ಬೆಟ್ಟಿಂಗ್ ಆ್ಯಪ್ ಕಡೆಯಿಂದ ರಕ್ಷಕ್ ಬುಲೆಟ್ ಗೆ ಒಂದು ಕೋಟಿ ಆಫರ್, ಕ್ಯಾಕರಿಸಿ ಉಗಿದ ಬುಲೆಟ್ ಮಗ
Feb 14, 2025, 14:48 IST
|

ಜಾಹೀರಾತಿನ ಸಲುವಾಗಿ ಸೋಶಿಯಲ್ ಸಂದೇಶವನ್ನು ನೀಡುವುದಕ್ಕಾಗಿ ಚಿತ್ರರಂಗದ ತಾರೆಯರು ಸಾಮಾಜಿಕ ಸಮಸ್ಯೆಗಳ ವಿರುದ್ಧ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವಾಗಿ ಮಾತನಾಡುತ್ತಾರೆ. ಇದಕ್ಕೆ ಪೂರಕವಾಗಿ ತಮ್ಮ ನೆಚ್ಚಿನ ತಾರೆಯರ ಮೇಲಿನ ಪ್ರೀತಿಯಿಂದ ಬಹಳಷ್ಟು ಬದಲಾವಣೆಗಳು ಆಗಿವೆ.
ಆದರೆ, ಕೆಲವರು ಹೀಗೆ ಮಾಡಬೇಡಿ, ಹಾಗೇ ಮಾಡಬೇಡಿ ಎಂದು ಲೆಕ್ಚರ್ ನೀಡಿ ಆ ನಂತರ ತಾವೇ ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಾರೆ. ಪಾನ್ ಮಸಾಲಾ, ರಮ್ಮಿ ಸರ್ಕಲ್ ಸೇರಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸಾಲಿಗೆ ತೀರಾ ಇತ್ತೀಚೆಗೆ ವೈಷ್ಣವಿ ಗೌಡ ಸೇರಿಕೊಂಡಿದ್ದಾರೆ.
ರಮ್ಮಿ ಸರ್ಕಲ್ ಜಂಗ್ಲಿ ರಮ್ಮಿಯ ಪ್ರಚಾರ ಮಾಡಿದ್ದಾರೆ. ಈ ಮೂಲಕ ತಮ್ಮ ಅಸಂಖ್ಯಾತ ಅಗಣಿತ ಅಭಿಮಾನಿಗಳಿಗೆ ರಮ್ಮಿ ಆಡಲು ಪ್ರೇರೆಪಿಸಿದ್ದಾರೆ. ಹಾಗಂಥ ಎಲ್ಲರೂ ಇಲ್ಲಿ ಒಂದೇ ಕೆಟಗರಿಗೆ ಸೇರುವರಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಹಣದಾಸೆಗೆ ಒಳಗಾಗದೇ ತಮ್ಮ ಸಾಮಾಜಿಕ ಜವಾಬ್ಧಾರಿಯನ್ನು ಪ್ರದರ್ಶಿಸುತ್ತಾರೆ. ಎಡಗಾಲಿನಲ್ಲಿ ಬಂದ ಅವಕಾಶವನ್ನು ಒದ್ದು ಜನ ಮನ ಗೆಲ್ಲುತ್ತಾರೆ. ಇದಕ್ಕೆ ರಕ್ಷಕ್ ಬುಲೆಟ್ ಸದ್ಯದ ಉದಾಹರಣೆ ಆಗಿದ್ದಾರೆ.
