ಬಾಡಿಗೆ ಮನೆ ಮಾಡುವ ಮುನ್ನ ಇರಲಿ ಮುನ್ನೆಚ್ಚರ, ರಾತ್ರಿ ಆಟಕ್ಕೆ ಮನೆ ಮಾಲೀಕ ತತ್ತರ

 | 
ಕ್
ಬೆಂಗಳೂರಿನಲ್ಲಿ ಮನೆ ಬಾಡಿಗೆ ಹಾಗೂ ಲೀಸ್‌ಗೆ ಮನೆ ಪಡೆಯುವ ಮನ್ನ ನೂರು ಬಾರಿ ಯೋಚನೆ ಮಾಡಬೇಕು. ಯಾಕೆಂದರೆ ಸ್ವಲ್ಪ ಮೈ ಮರೆತರೂ ಕೂಡ ಲಕ್ಷ ಲಕ್ಷ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಮನೆ ಮಾಲೀಕನ ಬಳಿ ಬಾಡಿಗೆಗೆ ಬಂದಿರುವುದಾಗಿ ಹೇಳಿ ಬಾಡಿಗೆದಾರರ ಬಳಿ ಮನೆ ಲೀಸ್‌ ನೀಡುವುದಾಗಿ ಹಣ ದೋಚಿದ ಮಧ್ಯವರ್ತಿಗಳ ಜಾಲ ಪತ್ತೆಯಾಗಿದೆ.
ಹೌದು ಬೆಂಗಳೂರಿನಲ್ಲಿ ಲೀಸ್‌ಗೆ ಹಣ ಪಡೆದು ಮೋಸ ಮಾಡುವ ಜಾಲವೊಂದನ್ನು ಸಿಸಿಬಿ ಪತ್ತೆ ಮಾಡಿದೆ. ಈ ಮಧ್ಯವರ್ತಿಗಳು ಮನೆ ಮಾಲೀಕರಿಗೆ ಬಾಡಿಗೆ ಅಂತಾರೆ, ಬಾಡಿಗೆದಾರರ ಬಳಿ ಲೀಸ್‌ಗೆ ಹಣ ಪಡೆದು ವಂಚಿಸುತ್ತಾರೆ. ಈ ಬಗ್ಗೆ ಮಾಹಿತಿ ಬಂದ ಬೆನ್ನಲ್ಲೇ ಸಸಿಸಿಬಿಯಿಂದ ಆರೋಪಿ ಖಲೀಲ್ ಷರೀಫ್ ಎಂಬಾತನನ್ನು ಬಂಧಿಸಲಾಗಿದೆ. ಕರೆದುಕೊಂಡು ಹೋಗುವಂತಹ ಮಧ್ಯವರ್ತಿಗಳು ಲೀಸ್‌ಗೆಂದು ಹಣ ಪಡೆಯುವ ಜಾಲ ಸಕ್ರಿಯವಾಗಿದೆ.
ಬಾಲಾಜಿ ಮಿಡೋಸ್ ಅಪಾರ್ಟ್​ಮೆಂಟ್​ನ 305 ಹಾಗೂ 405 ಸಂಖ್ಯೆ ಡುಪ್ಲೆಕ್ಸ್ ಫ್ಲ್ಯಾಟ್​​ನಲ್ಲಿ 2023ರಲ್ಲಿ ಪದ್ಮ ಅವರು ಲೀಸ್ ಅಗ್ರಿಮೆಂಟ್ ಮಾಡಿಕೊಂಡು 26 ಲಕ್ಷ ಹಣವನ್ನು ಆರೋಪಿ ರಘು ಎಂಬುವನಿಗೆ ಚೆಕ್ ಹಾಗೂ ಆನ್​ಲೈನ್ ಮೂಲಕ ಪಾವತಿಸಿದ್ದರು. ಎರಡು ತಿಂಗಳ ಬಳಿಕ ಸಾಯಿಪ್ರಶಾಂತ್ ಎಂಬುವರು ಮನೆಗೆ ಬಂದು ಮನೆ ಮಾಲೀಕ ಎಂದು ಹೇಳಿ ಲೀಸ್​ಗೆ ಬರುವ ಮುನ್ನ ಎರಡು ವರ್ಷಗಳ ಹಿಂದೆ ತಮಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಸರಿಪಡಿಸುವುದಾಗಿ ರಘು ತಿಳಿಸಿದ್ದ ಎಂದು ದೂರಿನಲ್ಲಿ ಪದ್ಮ ಅವರು ತಿಳಿಸಿದ್ಧಾರೆ.
ಕಳೆದ ಮಾರ್ಚ್​ನಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಅಧಿಕಾರಿಗಳು ಮನೆಗೆ ಬಂದು ಸಾಯಿಪ್ರಶಾಂತ್ ಎಂಬುವರು ಸಾಲದ ಹಣ ಪಾವತಿಸಿಲ್ಲ. ಹೀಗಾಗಿ ಮನೆಯನ್ನು ಜಪ್ತಿ ಮಾಡುವುದಾಗಿ ತಿಳಿಸಿದ್ದಾರೆ. ನಮ್ಮ ಫ್ಲ್ಯಾಟ್ ಮಾತ್ರವಲ್ಲದೆ, ಅಪಾರ್ಟ್​ಮೆಂಟ್​ನ ಹಲವು ಭೋಗ್ಯದಾರರಿಗೂ ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 
ವಂಚನೆಗೊಳಗಾಗಿರುವ ಪದ್ಮ ಅವರು ಮಾತನಾಡಿ, ಲೀಸ್​ಗೆ ಹೋದ ಮೂರು ತಿಂಗಳೊಳಗೆ ಬ್ಯಾಂಕ್ ಅಧಿಕಾರಿಗಳು ಬಂದು ಖಾಲಿ ಮಾಡುವಂತೆ ತಿಳಿಸಿದ್ದಾರೆ. ಈ ಸಂಬಂಧ ಮೂರು ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ಮನೆ ಮಾಲೀಕ ರಘು ನಮ್ಮಿಂದ ಲಕ್ಷಾಂತರ ರೂಪಾಯಿ ಪಡೆದು ಬೇರೆಯವರಿಗೆ ಮನೆ ಮಾರಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub