ಬಿಗ್ ಬಾಸ್ ಸಂಗೀತಾ ಹಾಗೂ ವಿನಯ್ ಕಿರಿಕ್ ಈಗಿನದ್ದಲ್ಲ, ಆ ಒಂದು ಕಾರಣಕ್ಕೆ ಮೂಡಿತ್ತು ಬಿರುಕು

 | 
ಪುೀ

 ಬಿಗ್ ಬಾಸ್ ಕನ್ನಡ 10 ರ ಮನೆಯಲ್ಲಿ ವಿನಯ್ ಗೌಡ, ಸಂಗೀತಾ ಶೃಂಗೇರಿ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಜಗಳ ಆಡುತ್ತಿದ್ದಾರೆ. ವಿನಯ್ ಗೌಡ ಅವರ ಧ್ವನಿ ನನಗೆ ಹೆದರಿಕೆ ಹುಟ್ಟುಹಾಕುತ್ತಿದೆ ಅಂತ ಸಂಗೀತಾ ಪದೇ ಪದೇ ಹೇಳಿದ್ದರು. ದಿನನಿತ್ಯ ಇವರಿಬ್ಬರು ಜಗಳ ಆಡುತ್ತಿದ್ದಾರೆ. ಇದು ಬಿಗ್ ಬಾಸ್ ಮನೆಯಲ್ಲಿಯೇ ಶುರುವಾಗಿದ್ದಾ?ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. 

ಈ ಹಿಂದೆ ವಿನಯ್ ಗೌಡ, ಸಂಗೀತಾ ಶೃಂಗೇರಿ ಅವರು 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ನಟಿಸಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಸೀರಿಯಲ್ ಪ್ರಸಾರ ಆಗುತ್ತಿತ್ತು. ವಿನಯ್ ಗೌಡ ಅವರು ಶಿವನ ಪಾತ್ರ ಮಾಡಿದ್ದರೆ, ಸಂಗೀತಾ ಅವರು ಸತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. 2016ರಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.

ವಿನಯ್ ಗೌಡ, ಸಂಗೀತಾ ಅವರು ಒಟ್ಟಿಗೆ ಕೆಲಸ ಮಾಡಿದ್ದರು, ಹಾಗಾಗಿ ಈ ಜೋಡಿಗೆ ಪರಸ್ಪರ ಪರಿಚಯ ಇದೆ. ಅಂದು ಕೆಲಸ ಮಾಡುವಾಗ ಸಣ್ಣ ಪುಟ್ಟ ವಿಚಾರಕ್ಕೆ ಇವರಿಬ್ಬರ ಮಧ್ಯೆ ಮನಸ್ತಾಪ ಇದ್ದರೂ ಇರಬಹುದು, ಇಲ್ಲದಯೇ ಇರಬಹುದು. ಪರಿಚಯ ಇರೋದಿಕ್ಕೆ ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು ಒಬ್ಬರಿಗೊಬ್ಬರು ಬೆಂಬಲ ನೀಡುತ್ತ ಆಟ ಆಡ್ತಾರೆ ಅಂದುಕೊಂಡರೆ, ಲೆಕ್ಕಾಚಾರ ಎಲ್ಲವೂ ಉಲ್ಟಾ ಆಗಿದೆ.

ದೊಡ್ಮನೆಯಲ್ಲಿ ವಿನಯ್ ಹಾಗೂ ಸಂಗೀತಾ ನಿತ್ಯವೂ ಕಿತ್ತಾಡುತ್ತಿದ್ದಾರೆ. ನನ್ನ ವಾಯ್ಸ್ ಹೆದರಿಕೆ ಹುಟ್ಟಿಸತ್ತೆ ಅಂತ ಸಂಗೀತಾ ಹೇಳುತ್ತಿದ್ದಾಳೆ, ನನಗೆ ಈ ರೀತಿ ಟೈಟಲ್ ಕೊಡೋದು ಬೇಕಿಲ್ಲ, ನಾನು ಯಾರಿಗೋಸ್ಕರವೂ ನನ್ನ ಧ್ವನಿಯನ್ನು ಬದಲಾಯಿಸಿಕೊಳ್ಳೋದಿಲ್ಲ, ನಾನು ಹೀಗೆಯೇ ಇರೋದು ಅಂತ ಸಂಗೀತಾಗೆ ವಿನಯ್ ಗೌಡ ಅವರು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ.

ವಿನಯ್ ಗೌಡ ಅವರಿಗೆ ನಮ್ರತಾ ಗೌಡ ಬೆಂಬಲ ನೀಡುತ್ತಿದ್ದಾರೆ. ಇನ್ನೊಂದು ಕಡೆ ಸಂಗೀತಾಗೆ ಕಾರ್ತಿಕ್ ಮಹೇಶ್ ಬೆಂಬಲ ನೀಡುತ್ತಿದ್ದಾರೆ. ಸಂಗೀತಾಗೆ ಬೆಂಬಲ ನೀಡುತ್ತಿರುವ ಕಾರಣಕ್ಕೆ ವಿನಯ್, ಕಾರ್ತಿಕ್ ಮಧ್ಯೆ ಮನಸ್ತಾಪ ಶುರುವಾಗಿದೆ. ಒಟ್ಟಿನಲ್ಲಿ ದೊಡ್ಮನೆ ಎರಡು ಬಣ ಆಗುವ ರೀತಿ ಕಾಣುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.