ಡಿವೋಸ್೯ ಬಳಿಕ ಗೊಂಬೆಯಂತಿದ್ದ ನಿವೇದಿತಾ ಗೌಡ ಹೇಗಾಗಿದ್ದಾರೆ ಗೊತ್ತಾ, ಈ ರೀಲ್ಸ್ ನೋಡಿ
Sep 11, 2024, 08:36 IST
|
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸ್ಯಾಂಡಲ್ ವುಡ್ ಬೆಸ್ಟ್ ಜೋಡಿಗಳಲ್ಲಿ ಒಬ್ಬರಾಗಿದ್ದರು.ಈ ದಂಪತಿಗಳ ಮೇಲೆ ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ.ಇಬ್ಬರೂ ಬೇರೆ ಬೇರೆ ಆಗಿಹೋದರು.ನಿವೇದಿತಾ ಗೌಡ, ಡಿವೋರ್ಸ್ ಬಳಿಕ ರೀಲ್ಸ್ ಮಾಡುವುದು ಹೆಚ್ಚಾಗಿದೆ. ಅದರಲ್ಲಿಯೂ ಇಂಗ್ಲಿಷ್ ಹಾಡಿಗೆ ಇವರ ಹಲವು ರೀತಿಯಲ್ಲಿ ಸ್ಟೆಪ್ ಹಾಕುತ್ತಾರೆ.
ಆದರೆ ಗಾಯಕ, ರ್ಯಾಪರ್ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ಡಿವೋರ್ಸ್ ಆದ್ಮೇಲೆ ಹೊಸ ಹೊಸ ರೂಪದಲ್ಲಿ ರೀಲ್ಸ್ ಮಾಡುವುದು ಹೆಚ್ಚಿದೆ. ಹಿಂದಿಗಿಂತಲೂ ಅತಿ ಎನ್ನುವಷ್ಟು ದೇಹ ಪ್ರದರ್ಶನ ಮಾಡುತ್ತಿರುವಿರಿ ಎಂದು ನೆಟ್ಟಿಗರು ಈಗ ತರಾಟೆಗೆ ತೆಗೆದುಕೊಳ್ಳುವುದು ಹೆಚ್ಚುತ್ತಲೇ ಇದೆ. ಈ ಹಿಂದೆ ಕೂಡ ದಿನವೂ ಬೇರೆ ಬೇರೆ ಥರನಾಗಿ ಪೋಸ್ ಕೊಡುತ್ತಲೇ ಬಾರ್ಬಿಡಾಲ್, ಗೊಂಬೆ ಎಂದೆಲ್ಲಾ ಹೊಗಳಿಸಿಕೊಳ್ಳುತ್ತಿದ್ದರು ನಿವೇದಿತಾ.
ಡಿವೋರ್ಸ್ ಬಳಿಕವೂ ದಿನಕ್ಕೊಂದರಂತೆ ರೀಲ್ಸ್ ಮಾಡುತ್ತಿದ್ದರೂ ಕಮೆಂಟಿಗರು ಕಮೆಂಟ್ ಮಾಡುವ ವಿಧಾನ ಬೇರೆಯಾಗಿದೆಯಷ್ಟೇ. ಮೊದಲೆಲ್ಲಾ ಹುಡುಗಾಟ ಬಿಡು, ಮಕ್ಕಳು ಮಾಡಿಕೋ ಎನ್ನುವವರೇ ಹೆಚ್ಚಾಗಿದ್ದರು. ಆದರೆ ಇದೀಗ ಪ್ರತಿ ಬಾರಿಯೂ ಚಂದನ್ ಶೆಟ್ಟಿ ಹೆಸರು ಎಳೆದು ತಂದು ನಿವೇದಿತಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಆದ್ರೆ ನಿವೇದಿತಾ ಮಾತ್ರ ಕಾಮೆಂಟ್ ಗೆ ಉತ್ತರ ನೀಡೋದನ್ನೇ ಬಿಟ್ಟಿದ್ದಾರೆ.
https://www.instagram.com/reel/C_sPJxDJS0k/?igsh=aGs2OTRuMGUzc2Q1
ಆದರೆ ಬಳಕುವ ಬಳ್ಳಿಯಂತೆ ಇರುವ ನಿವೇದಿತಾ, ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.ಆದರೆ ಇದೀಗ ನಟಿ ಶೇರ್ ಮಾಡಿರೋ ವಿಡಿಯೋ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಏಕೆಂದರೆ, ಇದರಲ್ಲಿ ನಿವೇದಿತಾ ವಿಚಿತ್ರವಾಗಿ ಆಡುತ್ತಿದ್ದಾಳೆ ಎನ್ನುವುದು ನೆಟ್ಟಿಗರ ಅಭಿಮತ. ಮಬ್ಬುಕತ್ತಲಿನಲ್ಲಿ ಎನ್ನುವಂತೆ ಈ ವಿಡಿಯೋ ಶೂಟ್ ಮಾಡಲಾಗಿದೆ.
ಇದರಲ್ಲಿ ನಿವೇದಿತಾ ಕೂದಲನ್ನು ಹಿಡಿದುಕೊಂಡು ಜಗ್ಗುತ್ತಲೇ ಸ್ಟೆಪ್ ಹಾಕಿದ್ದಾರೆ. ಕೆಲವೊಂದು ವಿಚಿತ್ರ ಎನಿಸುವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆಯವರೆಗೂ ಚೆನ್ನಾಗಿದ್ದ ನಟಿಗೆ ಇದೇನಾಯ್ತು ಎಂದು ಫ್ಯಾನ್ಸ್ ಗಾಬರಿ ಬಿದ್ದಿದ್ದಾರೆ. ಅದು ಕೂಡ ಅಷ್ಟು ಕ್ಲಾರಿಟಿ ಇಲ್ಲದ ವಿಡಿಯೋದ ಜೊತೆಗೆ, ಇಂಗ್ಲಿಷ್ ಹಾಡೊಂದಕ್ಕೆ ಮಾಡಿರುವ ರೀಲ್ಸ್ ನೋಡಿ ನಿವೇದಿತಾ ನಾರ್ಮಲ್ ಇದ್ದಂತೆ ಕಾಣುತ್ತಿಲ್ಲ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.