ಡ್ರೋನ್ ಪ್ರತಾಪ್ ಅವರಿಗೆ ಡ್ಯಾನ್ಸ್ ಹೇಳಿಕೊಡುತ್ತಿರುವ ಸಂಗೀತ, ರೊ.ಚ್ಚಿಗೆದ್ದ ಬಿಗ್ ಬಾಸ್

ನಾಲ್ಕನೇ ವಾರದಲ್ಲಿ ಕಿಚ್ಚ ಸುದೀಪ್‌ರವರು ಬಿಗ್‌ಬಾಸ್ ಸ್ಪರ್ಧಿಗಳಲ್ಲಿ ವಿನಯ್, ನಮ್ರತಾ ಸೇರಿದಂತೆ ಕೆಲವರಿಗೆ ಸರಿಯಾಗಿ ಕ್ಲಾಸ್ ತೆಗೆದ ಬಳಿಕ ಈ ವಾರದ ಆಟ ಬದಲಾಗಬಹುದು ಎಂಬುವುದು ಪ್ರೇಕ್ಷಕರ ನಿರೀಕ್ಷೆಯಾಗಿತ್ತು, ಆದರೆ ಕೆಲವರು ಬದಲಾದಂತೆ ಕಾಣುತ್ತಿಲ್ಲ, ಆದರೆ ಡ್ರೋನ್ ಪ್ರತಾಪ್ ತಮ್ಮ ಆಟವನ್ನು ತುಂಬಾ ಚೆನ್ನಾಗಿ ಆಡಲಾರಂಭಿಸಿದ್ದಾರೆ.
ತಮ್ಮ ಆಟವನ್ನು ಟಾಪ್ ಗೇರ್‌ನಲ್ಲಿ ಆಡುತ್ತಿದ್ದಾರೆ ಎಂದು ಹೇಳಬಹುದು. ಮೊದಲ ವಾರದಲ್ಲಿ ತುಂಬಾನೇ ಮಂಕಾಗಿದ್ದ ಪ್ರತಾಪ್ 5ನೇ ವಾರಕ್ಕೆ ಬರುವಷ್ಟರಲ್ಲಿ ತಮ್ಮ ಆಟ ಚೆನ್ನಾಗಿ ಆಡಲಾರಂಭಿಸಿದ್ದಾರೆ. ಮೊದಲ ವಾರದಲ್ಲಿ ಇತರ ಸ್ಪರ್ಧಿಗಳು ಡ್ರೋನ್ ಪ್ರತಾಪ್ ಅನ್ನು ಹೀಯಾಳಿಸಿ ನಗುವುದನ್ನು ನೋಡಿದ ವೀಕ್ಷಕರಿಗೆ ಡ್ರೋನ್ ಪ್ರತಾಪ್ ಮೇಲೆ ತುಂಬಾ ಅನುಕಂಪ ಮೂಡಿತ್ತು.
ವೀಕೆಂಡ್‌ನಲ್ಲಿ ಪ್ರದೀಪ್ ಡ್ಯಾನ್ಸ್ ಸ್ಟೆಪ್ ಹಾಕುವ ಮೂಲಕ ವೀಕ್ಷಕರ ಮೆಚ್ಚುಗೆಯನ್ನು ಗಳಿಸಿದ್ದರು, ಅಲ್ಲಿಂದ ಡ್ರೋನ್ ಪ್ರತಾಪ್ ಆಟ ದಿನದಿಂದ ದಿನಕ್ಕೆ ಜನರಿಗೆ ತುಂಬಾನೇ ಇಷ್ಟವಾಗುತ್ತಿದೆ. ಬಲೂನ್ ಒಡೆದು ನಾಮಿನೇಟ್ ಪಾಸ್ ಪಡೆಯುವ ಗೇಮ್‌ನಲ್ಲಿ ಎಲ್ಲಾ ಪಾಸ್‌ಗಳನ್ನು ಗಳಿಸಿ, ಅದನ್ನು ಉಳಿಸಿಕೊಳ್ಳುವಲ್ಲಿ ತೋರಿದ ಜಾಣ್ಮೆಯನ್ನು ಕಿಚ್ಚ ಕೂಡ ಮೆಚ್ಚಿ ಪ್ರತಾಪ್ ನೀವು ಓವರ್ ನೈಟ್ ಹೀರೋ ಆಗ್ಬಿಟ್ರಿ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ಕಿಚ್ಚನ ಪ್ರೋತ್ಸಾಹದ ಮಾತುಗಳು, ದಸರಾದಲ್ಲಿ ಸಿಕ್ಕ ಗಿಫ್ಟ್ ಎಲ್ಲವೂ ಡ್ರೋನ್ ಪ್ರತಾಪ್ ಅವರ ಆತ್ಮವಿಶ್ವಾಸ ಹೆಚ್ಚಿಸಿದೆ, ಈಗ ಮಾತನಾಡಬೇಕಾದಲ್ಲಿ ಮಾತನಾಡುತ್ತಾ ಸೂಪರ್ ಆಟ ಆರಂಭಿಸಿದ್ದಾರೆ. ನಾವು ಮಾತನಾಡಿದರೆ ಅವನಿಗೆ ಫೂಟೇಜ್ ಸಿಗುತ್ತದೆ, ನಾವು ಮಾತನಾಡದೆ ಹೋದರೆ ಅವನಿಗೆ ಫೂಟೇಜ್ ಸಿಗಲ್ಲ ಎಂದು 2ನೇ ವಾರದಿಂದ ಪ್ರತಾಪ್ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನವನ್ನು ವಿನಯ್, ತುಕಾಲಿ ಹಾಗೂ ಆ ಬಳಗದಲ್ಲಿ ಇರುವವರು ಮಾಡಿದರು.
