ವಿನಯ್ ಗುರೂಜಿ ಜೊತೆ ಕಾಣಿಸಿಕೊಂಡಿದ್ದ ಚೈತ್ರ, ಬಗೆದಷ್ಟು ಬಯಲಿಗೆ

 | 
Jh

ಕೋಟಿ ಕೋಟಿ ಹಣ ವಂಚಿಸಿದ ಚೈತ್ರಾ ಕುಂದಾಪುರ ಅವರ ಪ್ರಕರಣದಲ್ಲಿ ಇದೀಗ ವಿನಯ್ ಗುರೂಜಿ ಎಂಟ್ರಿ ಆಗಿದ್ದಾರೆ. ಹೌದು ವಿನಯ ಗುರೂಜಿಯವರೇ ನಿಮಗೆ ಅವಳ ವಿಷಯ ಗೊತ್ತಿಲ್ಲ. ಅವಳು ನಿಮ್ಮ ಹೆಸರು ಹೇಳಿಕೊಂಡು ಮೋಸ ಮಾಡಬಹುದು: ಹೀಗೊಂದು ಎಚ್ಚರಿಕೆಯನ್ನು ನೀಡಿದ್ದರು ಗೋವಿಂದ ಬಾಬು ಪೂಜಾರಿ. 

ಅವರು ಹೇಳುತ್ತಿರುವುದು ತನಗೆ ಬೈಂದೂರಿನ ಬಿಜೆಪಿ ಟಿಕೆಟ್‌ ಕೊಡಿಸುತ್ತೇನೆ ಎಂದು ಹೇಳಿ 5 ಕೋಟಿ ರೂ. ವಂಚನೆ ಮಾಡಿರುವ ಚೈತ್ರಾ ಕುಂದಾಪುರ ಬಗ್ಗೆ.
ಗೋವಿಂದ ಪೂಜಾರಿ ಅವರು ಮೊದಲಿನಿಂದಲೂ ಸಮಾಜಸೇವೆಯಲ್ಲಿ ಇದ್ದವರು. ಅವರು ಕಷ್ಟದಲ್ಲಿರುವ ಹಿಂದೂ ಕಾರ್ಯಕರ್ತರಿಗೆ, ಸಂಕಷ್ಟದಲ್ಲಿರುವವರಿಗೆ ಮನೆ ಕಟ್ಟಿ ಕೊಡುತ್ತಿದ್ದರು. 

ಹಾಗೆ ನಿರ್ಮಿಸಿದ ಹನ್ನೊಂದನೇ ಮನೆಯ ಗೃಹಪ್ರವೇಶ ಕಳೆದ ಜನವರಿ ತಿಂಗಳಲ್ಲಿ ಮರವಂತೆಯಲ್ಲಿ ನಡೆದಿತ್ತು.
ಹಿಂದು ಕಾರ್ಯಕರ್ತನಿಗೆ ಮನೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಗೋವಿಂದ ಬಾಬು ಪೂಜಾರಿ ಅವರ ಜತೆಗೆ ಗೌರಿಗದ್ದೆ ಮಠದ ವಿನಯ ಗುರೂಜಿ, ಚೈತ್ರಾ ಕುಂದಾಪುರ ಮತ್ತು ವಂಚನೆ ಪ್ರಕರಣದ ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿ ಕೂಡಾ ಇದ್ದರು.

ಆವತ್ತು ಭಾಷಣ ಮಾಡಿದ ವಿನಯ ಗುರೂಜಿ ಅವರು ಚೈತ್ರಾ ಕುಂದಾಪುರಳನ್ನು ವಿಪರೀತವಾಗಿ ಹೊಗಳಿದ್ದರು. ಅವಳು ದೇವಿ, ದುರ್ಗೆ ಅಂತೆಲ್ಲ ಹೇಳಿದ್ದರು. ಇದೆಲ್ಲವೂ ಗೋವಿಂದ ಪೂಜಾರಿ ಅವರಿಗೆ ತಾನು ಮೋಸ ಹೋದ ಬಳಿಕ ಅರಿವಾಗಿದೆ. ಆಗ ಅವರು ವಿನಯ ಗುರೂಜಿ ಅವರ ಆಪ್ತರಿಗೆ ಕರೆ ಮಾಡಿ ಚೈತ್ರಾ ಕುಂದಾಪುರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲು ಹೇಳುತ್ತಾರೆ. 

ನಾನು ಜೀವನದಲ್ಲಿ ಅತಿ ದೊಡ್ಡ ಮೋಸಕ್ಕೆ ಒಳಗಾದೆ, ಚೈತ್ರಾ ಕುಂದಾಪುರಳಿಂದ ಎನ್ನುವ ಅವರು, ವಿನಯ ಗುರೂಜಿ ಅವರು ಅವಳನ್ನು ಸಿಕ್ಕಾಪಟ್ಟೆ ಹೊಗಳುತ್ತಾರೆ. ಅವಳ ಬಗ್ಗೆ ಎಚ್ಚರಿಕೆ ಇರಲಿ, ಅವರ ಹೆಸರು ಬಳಸಿಕೊಂಡು ಮೋಸ ಮಾಡುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ. ಈ ಆಡಿಯೋ ಈಗ ವೈರಲ್‌ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.