ರಾತ್ರೋರಾತ್ರಿ ಹಾಸ್ಟೆಲ್ ಕಾಂಪೌಂಡ್ ಹಾರುತ್ತಿರುವ ಮುದ್ದಾದ ಹೆಣ್ಣುಮಕ್ಕಳು, ಕಾರಣ ಏ ನು ಗೊ.ತ್ತಾ

 | 
Bs

ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಸಿಗಲೆಂದು ಪೋಷಕರು ಹಗಲು-ರಾತ್ರಿ ಎನ್ನದೇ ದುಡಿದು ಕಷ್ಟಪಡ್ತಾರೇ. ಶಾಲಾ-ಕಾಲೇಜಿನಲ್ಲಿ ಶಿಕ್ಷಕರು ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಶ್ರಮಿಸ್ತಾರೇ. ಆದರೇ ಇಲ್ಲೊಂದು ವಸತಿ ಶಾಲೆಯಲ್ಲಿ ತಡರಾತ್ರಿ ವಿದ್ಯಾರ್ಥಿನಿಯೇ ಗೇಟ್ ಹತ್ತಿ ಹೊರಗಡೆ ಹೋಗ್ತಾಳೇ.. ರಾತ್ರಿಯಿಡಿ ಹೊರಗಡೆ ಇದ್ದು ಮತ್ತೇ ಮುಂಜಾನೇ ಅದೇ ನಿಲಯಕ್ಕೆ ಯಾರ ಭಯವೂ ಇಲ್ಲದೇ ವಾಪಸ್ ಬರ್ತಾಳೇ. 

ಹಾಗಾದ್ರೇ ಸಮಾಜ ಕಲ್ಯಾಣ ಇಲಾಖೆಯ ಪಾತ್ರವೇನು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ತಡರಾತ್ರಿ 11 ಗಂಟೆ 21 ನಿಮಿಷಕ್ಕೆ ಇಂತಹದೊಂದು ಘಟನೆ ನಡೆದಿದೆ. ವಸತಿ ನಿಲಯದ ವಾರ್ಡನ್ ಶೃತಿ.ಜಿ ತಮ್ಮ ಕರ್ತವ್ಯ ಮುಗಿಸಿ 6 ಗಂಟೆಗೆ ಮನೆಗೆ ಹೋದ ನಂತರ ಕಾವಲುಗಾರ ಇರುವ ವೇಳೆ ಲೋಪ ಉಂಟಾಗಿದೆ. 

ಸ್ಥಳೀಯ ವ್ಯಕ್ತಿಯೊಬ್ಬರು ಈ ಘಟನೆಯನ್ನು ಚಿತ್ರೀಕರಣ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವಿದ್ಯಾರ್ಥಿ ನಿಲಯದಿಂದ ಎಸ್ಕೇಪ್ ಆದ ಕೇಲವೇ ಕ್ಷಣದಲ್ಲಿಯೇ ಕಾವಲುಗಾರ್ತಿ ಲಲಿತಮ್ಮಗೆ ದೂರವಾಣಿ ಕರೆ ಬರುತ್ತದೆ. ತಕ್ಷಣ ಎಚ್ಚೆತ್ತ ವಾರ್ಡನ್ ಶೃತಿ ಸ್ಥಳಕ್ಕೆ ಆಗಮಿಸಿ ಕೊರಟಗೆರೆ ಪಟ್ಟಣದ ಕಾಲೇಜು ಮೈದಾನ, ಗೊರವನಹಳ್ಳಿ ರಸ್ತೆ, ಊರ್ಡಿಗೆರೆ ಕ್ರಾಸ್, ಡಿಗ್ರಿ ಕಾಲೇಜು ಸೇರಿದಂತೆ ಹತ್ತಾರು ಕಡೆಗಳಲ್ಲಿ ರಾತ್ರಿಯಿಡಿ ಹುಡುಕಾಡಿದರೂ ಸಿಕ್ಕಿಲ್ಲ. 

ನಂತರ ಮುಂಜಾನೆ 5 ಗಂಟೆ 15 ನಿಮಿಷಕ್ಕೆ ಯಾರ ಭಯವು ಇಲ್ಲದೇ ಮತ್ತೇ ವಿದ್ಯಾರ್ಥಿನಿ ನಿಲಯಕ್ಕೆ ಹಿಂತಿರುಗಿ ಕೊಠಡಿಯೊಳಗೆ ಸೇರಿಕೊಂಡಿದ್ದಾಳೆ.
ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಾಸವಿರುವ 17ವರ್ಷದ ವಿದ್ಯಾರ್ಥಿನಿ ಶುಕ್ರವಾರ ತಡರಾತ್ರಿ 11 ಗಂಟೆ 21 ನಿಮಿಷಕ್ಕೆ ನಿಲಯದ ಬಾಗಿಲಿನ ಗೇಟ್ ಹತ್ತಿ ಹೊರಗಡೆ ಹೋಗಿ, ಮುಂಜಾನೆ 5 ಗಂಟೆ 15 ನಿಮಿಷಕ್ಕೆ ಮತ್ತದೇ ಗೇಟ್ ಹತ್ತಿ ಒಳಗಡೆ ಬರುತ್ತಾಳೆ. ವಿದ್ಯಾರ್ಥಿನಿ ಹೊರಗಡೆ ಹೋಗುವ ದೃಶ್ಯ ನಿಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಹೊರಗಡೆ ಬಂದ ನಂತರ ಆಟೋ ಹತ್ತಿ ಹೋಗುವ ದೃಶ್ಯ ಖಾಸಗಿ ವ್ಯಕ್ತಿಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಎರಡು ವಿಡೀಯೊಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿದೆ. ವಿದ್ಯಾರ್ಥಿ ನಿಲಯದ ವಾರ್ಡನ್ ಮತ್ತು ಕಾವಲುಗಾರರಿಂದ ಭದ್ರತೆಯ ಲೋಪ ಆಗಿದೆ. ನಿಲಯದ ಇಬ್ಬರ ಮೇಲೆ ಕ್ರಮಕ್ಕೆ ಇಲಾಖೆಗೆ ಸೂಚಿಸಲಾಗಿದೆ. ಪೊಲೀಸರಿಂದ ಸಿಸಿಟಿವಿ ಮತ್ತು ಖಾಸಗಿ ವಿಡೀಯೊ ದೃಶ್ಯಾವಳಿಗಳ ಪರಿಶೀಲನೆ ನಡೆದಿದೆ. ಟಾಟಾಎಸಿ ಆಟೋ ಮತ್ತು ಆರೋಪಿ ಪೊಲೀಸರ ವಶದಲ್ಲಿದ್ದಾನೆ ಎನ್ನಲಾಗ್ತಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.