ಆದರೂ ಪ್ರತಾಪ್ ತಮ್ಮ ಬುದ್ಧಿವಂತಿಕೆ, ಇತರರ ತಂಟೆಗೆ ಹೋಗದೆ ತಮ್ಮ ಪಾಡಿಗೆ ತಾನಿರುತ್ತಾ ಆಟ ಆಡುವ ರೀತಿ ಜೊತೆಗೆ ಆಗಾಗ ಹೇಳುವ ಗಾದೆ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಈ ವಾರ ತಂಡದ ಕ್ಯಾಪ್ಟನ್ ಕೂಡ ಆಗಿದ್ದಾರೆ. ಇದರಿಂದ ವಿರೋಧ ಪಕ್ಷದಲ್ಲಿರುವ ವಿನಯ್ ಟೀಂನವರೆಗೆ ಪ್ರತಾಪ್ ಚೆನ್ನಾಗಿಯೇ ಆಟ ಆಡುತ್ತಿದ್ದಾನೆ ಎಂಬುವುದು ಅರಿವಾಗಿದೆ. ಅಲ್ಲದೆ ಮಾತಿಗೆ ಸರಿಯಾಗಿಯೇ ಪ್ರತಾಪ್ ಎದುರುತ್ತರ ನೀಡುತ್ತಿರುವ ರೀತಿಗೆ ಮನೆಮಂದಿ ಶಾಕ್ ಆಗಿದ್ದಾರೆ.
ಅಲ್ಲದೆ ಸುದೀಪ್ ಸರ್ ಮೆಚ್ಚಿಸಲೆಂದೆ ವಿಧೇಯ ವಿದ್ಯಾರ್ಥಿಯಂತೆ ಡ್ಯಾನ್ಸ್ ಬೇರೆ ಕಲಿಯುತ್ತಿದ್ದಾರೆ.
ಪ್ರತಾಪ್ ಕ್ಯಾಪ್ಟನ್ ಆದಾಗ ಅಲ್ಲಿಯೂ ಅದೃಷ್ಟ ಅವರ ಕೈ ಹಿಡಿದಿದೆ. ಎರಡು ಗೇಮ್ ಗೆಲ್ಲುವ ಮೂಲಕ ತಮ್ಮ ಟೀಂನ ಭಾಗ್ಯಶ್ರೀ ಹಾಗೂ ಸಂಗೀತಾರನ್ನು ನಾಮಿನೇಷನ್‌ನಿಂದ ಪಾರು ಮಾಡಿ, ಸ್ನೇಹಿತ್‌ಗೆ ನಿರ್ಬಂಧ ಹಾಕುವ ಮೂಲಕ ತುಂಬಾನೇ ಚೆನ್ನಾಗಿ ಮೈಂಡ್ ಗೇಮ್ ಆಡಿದ್ದಾರೆ.
ಇಂದಿನ ಪ್ರೊಮೋದಲ್ಲಿ ಪ್ರತಾಪ್ ಕೋಪಗೊಂಡು ಎದ್ದು ಹೋಗುವ ದೃಶ್ಯ ಇದೆ, ಬಿಗ್‌ಬಾಸ್ ಮನೆಯಲ್ಲಿ ಇದುವರೆಗೆ ತಾಳ್ಮೆ ಕಳೆದುಕೊಳ್ಳದ ಪ್ರತಾಪ್ ಏಕೆ ಈ ರೀತಿ ಕೋಪದಿಂದ ಎದ್ದು ಹೋಗಿದ್ದಾರೆ ಎಂಬುವುದು ಇಂದಿನ ಎಪಿಸೋಡ್‌ನಲ್ಲಿ ತಿಳಿಯುತ್ತದೆ. ಪ್ರತಾಪ್ ತನ್ನ ಆಟ ಸೂಪರ್ ಆಗಿ ಆಡಲಾರಂಭಿಸಿ ಗೆಲ್ಲುತ್ತಾರೋ ಸೋಲುತ್ತಾರೋ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.