ಏನೂ ತಿಳಿಯದ ಮುಗ್ಧ ಬಾಲಕನನ್ನು ಮತಾಂತರ, ಈ ಜಗತ್ತಿನಲ್ಲಿ ಏನಾಗುತ್ತಿದೆ

 | 
ಲರರ

ನಾವೆಷ್ಟೇ ಬೆಳೆದರೂ ನಮ್ಮೆಲ್ಲರ ಆಚರಣೆ ಗುಣಗಳ ಮೂಲ ಧರ್ಮ ಹೌದು ನಮ್ಮ ಪೂರ್ವಜರಿಂದ ಬಂದ ಧರ್ಮ ಅದರ ಆಚರಣೆಗಳನ್ನು ಬದಿಗೊತ್ತಿ ನಾವು ಈಗೀಗ ಹಲವು ಆಚರಣೆಗೆ ಕಲ್ಲು ಹಾಕಿ ಹೊಸ ಆಚರಣೆಗೆ ಒತ್ತು ನೀಡಿ ಸುಮ್ಮನಾಗುತ್ತಿದ್ದೇವೆ. 

ಹೌದು ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಅನ್ಯ ಧರ್ಮೀಯರು ಅವರ ಧರ್ಮದತ್ತ ಸೆಳೆಯುತ್ತಿದ್ದಾರೆ.
ಇದೀಗ ಅಂತಹದೇ ಒಂದು ಘಟನೆ ಚಿತ್ರದುರ್ಗದಲ್ಲಿ ನಡೆದಿದೆ 17 ವರ್ಷದ ಬಾಲಕ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಕಳೆದ ಆರು ತಿಂಗಳಿಂದ ಬಾಲಕನ ನಡವಳಿಕೆ ಗಮನಿಸಿದ ಪೋಷಕರಿಗೆ ಅನುಮಾನ ಉಂಟಾಗಿದ್ದು, ಆತನ ಮೊಬೈಲ್ ಪರಿಶೀಲಿಸಿದಾಗ ವಿಚಾರ ಬೆಳಕಿಗೆ ಬಂದಿದೆ.

ಸದ್ಯ ಅದೇ ಗ್ರಾಮದ ಅಬ್ಬಾಸ್ ಹಾಗೂ ಆತನ ತಂದೆ ಗರೀಬ್ ಎಂಬಾತ ನನ್ನ ಮಗನ ತಲೆಕೆಡಿಸಿ ಮತಾಂತರಗೊಳಿಸಿದ್ದಾರೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ಇನ್ನು, ಬಾಲಕನ ಮೊಬೈಲ್‌ನಲ್ಲಿ ಡ್ರಗ್ಸ್, ಗಾಂಜಾ ವಿಷಯದ ಸಂಭಾಷಣೆ ದೊರಕಿದ್ದು, ಡ್ರಗ್ಸ್ ನೀಡಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಎಂದು ಪರುಶುರಾಂಪುರ ಪೊಲೀಸ್ ಠಾಣೆಯಲ್ಲಿ ಪೋಷಕರು ಎಫ್​ಐಆರ್  ದಾಖಲಿಸಿದ್ದಾರೆ.

ಇನ್ನೂ, ಪೊಲೀಸರು ಮತಾಂತರ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆಯ ಕುರಿತಾಗಿ ಮಾಹಿತಿ ಸಂಗ್ರಹಿಸುತ್ತಿರುವ ಪೋಲಿಸರು ಅಪರಾಧ ಸಾಬೀತಾದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.