ಮಜಾ ಟಾಕೀಸ್ ನಿಂದ ಸೃಜನ್ ಲೋಕೇಶ್ ಗೆ ಕೋಟಿಗಟ್ಟಲೆ ಲಾಸ್, ಕಷ್ಟಕಾಲದಲ್ಲಿ ಕೈಹಿಡಿಯದ ದರ್ಶನ್

 | 
Js
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೃಜನ್ ಲೋಕೇಶ್‌ ನೇತೃತ್ವದ ‘ಮಜಾ ಟಾಕೀಸ್’ ದಿಢೀರ್ ಮುಕ್ತಾಯವಾಗಿದೆ. ಕೇವಲ 32 ಎಪಿಸೋಡ್‌ಗಳಿಗೆ ‘ಮಜಾ ಟಾಕೀಸ್‌’ ಎಂಡ್‌ ಆಗಿದೆ. ಏಕಾಏಕಿ ‘ಮಜಾ ಟಾಕೀಸ್‌’ ಕಾರ್ಯಕ್ರಮವನ್ನ ಸೃಜನ್ ಲೋಕೇಶ್‌ ನಿಲ್ಲಿಸಿದ್ಯಾಕೆ? ಈ ಬಗ್ಗೆ ಇನ್ಸ್ಟಾಗ್ರಾಮ್‌ ಲೈವ್‌ಗೆ ಬಂದ ಸೃಜನ್‌ ಲೋಕೇಶ್‌ ಕೆಲವು ವಿಷಯಗಳನ್ನ ಹೇಳಿದ್ದಾರೆ. 
ಕಲರ್ಸ್ ಕನ್ನಡ ವಾಹಿನಿಯ ಇನ್ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಲೈವ್‌ಗೆ ಬಂದ ಸೃಜನ್ ಲೋಕೇಶ್, ಮಜಾ ಟಾಕೀಸ್‌ ಮುಗಿಯೋದಕ್ಕೆ ಫಾರ್ಮ್ಯಾಟ್‌ ಕಾರಣ ಎಂದು ತಿಳಿಸಿದ್ದಾರೆ. ಲೈವ್‌ನಲ್ಲಿ, 10 ವರ್ಷಗಳ ಹಿಂದೆ ಮಜಾ ಟಾಕೀಸ್‌ ಶುರು ಮಾಡಿದಾಗ ಈ ಮಟ್ಟಕ್ಕೆ ಹೋಗುತ್ತದೆ ಎಂದುಕೊಂಡಿರಲಿಲ್ಲ. ಮುಂಚೆ ನೂರಾರು ಎಪಿಸೋಡ್‌ಗಳನ್ನ ಮಾಡಿದ್ದೇನೆ. ಈಗ 32 ಎಪಿಸೋಡ್‌ಗೆ ಎಂಡ್‌ ಆಗಿದೆ. ಯಾಕೆ ಅಂದ್ರೆ, ಒಂದು ಫಾರ್ಮ್ಯಾಟ್‌ ಇರುತ್ತದೆ. ಫಾರ್ಮ್ಯಾಟ್‌ಗೆ ತಕ್ಕಂತೆ ನಾವು ನಡೆಯಲೇಬೇಕು. 
ನಾವಿಲ್ಲಿ ತಾಳಕ್ಕೆ ತಕ್ಕಂತೆ ಕುಣಿಯಲೇಬೇಕು. ಕನ್ನಡ ಸಿನಿಮಾಗಳನ್ನ ದಯವಿಟ್ಟು ಬೆಳೆಸಿ ಎಂದು ಸೃಜನ್ ