೆ ಭೇಟಿ ನೀಡಿ ಹೋಮ್ ಟೂರ್ ವೀಡಿಯೋ ಮಾಡಿದ್ದರು. ಅದರಲ್ಲಿ ಕೂಡ ಆ ಬೈಕ್ ಅನ್ನು ತೋರಿಸಿದ್ದಾರೆ. ಹನುಮಂತ ಬಿಗ್‌ಬಾಸ್ ಮನೆಯಲ್ಲಿ ಇರುವುದರಿಂದ ಬೈಕ್ ಮನೆ ಮುಂದೆ ನಿಂತಿದೆ. ಬೇರೆ ಯಾರು ಬಳಸುತ್ತಿಲ್ಲ ಎಂದು ಹೇಳಲಾಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.