ಅಪ್ಪ ನಾನು ನಿಮ್ಗೆಲ್ಲ ಮೋಸ ಮಾಡಿಬಿಟ್ಟೆ, ದಯವಿಟ್ಟು ನನ್ನ ಜೊತೆ ಮಾತಾಡು ಎಂದು ಕ ಣ್ಣೀರಿಟ್ಟ ಡ್ರೋನ್ ಪ್ರತಾಪ್

 | 
ರ

ಈ ಸಲದ ಕನ್ನಡ ಬಿಗ್ ಬಾಸ್ ಸೀಸನ್ ಹತ್ತು ಹಲವು ವಿಶೇಷ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಒಬ್ಬೊಬ್ಬರ ವರ್ತನೆ ಒಂದೊಂದು ತರಹ ಬದಲಾಗುತ್ತಿದೆ. ಮೊದಲಿಗೆ ವೈರಿಗಳಂತೆ ಕಿತ್ತಾಡುತಿದ್ದವರು ಈಗ ಒಂದಾಗಿದ್ದಾರೆ. ಸ್ನೇಹಿತರಂತೆ ಇದ್ದವರು ಜಗಳವಾಡಿಕೊಂಡಿದ್ದಾರೆ. ಇವರಲ್ಲರ ನಡುವೆ ಇದ್ದು ಇಲ್ಲದಂತಿದ್ದ ಡ್ರೋನ್ ಪ್ರತಾಪ್ ಕನ್ನಡಿಗರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.

ಹೌದು, ಮೊದ ಮೊದಲು ಸದ್ದಿಲ್ಲದೆ ಇರುತ್ತಿದ್ದ ಡ್ರೋನ್ ಪ್ರತಾಪ್ ಕ್ರಮೇಣ ಇತರ ಸ್ಪರ್ಧಿಗಳ ಜೊತೆಗೆ ಬೆರೆಯುತ್ತಾ ಹೋದರು. ತಮ್ಮ ಸೌಮ್ಯ ಸ್ವಭಾವ ಮತ್ತು ಭಾವುಕತೆಯಿಂದಾಗಿ ಕೋಟ್ಯಾಂತರ ಜನರ ಮನ ಕದ್ದಿರುವ ಅವರಿಗೆ ಅಭಿಮಾನಿಗಳ ಸಂಖ್ಯೆಯೂ ಅಪಾರ. ಆದರೆ, ಅವರು ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದು ತೀರಾ ಕಡಿಮೆ. ಆದರೆ, ಈ ಬಾರಿಯ ಕಿಚ್ಚನ ಪಂಚಾಯಿತಿ ಡ್ರೋನ್ ಪ್ರತಾಪ್ ಅವರ ಕಣ್ಣೀರಿಗೆ ಸಾಕ್ಷಿಯಾಗಿದೆ.

ಡ್ರೋನ್ ಪ್ರತಾಪ್ ಮೊದಲಿನಿಂದಲೂ ತಮ್ಮ ತಂದೆ, ತಾಯಿ, ತಂಗಿ ಕುಟುಂಬದವರ ಬಗ್ಗೆ ಮಾತಾಡಿದ್ದು ತುಂಬಾ ಕಡಿಮೆ. ಆದರೆ ನಟಿ ತಾರಾ ಬಿಗ್ ಬಾಸ್ ಮನೆಗೆ ಬಂದಾಗ ಭಾವುಕರಾಗಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದರು. ಅದಾದ ಮೇಲೆ ಅವರು ಎಷ್ಟೋ ವರ್ಷಗಳಿಂದ ಕುಟುಂಬದಿಂದ ದೂರವಿದ್ದಾರೆ ಎಂಬುದನ್ನು ತಿಳಿಸಿದ್ದರು. ತಮ್ಮ ಕುಟುಂಬ ಅದರಲ್ಲೂ ತಂದೆಯ ಜತೆಗೆ ಮಾತಾಡಬೇಕು ಎಂದು ನೋವು ತೋಡಿಕೊಂಡಿದ್ದರು.

ಟಾಸ್ಕ್‌ನಲ್ಲಿ ಸೋತು ಮನೆಯ ಪತ್ರ ಮಡೆಯುವಲ್ಲಿ ವಿಫಲರಾಗಿರುವ ಪ್ರತಾಪ್‌ಗೆ ಕಿಚ್ಚನ ಪಂಚಾಯಿತಿಯಲ್ಲಿ ಬಿಗ್ ಬಾಸ್ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಪತ್ರದ ಬಗ್ಗೆ ಭಾರಿ ಆಸೆ ಇಟ್ಟುಕೊಂಡಿದ್ದ ಪ್ರತಾಪ್ ಅವರನ್ನು ಮಾತನಾಡಿಸಿರುವ ಸುದೀಪ್, ನಿಮ್ಮ ಮನೆಯಿಂದ ಬರುತ್ತಿದ್ದ ಪತ್ರದಲ್ಲಿ ನೀವು ಏನು ನಿರೀಕ್ಷಿಸಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಪ್ರಶ್ನೆ ಕೇಳುತ್ತಿದ್ದಂತೆ ಭಾವುಕರಾಗಿ ಅಪ್ಪ... ಎಂದು ತಡವರಿಸಿದ ಡ್ರೋನ್ ಪ್ರತಾಪ್...ಅಪ್ಪಾ ತಪ್ಪಾಯಿತು... ನನ್ನ ಕ್ಷಮಿಸಿಬಿಡಿ. 

ನಿಮಗೆ ಸಾಕಷ್ಟು ನೋವು ಕೊಟ್ಟಿದ್ದೀನಿ ಎಂದು ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದ್ದಾರೆ. ಅಷ್ಟರಲ್ಲೇ ಕಿಚ್ಚನ ಪಂಚಾಯಿತಿ ವೇದಿಕೆಯಿಂದ ಪ್ರತಾಪ್ ಅವರ ತಂದೆಯ ಧ್ವನಿ ಕೇಳಿ ಬಂದಿದೆ. ತಂದೆಯ ಧ್ವನಿ ಕೇಳಿ ಮತ್ತಷ್ಟು ಜೋರಾಗಿ ಅಳಲು ಶುರು ಮಾಡಿದ ಪ್ರತಾಪ್ ಪದೇ ಪದೇ ನಾನು ತಪ್ಪು ಮಾಡಿದ್ದಿನಿ ಕ್ಷಮಿಸಿ ಕ್ಷಮಿಸಿ ಎಂದು ಬೇಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.