ದುಡ್ಡಿನ ಆಸೆಗಾಗಿ ವಿದೇಶಕ್ಕೆ ಹೋಗುವ ಮುನ್ನ ಈ ಘಟನೆ ಕೇಳಿ, ಕಣ್ಣಲ್ಲಿ‌ ನೀರು ಬರುತ್ತೆ

 | 
Bs

ವಿದೇಶಕ್ಕೆ ಹೋಗಿ ದುಡ್ಡು ಸಂಪಾದನೆ ಮಾಡಬೇಕು, ಡಾಲರ್ ಲೆಕ್ಕದಲ್ಲಿ ಹಣಗಳಿಕೆ ಮಾಡಬೇಕು ಎಂದು ಗುಮ್ಮಟ ನಗರಿಯ ಯುವಕರಿಬ್ಬರು ಕುವೈತ್ ದೇಶಕ್ಕೆ ಹೋಗಿ ಚಿತ್ರಹಿಂಸೆ ಅನುಭವಿಸಿದ್ದಾರೆ. ಹೌದು, ವಿಜಯಪುರದ ಇಬ್ಬರು ಯುವಕರಿಗೆ ಪ್ಯಾಕ್ಟರಿಯಲ್ಲಿ ಹಣ್ಣು-ತರಕಾರಿ ಪ್ಯಾಕಿಂಗ್‌ ಕೆಲಸ ಎಂದು ಹೇಳಿ ಕರೆದುಕೊಂಡುಹೋಗಿ ಒಂಟೆ ಕಾಯಲು ಹೇಳಿ ಚಿತ್ರಹಿಂಸೆ ನೀಡಿದ್ದಾರೆ ಕೊನೆಗೆ ಯುವಕರು ಕಿರಾತಕರಿಂದ ಬಚಾವ್ ಆಗಿ ತಾಯ್ನಾಡಿಗೆ ಮರಳಿ ಬಂದು ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅಡವಿಸಂಗಾಪುರ ಗ್ರಾಮದ ವಿಶಾಲ್ ಮತ್ತು ಸಚೀನ್ ಡಾಲರ್‌ ಲೆಕ್ಕದಲ್ಲಿ ಹಣ ಸಂಪಾದಿಸಬೇಕು, ಅಪ್ಪ-ಅಮ್ಮನನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕನಸು ಕಂಡು 6 ತಿಂಗಳ ಹಿಂದೆ ಇಬ್ಬರು ಉದ್ಯೋಗಕ್ಕಾಗಿ ಕುವೈತ್‌ ದೇಶಕ್ಕೆ ಹೋಗಿದ್ದರು. ಮುಂಬೈ ಮೂಲದ ಓರ್ವ ಏಜೆಂಟ್ ಪ್ಯಾಕ್ಟರಿಯಲ್ಲಿ ಹಣ್ಣು -ತರಕಾರಿ ಪ್ಯಾಕಿಂಗ್‌ ಕೆಲಸ ಎಂದು ಇಬ್ಬರನ್ನು ಕಳುಹಿಸಿಕೊಟ್ಟಿದ್ದ.

ಆದರೆ ಕುವೈತ್‌ ದೇಶಕ್ಕೆ ಹೋಗುತ್ತಿದ್ದಂತೆ ವಿಶಾಲ್‌ ಹಾಗೂ ಸಚೀನ್‌ ಶಾಕ್‌ ಆಗಿತ್ತು. ಅಲ್ಲಿ ಯಾವುದೇ ಪ್ಯಾಕ್ಟರಿಯು ಇರಲಿಲ್ಲ, ಪ್ರೂಟ್‌ ಪ್ಯಾಕಿಂಕ್‌ ಕೆಲಸವು ಇರಲಿಲ್ಲ. ಬದಲಿಗೆ ಅಲ್ಲಿ ಒಂಟೆ ಮೇಯಿಸಲು ಹೇಳಿದ್ದರು. ಇದಕ್ಕೆ ತಕರಾರು ತೆಗೆದಾಗ ಚಾಕೂ ತೋರಿಸಿ ಬೆದರಿಸಿದ್ದರು. ಮೊಬೈಲ್‌ ನಲ್ಲಿ ಮಾತನಾಡಿದರೆ ಹಲ್ಲೆ ನಡೆಸುತ್ತಿದ್ದರು. 

ಇದರಿಂದ ಇಬ್ಬರು ಯುವಕರು ದೇಶಕ್ಕೆ ಜೀವಂತವಾಗಿ ವಾಪಸ್‌ ಆಗೋದಿಲ್ಲ ಎಂದುಕೊಂಡು ಭಯಬಿದ್ದಿದ್ದರು. 
ಆದರೆ ಹಾಗೊ ಹೀಗೊ ಮಾಡಿ ಕುಟುಂಬದವರನ್ನು ಯುವಕರು ಮೊಬೈಲ್ ಮೂಲಕ ಸಂಪರ್ಕಿಸಿದ್ದಾರೆ ಇದರಿಂದ ಕೂಡಲೆ ಎಚ್ಚತ್ತ ಪಾಲಕರು ಅದೇ ಗ್ರಾಮದ ಮುಖಂಡರೊಬ್ಬರ ಸಹಾಯದಿಂದ ಈ ವಿಷಯವನ್ನು ಸಂಸದ ರಮೇಶ ಜಿಗಜಿಣಗಿ ಅವರಿಗೆ ಮುಟ್ಟಿಸಿದ್ದಾರೆ. 

ಸಂಸದ ರಮೇಶ ಜಿಗಜಿಣಗಿ ಕೇಂದ್ರ ವಿದೇಶಾಂಗ ಸಚಿವರ ಮೂಲಕ ಕುವೈತ್‌ನಲ್ಲಿರುವ ಭಾರತೀಯ ರಾಯಬಾರಿ ಕಚೇರಿಯ ನೆರವಿನಿಂದ ಯುವಕರನ್ನು ನಾಲ್ಕು ದಿನಗಳ ಹಿಂದೆ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆ ತಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.