ಬಿಜೆಪಿಯ ಪವರ್ ಪುಲ್ ನಾಯಕನ ಹೆಸರು ಚೈತ್ರ ಪ್ರಕರಣದಲ್ಲಿ ಬರ್ತಿದೆ ಎಂದ ಖ್ಯಾತ ಸ್ವಾಮಿಜಿ

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ವಂಚನೆ ಎಸಗಿದ ಪ್ರಕರಣ ಸಂಬಂಧ ಅಭಿನವ ಹಾಲಶ್ರೀ ಹೆಸರಿನ ಬೆನ್ನಲ್ಲೇ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೆಸರು ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೆಸರು ಕೇಳಿಬಂದಿದೆ. ಆದರೆ, ವಂಚನೆ ವಿಚಾರ ತಿಳಿದ ಸುಲಿಬೆಲೆ ಅವರು ಚುನಾವಣೆ ನಂತರ ಅದನ್ನು ಸಿಟಿ ರವಿ ಗಮನಕ್ಕೆ ತಂದಿದ್ದರು.
ಇದನ್ನು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಹೇಳುವಂತೆ ಸಿಟಿ ರವಿ ಚಕ್ರವರ್ತಿ ಅವರಿಗೆ ತಿಳಿಸಿದ್ದಾಗಿ ತಿಳಿದುಬಂದಿದೆ. ಸಿಟಿ ರವಿ ಅವರು ಆಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಇದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ಚುನಾವಣೆ ಮುಗಿದ ಮೇಲೆ ಪೋನ್ನಲ್ಲಿ ಮಾತನಾಡಿದ್ದರು. ಹಣ ಕೊಡುವುದು ನಿಮಗೆ ಗೊತ್ತಿತ್ತಾ ಎಂದು ಚರ್ಕವರ್ತಿ ಅವರನ್ನು ಕೇಳಿದಾಗ ಗೊತ್ತಿಲ್ಲ ಅಂತ ಹೇಳಿದ್ದರು.
ಹೀಗಾಗಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಚಕ್ರವರ್ತಿ ಸೂಲಿಬೆಲೆಯವರಿಗೆ ಹೇಳಿದ್ದಾಗಿ ತಿಳಿಸಿದರು. ಹಣಕ್ಕಾಗಿ ಟಿಕೆಟ್ ಕೊಡುತ್ತಾರೆ ಅಂತಾ ಭಾವಿಸಿದ್ದು ತಪ್ಪು. ಒಂದನ್ನ ಮುಚ್ಚಿಟ್ಟರೆ ನಾಳೆ ಸ್ವಭಾವವಾಗಿ ಬೆಳೆಯಬಹುದು. ಮೋಸ ಹೋಗುವವರಿಗೂ ಪಾಠ ಅಗಬೇಕು. ಮೋಸ ಮಾಡುವವರಿಗೂ ಪಾಠ ಅಗಬೇಕು ಎಂದರು. ಎಲ್ಲಗೊತ್ತಿದ್ದು ಸಿಟಿ ರವಿ ಸುಮ್ಮನಿದಿದ್ದು ಏಕೆ ಉದ್ಯಮಿ ಮತ್ತು ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿಗೆ MLA ಟಿಕೆಟ್ ನೀಡುವುದಾಗಿ ಚೈತ್ರಾ ಕುಂದಾಪುರ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಸಂಬಂಧ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ಟಿಕೆಟ್ ಹಗರಣದಲ್ಲಿ ಹಲವು ತಿಮಿಂಗಿಲಗಳ ಹೆಸರು ಬಹಿರಂಗವಾಗುತ್ತಿದೆ. ಬಿಜೆಪಿಯ ಬಾಡಿಗೆ ಭಾಷಣಕಾರರು, ಖಾವಿ ವೇಷದಾರಿ ವಂಚಕರು ಇದರಲ್ಲಿ ತಳುಕು ಹಾಕಿಕೊಂಡಿದ್ದಾರೆ’ ಎಂದು ಟೀಕಿಸಿದೆ.ಅಷ್ಟಕ್ಕೂ ಸಿಟಿ ರವಿ ಅವರಿಗೆ ಎಲ್ಲ ತಿಳಿದಿತ್ತು ಎಂದು ವಜ್ರದೇಹಿ ಮಠದ ಮಠಾಧೀಶರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.