ತಮ್ಮ ಮಾತು. ಹಾವ.ಭಾವಗಳಿಂದ ಸದಾ ಚರ್ಚೆಗೀಡಾದವರು ರಕ್ಷಕ್ ಬುಲೆಟ್. ಹೆಚ್ಚೇನಿಲ್ಲ ಇನ್ನೊಂದ್ ಹತ್ತು ಮಾಸ್ ಡೈಲಾಗ್ ಬಿಟ್ರೆ ಕರ್ನಾಟಕನೇ ನಂದು ಅಂತೇಳಿ, ಬಿಗ್ ಬಾಸ್ ಹತ್ತನೇ ಮನೆಯಲ್ಲಿ ಹತ್ತಿಪ್ಪತ್ತು ದಿನ ಇದ್ದು ಬಂದ ರಕ್ಷಕ್ ಅವರನ್ನ ಇಲ್ಲಿಯವರೆಗೆ ಆಡಿಕೊಂಡವರು ಒಬ್ಬಿಬ್ಬರಲ್ಲ. ಆದರೆ ಇದ್ಯಾವದಕ್ಕೂ ರಕ್ಷಕ್ ಬುಲೆಟ್ ತಲೆ ಕೆಡಿಸಿಕೊಂಡಿಲ್ಲ. ಟ್ರೋಲ್ ಗಳಿಗೆ ಸೊಪ್ಪು ಹಾಕಲಿಲ್ಲ ಬದಲಿಗೆ ಥೇಟ್ ದರ್ಶನ್ ಅವ್ರಂತೆಯೇ ಆನೆ ನಡೆದಿದ್ದೇ ದಾರಿ ಎಂದು ಚಿತ್ರರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ.
ಇಂಥಾ ರಕ್ಷಕ್ ಬುಲೆಟ್ ಈಗ ತಮಗೆ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ನೀಡಿದ ಆಫರ್‌ನ ಸಾರಸಗಟಾಗಿ ತಿರಸ್ಕರಿಸಿದ್ದಾರೆ. ಹೌದು, ಅಸಲಿಗೆ, ರಕ್ಷಕ್ ಬುಲೆಟ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದು ಅಪ್ಲೋಡ್ ಮಾಡಿದ್ದಾರೆ. ಅಪ್ಲೋಡ್ ಮಾಡಿದ ಈ ವಿಡಿಯೋದಲ್ಲಿ ರಕ್ಷಕ್ ಬುಲೆಟ್ ಅವರಿಗೆ ಬೆಟ್ಟಿಂಗ್ ಆಪ್‌ವೊಂದು ಸಂಪರ್ಕ ಮಾಡಿದೆ.
ಆಗ ಲೌಡ್ ಸ್ಪೀಕರ್‌ನಲ್ಲಿ ಮಾತನಾಡುವ ರಕ್ಷಕ್ ಬುಲೆಟ್ ಯಾವುದೋ ಬೆಟ್ಟಿಂಗ್ ಆಪ್ ಪ್ರಮೋಟ್ ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುವುದು ಬೇಡ, ನಾನು ಹೇಳಿದೆ ಅಂತ ಬೆಟ್ಟಿಂಗ್ ಆಫ್‌ಗೆ ಯಾರೋ ಒಬ್ಬರು ನೂರು ರೂಪಾಯಿ ಹಾಕಿ ಕಳೆದುಕೊಂಡರೆ ಆಗ ಅವರು ಬೈಯ್ದುಕೊಳ್ಳುವುದು ನನ್ನನ್ನೇ ಯಾಕೆಂದರೆ ಬೆಟ್ಟಿಂಗ್ ಆಪ್ ಪ್ರಮೋಟ್ ಮಾಡಿದಾಗ ನನ್ನ ಮುಖವೇ ಅಲ್ಲಿ ಕಾಣಿಸುತ್ತೆ ಎಂದಿದ್ದಾರೆ.
ಪ್ರತಿಯೊಬ್ಬರಿಗೆ ಒಂದೊಂದು ರೂಪಾಯಿ ಕೂಡ ದೊಡ್ಡದೇ ಹತ್ತು ರೂಪಾಯಿ ಕೂಡ ದೊಡ್ಡದೇ ಈ ರೀತಿ ಬೆಟ್ಟಿಂಗ್ ಆಪ್ ಪ್ರಮೋಟ್ ಮಾಡಿ ನೂರಲ್ಲ ಕೋಟಿ ರೂಪಾಯಿ ಬರುತ್ತೆ ಎಂದರೂ ನನಗೆ ಅದು ಬೇಡ ಎಂದು ಹೇಳಿದ್ದಾರೆ. ನಾನು ಯಾವುದೇ ಬೆಟ್ಟಿಂಗ್ ಆಪ್‌ಗಳನ್ನು ಪ್ರಮೋಟ್ ಮಾಡಲ್ಲ ಎಂದು ಹೇಳಿದ್ದಾರೆ.