ಬಾ ಲಕಿ ಅಂತನೂ ನೋಡದೆ ಪೊದೆಗೆ ಕರೆತಂದ ಪಾಪಿ, ಕೊನೆಗೆ ಅಧಿಕಾರಿಗಳೇ ಶಾ‌‌.ಕ್

 | 
ಲ

ಮಾಡಿದ್ದುಣ್ಣೋ ಮಹರಾಯ ಎನ್ನುವಂತೆ ಕೇರಳದ ಅಲುವಾದಲ್ಲಿ 5 ವರ್ಷದ ಬಾಲಕಿ ಮೇಲೆ ಬರ್ಬರವಾಗಿ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದ ಅಶ್ಫಾಕ್ ಆಲಂಗೆ ಮರಣದಂಡನೆ ವಿಧಿಸಲಾಗಿದೆ. ಎರ್ನಾಕುಲಂ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಮಂಗಳವಾರ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಪೋಕ್ಸೊ ಕಾಯ್ದೆ ಅಡಿ ಪ್ರಕರಣದ ವಿಚಾರಣೆ ನಡೆಸಿದ್ದ ಎರ್ನಾಕುಲಂ ಕೋರ್ಟ್ ನ್ಯಾಯಾಧೀಶ ಕೆ ಸೋಮನ್ ಅವರು ಅಲಂ ದೋಷಿ ಎಂದು ನ 4ರಂದು ಶಿಕ್ಷೆ ವಿಧಿಸಿದ್ದರು. ಅವರು ಮಂಗಳವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ಘಟನೆ ನಡೆದ ನಾಲ್ಕು ತಿಂಗಳ ಒಳಗೆ ವಿಚಾರಣೆ ನಡೆದು ಶಿಕ್ಷೆ ಪ್ರಕಟವಾಗಿರುವುದು ವಿಶೇಷವಾಗಿದೆ. ಪಾತಕಿ ಆಲಂ ಯಾವುದೇ ವಿನಾಯಿತಿಗೆ ಅರ್ಹನಾಗಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಅಷ್ಟಕ್ಕೂ ಈ ವರ್ಷದ ಜುಲೈನಲ್ಲಿ ಅಲುವಾದಲ್ಲಿ ಈ ಆಘಾತಕಾರಿ ಘಟನೆ ನಡೆದಿತ್ತು. ಬಿಹಾರದ ವಲಸೆ ಕಾರ್ಮಿಕ ಅಶ್ಫಾಕ್ ಆಲಂ, ಆತ ವಾಸವಿದ್ದ ಕಟ್ಟಡದಲ್ಲಿಯೇ ಇದ್ದ ಐದು ವರ್ಷದ ಬಾಲಕಿಯನ್ನು ಅಪಹರಣ ಮಾಡಿ, ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ್ದ. ಬಾಲಕಿಯ ಶವವು ಅಲುವಾದ ಮಾರುಕಟ್ಟೆಯ ಹಿಂಭಾಗದ ಜೌಗು ಪ್ರದೇಶದಲ್ಲಿ ಚೀಲವೊಂದರಲ್ಲಿ ಪತ್ತೆಯಾಗಿತ್ತು.

ಜುಲೈ 28ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಲುವಾದಲ್ಲಿನ ಮನೆ ಸಮೀಪದಿಂದ ಐದು ವರ್ಷದ ಬಾಲಕಿಯನ್ನು ಅಪಹರಣ ಮಾಡಿದ್ದ ಆಲಂ, ಅದೇ ದಿನ ಸಂಜೆ 5.30ಕ್ಕೂ ಮುನ್ನ ಕೊಲೆ ಮಾಡಿದ್ದ. ಅದೂ ಪುಟ್ಟ ಮಗವನ್ನು.ಆತನ ಶಿಕ್ಷೆ ಕುರಿತಾದ ವಿಚಾರಣೆಯನ್ನು ನವೆಂಬರ್ 9ರಂದು ಆರಂಭಿಸಲಾಗಿತ್ತು. ಇದು ಅಪರೂಪದಲ್ಲಿಯೇ ಅಪರೂಪದ ಅಪರಾಧವಾಗಿರುವುದರಿಂದ ಆಲಂಗೆ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಷನ್ ಮನವಿ ಮಾಡಿತ್ತು. 

ಆದರೆ ಆತನಿಗೆ ಇನ್ನೂ 29 ವರ್ಷವಾಗಿದ್ದು, ಚಿಕ್ಕ ವಯಸ್ಸಿನವನಾದ ಕಾರಣಕ್ಕೆ ಶಿಕ್ಷೆಯಲ್ಲಿ ಕೊಂಚ ವಿನಾಯಿತಿ ನೀಡಬೇಕು ಎಂದು ಆತನ ಪರ ವಕೀಲರು ಮನವಿ ಮಾಡಿದ್ದರು.ಮಗುವನ್ನು ಹೇಯವಾಗಿ ಅತ್ಯಾಚಾರ ಮಾಡಿ ಕೊಂದ ಪಾತಕಿಗೆ ವಿನಾಯಿತಿ ನೀಡಲು ನ್ಯಾಯಾಧೀಶರು ಒಪ್ಪದೇ ಇರುವ ಕಾರಣ ಗಲ್ಲುಶಿಕ್ಷೆ ಪ್ರಕಟವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.