ಹಬ್ಬ, ಮದುವೆ ಕಾಯ೯ಕ್ರಮಗಳಲ್ಲಿ ಇನ್ಮುಂದೆ ಪಟಾಕಿ ಬ್ಯಾನ್, ಸಿಎಂ ಸಿದ್ದು ಖಡಕ್ ರೂಲ್

 | 
ುೀ

 ಇನ್ಮುಂದೆ ಗಣೇಶ ಹಬ್ಬ ದೀಪಾವಳಿ ಹೀಗೆ ಮನಸ್ಸಿಗೆ ಕಂಡಹಾಗೆ ಹಬ್ಬಕ್ಕೆಲ್ಲ ಪಟಾಕಿ ಹೊಡಿಯೋ ಹೀಗಿಲ್ಲ ಹೌದು ಇದ್ಯಾಕಪ್ಪ ಅಂದ್ಕೊಂಡ್ರಾ ಹಾಗಿದ್ರೆ ಈ ಲೇಖನವನ್ನ ಪೂರ್ತಿಯಾಗಿ ಓದಿ. ಇನ್ಮುಂದೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವ ಮೆರವಣಿಗೆ, ಉತ್ಸವ ಮತ್ತು ಮದುವೆಯಂಥ ಸಮಾರಂಭದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 14 ಮಂದಿಯನ್ನು ಬಲಿ ಪಡೆದುಕೊಂಡ ಅತ್ತಿಬೆಲೆ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಂಗಳವಾರ ಸಂಬಂಧಿತ ಅಧಿಕಾರಿಗಳ ಸಭೆಯನ್ನು ಕರೆದಿದ್ದರು. 

ಇಂಥ ದುರಂತಗಳು ಮರುಕಳಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ನಡೆದ ಈ ಸಭೆಯಲ್ಲಿ ಸಿಎಂ ಅವರು ಕೆಲವೊಂದು ಕಠಿಣ ಕ್ರಮಗಳ ಸೂಚನೆಯನ್ನು ನೀಡಿದರು.ಪಟಾಕಿಗಳನ್ನು ಸಿಡಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಆದೇಶವನ್ನು ರಾಜ್ಯದಲ್ಲೂ ಕಡ್ಡಾಯವಾಗಿ ಪಾಲಿಸಲಾಗುವುದು, ಅದರಲ್ಲೂ ದೀಪಾವಳಿ ಸನಿಹದಲ್ಲಿರುವುದರಿಂದ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.

ಇನ್ನು ಮುಂದೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಬೇಕು ಎಂದು ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಮೆರವಣಿಗೆಯ ವೇಳೆ ಪಟಾಕಿ ಹೊಡೆಯೋ ಹಾಗಿಲ್ಲ. ಮದುವೆ, ಗಣೇಶೋತ್ಸವ ಮತ್ತಿತರ ತುಂಬ ಜನರು ಸೇರುವ ಕಡೆಗಳಲ್ಲೂ ಪಟಾಕಿ ಬ್ಯಾನ್‌ ಮಾಡಲಾಗುತ್ತದೆ. ರಾಜಕೀಯ ಕಾರ್ಯಕ್ರಮಗಳಲ್ಲೂ ಪಟಾಕಿ ಹೊಡೆಯುವಂತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಅಪಾಯಕಾರಿ ಪಟಾಕಿಗಳನ್ನು ಸಂಪೂರ್ಣ ನಿಷೇಧ ಮಾಡಲಾಗುತ್ತದೆ, ಹೊಡೆಯುವುದಿದ್ದರೆ ಕಡಿಮೆ ತೀವ್ರತೆಯ ಹಸಿರು ಪಟಾಕಿ ಹೊಡೆಯಬಹುದು ಎಂದು ಅವರು ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೂಡಾ ರಾಜಕೀಯ ಸಮಾವೇಶಗಳಲ್ಲಿ ಹಾಗೂ ವಿವಾಹ ಸಮಾರಂಭಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಬಳಕೆಯನ್ನು ನಿಷೇಧಿಸುವಂತೆ ಸಲಹೆ ನೀಡಿದರು.

ಇನ್ನು ಇತ್ತೀಚಿಗೆ ನೆಡೆದ ಅತ್ತಿಬೆಲೆ ದುರಂತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನಿಗದಿತ ಮಾನದಂಡ ಪೂರೈಸದಿದ್ದರೂ, ತಪಾಸಣಾ ವರದಿ ನೀಡಿ ಪಟಾಕಿ ಅಂಗಡಿ ಇಡಬಹುದು ಎಂದು ಶಿಫಾರಸು ಮಾಡಿದ ಸರ್ಕಲ್‌ ಇನ್ಸ್‌ಪೆಕ್ಟರ್‌, ತಹಸೀಲ್ದಾರ್‌, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳನ್ನು ಅಮಾನತು ಮಾಡಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.