FactCheck:ಬಾಲಿವುಡ್ ನಟನ ಜೊತೆ ಮದುವೆಗೆ ತಯಾರಾದ ಶ್ರೀಲೀಲಾ, ಕನ್ನಡಿಗರಿಗೆ ಹಬ್ಬದೂಟ

 | 
Ns

ಕನ್ನಡದ ಕಿಸ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, ಟಾಲಿವುಡ್‌ನ ಟಾಪ್‌ ನಟಿಯಾಗಿ ಮಿಂಚುತ್ತಿರುವ ಶ್ರೀಲೀಲಾ  ದೊಡ್ಡ ಶಾಕ್‌ ಕೊಟ್ಟಿದ್ದಾರೆ. ಈಗಷ್ಟೇ ಬಾಲಿವುಡ್‌ ಅಂಗಳಕ್ಕೆ ಎಂಟ್ರಿ ನೀಡಿರುವ ಅವರು ನಟರೊಬ್ಬರ ಜೊತೆ ಎಂಗೇಜ್‌ ಆಗಿದ್ದಾರೆ ಎನ್ನುವ ಗಾಸಿಪ್‌ ಇರುವಾಗಲೇ ಎರಡು ಫೋಟೋಗಳನ್ನು ಹಂಚಿಕೊಂಡು ಶ್ರೀಲೀಲಾ ಕುತೂಹಲ ಮೂಡಿಸಿದ್ದಾರೆ. 

ಸದ್ದಿಲ್ಲದೆ ಶ್ರೀಲೀಲಾ ಅವರ ಮದುವೆ ಕಾರ್ಯಗಳು ನಡೆಯುತ್ತಿದೆಯಾ? ಎಂದು ಎಲ್ಲೆಡೆ ಚರ್ಚೆಯೂ ನಡೆಯುತ್ತಿದೆ.ಹೌದು, ಶ್ರೀಲೀಲಾ ಅವರು ಇತ್ತೀಚೆಗಷ್ಟೇ ಪುಷ್ಪ ಸಿನಿಮಾದಲ್ಲಿ ಸೊಂಟ ಬಳುಕಿಸುವ ಮೂಲಕ ಕಿಸಿಕ್‌ ಬೆಡಗಿ ಎಂದೇ ಕರೆಸಿಕೊಳ್ಳುತ್ತಿದ್ದಾರೆ. ಟಾಲಿವುಡ್‌ನ ಬಹುತೇಕ ಟಾಪ್‌ ನಟರೊಂದಿಗೆ ನಟಿಸಿರುವ ಶ್ರೀಲೀಲಾಗೆ ಸಾಲು ಸಾಲು ಅವಕಾಶಗಳು ಕೈಯಲ್ಲಿವೆ. ಅವರ ವಯಸ್ಸು ನೋಡಿದ್ರೆ ಇನ್ನೂ ಮದುವೆ ಎಲ್ಲ ನೋ ಚಾನ್ಸ್‌ ಎಂದುಕೊಂಡಿದ್ರು ಫ್ಯಾನ್ಸ್‌. ಆದ್ರೆ ಶಾಸ್ತ್ರಗಳ ಫೋಟೋ ಹಂಚಿಕೊಂಡು ಶ್ರೀಲೀಲಾ ಶಾಕ್‌ ಕೊಟ್ಟಿದ್ದಾರೆ. 

ಫೋಟೋಗಳೊಂದಿಗೆ ಕಮಿಂಗ್‌ ಸೂನ್‌ ಎಂದೂ ಶ್ರೀಲೀಲಾ ಬರೆದುಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕೆಲವರು ಇದನ್ನು ನಿಶ್ಚಿತಾರ್ಥ ಎನ್ನುತ್ತಿದ್ದರೆ, ಹಲವರು ಆಗಲೇ ಹರಿಶಿನ ಶಾಸ್ತ್ರ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.ಬಾಲಿವುಡ್‌ ನಟ ಕಾರ್ತಿಕ್ ಜೊತೆ ಡೇಟಿಂಗ್ ವದಂತಿಗಳ ನಡುವೆಯೇ ಶ್ರೀಲೀಲಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮನೆಯಲ್ಲಿ ನಡೆದ ಶಾಸ್ತ್ರಗಳ ಫೋಟೋ ಹಂಚಿಕೊಂಡಿದ್ದಾರೆ. ಕುಟುಂಬದ ಸದಸ್ಯರು ಶ್ರೀಲೀಲಾಗೆ ಹರಿಶಿನ ಹಚ್ಚುತ್ತಿರುವುದು ಫೋಟೋದಲ್ಲಿದೆ.

 ಸಾಮಾನ್ಯವಾಗಿ ಮದುವೆಯಂತಹ ಶುಭ ಸಮಾರಂಭಗಳ ಹೊತ್ತಲ್ಲಿ ಈ ರೀತಿ ಅರಿಶಿನ ಹಚ್ಚುವುದರಿಂದ ಆಗಲೇ ಶ್ರೀಲೀಲಾ ಮದುವೆ ಶಾಸ್ತ್ರಗಳು ಶುರುವಾಗಿದೆ ಎಂದು ಭಾವಿಸಿದ್ದಾರೆ.ಆದರೆ ಈ ಫೋಟೊಗಳು ಮದುವೆಗೆ ಸಂಬಂಧಿಸಿದ್ದಲ್ಲ ಎಂದು ಹೇಳಲಾಗುತ್ತಿದೆ. ನಟಿ ತನ್ನ 'ಸ್ಟಾರ್ ಹುಟ್ಟುಹಬ್ಬ'ವನ್ನು ತನ್ನ ಪ್ರೀತಿಪಾತ್ರರೊಂದಿಗೆ ಈ ರೀತಿ ಆಚರಿಸಿಕೊಂಡಿದ್ದಾರೆ ಎಂದೂ ವರದಿಯಾಗಿದೆ. ಶ್ರೀಲೀಲಾ ಇಲ್ಲಿವರೆಗೆ ಈ ವದಂತಿಗಳ ಬಗ್ಗೆ ಎಲ್ಲಿಯೂ ಪ್ರತಿಕ್ರಿಯಿಸದೆ ಗುಟ್ಟು ಕಾಯ್ದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.