ದತ್ತನ ಮದುವೆಯಲ್ಲಿ ಬಿಗ್ ಟ್ವಿಸ್ಟ್, ಗುಟ್ಟಾಗಿ ಮದುಮಗಳಾಗಿ ಬಂದ ದೃಷ್ಟಿ
Jan 18, 2025, 10:58 IST
|

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ದೃಷ್ಟಿ ಬೊಟ್ಟು ಧಾರಾವಾಹಿಗೆ ಅದರದ್ದೇ ಆದ ಪ್ರೇಕ್ಷಕರ ವರ್ಗ ಇದೆ. ದತ್ತನಿಗೆ ಅವನ ತಾಯಿ ಅಬ್ಬಕ್ಕ - ಇಂಪನಾ ಎಂಬ ಹುಡುಗಿಯೊಂದಿಗೆ ಮದುವೆ ಮಾಡಿಸುವ ಯೋಚನೆಯಲ್ಲಿ ಇದ್ದಾರೆ. ‘ಅಗ್ನಿಸಾಕ್ಷಿ’ ಸೀರಿಯಲ್ ಮೂಲಕ ಮಿಂಚಿದ್ದ ವಿಜಯ್ ಸೂರ್ಯ ಇದೀಗ ಮತ್ತೊಂದು ಮದುವೆಗೆ ರೆಡಿಯಾಗಿದ್ದಾರೆ.
ಮತ್ತೊಂದು ಮದ್ವೆಗೆ ರೆಡಿಯಾಗಿದ್ದಾರೆ. ಹುಡುಗಿಗೆ ತನ್ನ ಪಾಸ್ಟ್ ಬಗ್ಗೆ ಗೊತ್ತಿದ್ದರೂ, ಅದನ್ನು ಒಪ್ಪಿಕೊಂಡು ಮದ್ವೆಗೆ ರೆಡಿಯಾಗಿದ್ದಾಳೆ ಎಂದು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಂದು ನಟ ಹೇಳಿದ್ದಾರೆ. ದೃಷ್ಟಿಬೊಟ್ಟು ಸೀರಿಯಲ್ ರೌಡಿ ದತ್ತನಾಗಿ ಸೀರಿಯಲ್ನಲ್ಲಿ ಮತ್ತೊಂದು ಮದ್ವೆಯಾಗ್ತಿದ್ದಾರೆ. ಇಂಪನಾ ಜೊತೆ ಮದುವೆ ನಡೆಯುತ್ತಿದೆ. ನಾನು ರೌಡಿ ಎನ್ನುವುದು ತಿಳಿದಿದ್ದರೂ ಇಂಪನಾ ಮದುವೆಯಾಗಲು ರೆಡಿಯಾಗಿದ್ದಾರೆ, ಮದುವೆ ಬಂದು ಎಲ್ಲರೂ ಹಾರೈಸಿ ಎಂದಿದ್ದಾರೆ.
ಇನ್ನು ವೀಕ್ಷಕರ ಪ್ರಕಾರ ನಟ ದೃಷ್ಟಿಯನ್ನೇ ಮದುವೆ ಆಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಸಮಯದಲ್ಲಿ ಮನೆ ಕೆಲಸದ ಹುಡುಗಿಯಾಗಿರುವ ಕಥಾನಾಯಕಿ ದೃಷ್ಟಿಯ ಬಳಿ ದತ್ತ – ತನ್ನ ಹಳೆಯ ಪ್ರೀತಿಯ ಬಗ್ಗೆ, ಅದರ ಸಂಕಟಗಳ ಬಗ್ಗೆ, ಪ್ರೇಮ ವೈಫಲ್ಯ ತನ್ನ ಬದುಕಿನ ದಿಕ್ಕು ಬದಲಾಯಿಸಿದ ಬಗ್ಗೆ, ತಾನು ಯಾಕೆ ಸುಂದರವಾಗಿರುವ ಹುಡುಗಿಯರ ಬಗ್ಗೆ ತಿರಸ್ಕಾರ ಬೆಳೆಸಿಕೊಂಡೆ ಎಂಬುದರ ಬಗ್ಗೆ, ಎಲ್ಲಕ್ಕಿಂತ ಹೆಚ್ಚಾಗಿ ದತ್ತಾತ್ರೇಯ ಪಾಟೀಲ್ ಎಂಬ ಶಾಂತ ಸ್ವಭಾವದ ತಾನು ದತ್ತ ಭಾಯ್ ಆಗಿ ಬದಲಾಗಿ - ರೌಡಿ ಬದುಕನ್ನು ತನ್ನದಾಗಿಸಿಕೊಂಡೆ ಎಂಬ ಕುರಿತು ಈಗಾಗಲೇ ಹೇಳಿಕೊಂಡಿದ್ದಾನೆ.
ದತ್ತನ ತಾಯಿ ಅಬ್ಬಕ್ಕ - ಇಂಪನಾ ಎಂಬ ಹುಡುಗಿಯೊಂದಿಗೆ ದತ್ತನ ಮದುವೆ ಮಾಡಿಸುವ ನಿರ್ಧಾರ ಮಾಡಿರುತ್ತಾರೆ. ಆದರೆ ಇಂಪನಾ, ತಿಲಕ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದು ಆಕೆ ಅವನೊಂದಿಗೆ ಓಡಿ ಹೋಗುವ ಯೋಚನೆಯಲ್ಲಿರುತ್ತಾಳೆ. ಹಾಗಾಗಿ ಅವಳ ಜಾಗದಲ್ಲಿ ದೃಷ್ಟಿ ಮದುವೆ ಆಗುತ್ತಾಳೆ. ಏಕೆಂದರೆ ಈಗಾಗಲೇ ಬಳೆ ಶಾಸ್ತ್ರ ಅರಿಶಿನ ಎಲ್ಲವುಗಳಲ್ಲಿ ದೃಷ್ಟಿ ಕೂಡ ಭಾಗವಹಿಸಿ ಎಲ್ಲರ ಚಿತ್ತ ಸೆಳೆದಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.