ಮೋದಿಜಿಯಿಂದ ಬಂಪರ್ ಆಫರ್ ಅಡುಗೆ ಎಣ್ಣೆ ಬೆಲೆಯಲ್ಲಿ‌ ಇಳಿಕೆ, ಬಡವರಿಗೆ ಮತ್ತೊಂದು ಸಿಹಿಸುದ್ದಿ

 | 
ರಹ

ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಗುಡ್‌ ನ್ಯೂಸ್ ನೀಡಿದೆ ಎಂದರೆ ತಪ್ಪಾಗಲ್ಲ. ಈ ತಿಂಗಳ ಆರಂಭದಲ್ಲಿ ಅಡುಗೆ ಎಣ್ಣೆ ಬೆಲೆ ಕಡಿಮೆ ಮಾಡಿತ್ತು. ಇದೀಗ ಮತ್ತೊಮ್ಮೆ ಅಡುಗೆ ಎಣ್ಣೆ ಬೆಲೆ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಗುಡ್ ನ್ಯೂಸ್ ನೀಡಿದೆ. ಇದರಿಂದ ಜನತೆಗೆ ನೆಮ್ಮದಿ ಸಿಗಲಿದೆ ಎನ್ನಬಹುದು. 

ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಇದರಿಂದ ಎಷ್ಟೋ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಬಹುದು. ಈಗಾಗಲೇ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಕ್ರಮೇಣ ಇಳಿಕೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತ ಎನ್ನಬಹುದು. ಆದರೆ ಈಗ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. 

ಕೇಂದ್ರ ಸರ್ಕಾರ ಇತ್ತೀಚೆಗೆ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ. ಇದರಿಂದ ಆಯ್ದ ಅಡುಗೆ ಎಣ್ಣೆಯ ಬೆಲೆಗಳು ಮತ್ತಷ್ಟು ಕಡಿಮೆಯಾಗಬಹುದು ಎನ್ನಬಹುದು. ಮೋದಿ ಸರ್ಕಾರ ಇತ್ತೀಚೆಗೆ ಸಂಸ್ಕರಿಸಿದ ಸೋಯಾ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ. ಇವುಗಳ ಮೇಲಿನ ಆಮದು ಸುಂಕ ಈಗ ಶೇ.12.5ರಷ್ಟಿದೆ. ಇದುವರೆಗೆ ಈ ಪ್ರಮಾಣ ಶೇ 17.5ರಷ್ಟಿತ್ತು. 

ತೈಲಗಳ ಮೇಲಿನ ಆಮದು ಸುಂಕ ಕಡಿತದ ನಿರ್ಧಾರ ಗುರುವಾರದಿಂದ ಜಾರಿಗೆ ಬಂದಿದೆ. ಅಂದರೆ ಇಂದಿನಿಂದಲೇ ಆಮದು ಸುಂಕ ಕಡಿತ ಅನ್ವಯವಾಗಲಿದೆ. ಇದರಿಂದ ಅಡುಗೆ ಎಣ್ಣೆಯ ಬೆಲೆಯೂ ಕಡಿಮೆಯಾಗಬಹುದು ಎಂದು ತೋರುತ್ತದೆ. ಅಲ್ಲದೆ, ಕಚ್ಚಾ ಪಾಮ್ ಆಯಿಲ್, ಕಚ್ಚಾ ಸೂರ್ಯಕಾಂತಿ ಎಣ್ಣೆ, ಕಚ್ಚಾ ಸೋಯಾ ಎಣ್ಣೆಯ ಮೇಲಿನ ಆಮದು ಸುಂಕವು ಶೇಕಡಾ 5 ರಷ್ಟು ಇರುತ್ತದೆ. 

ಸಂಸ್ಕರಿಸಿದ ಖಾದ್ಯ ತೈಲದ ವಿಷಯಕ್ಕೆ ಬಂದರೆ, ಆಮದು ಸುಂಕವು ಶೇಕಡಾ 13.75 ಆಗಿದೆ.ಅಡುಗೆ ಎಣ್ಣೆ ಬೆಲೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಬಹುದು. ಇದೊಂದು ಸಕಾರಾತ್ಮಕ ಅಂಶವೆಂದೇ ಹೇಳಬಹುದು. ಸದ್ಯ ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಕಡಿಮೆ ಇದೆ.ಇನ್ನು ತಾಳೆ ಎಣ್ಣೆ ದರ ಲೀಟರ್‌ಗೆ ರೂ. 100 ಗಿಂತ ಕಡಿಮೆ ಇದೆ. ಅಲ್ಲದೆ ಅನೇಕ ತೈಲ ತಯಾರಿಕಾ ಕಂಪನಿಗಳು ಅಡುಗೆ ಎಣ್ಣೆ ಬೆಲೆಯನ್ನು ಕಡಿಮೆ ಮಾಡುತ್ತಿವೆ. 

ಇತ್ತೀಚಿನ ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆ ರೂ. 10ರಿಂದ 30 ರೂಪಾಯಿವರೆಗೂ ಇಳಿದಿದೆ. ಹಾಗಾಗಿ ಬೆಲೆ ಇಳಿಕೆ ಸಾಮಾನ್ಯರಿಗೆ ಭಾರೀ ಸಮಾಧಾನ ತಂದಿದೆ ಎನ್ನಬಹುದು. ಜೊತೆಗೆ ಈಗ ಮದುವೆ ಸೀಸನ್ ಕೂಡ ನಡೆಯುತ್ತಿದೆ. ಇದರಿಂದ ಅಡುಗೆ ಎಣ್ಣೆ ಬಳಕೆ ಹೆಚ್ಚಬಹುದು. ಇಂತಹ ಪರಿಸ್ಥಿತಿಯಲ್ಲಿ ದರ ಇಳಿಕೆಯಾಗುತ್ತಿರುವುದು ಖುಷಿಯ ವಿಚಾರ ಎನ್ನಬಹುದು. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.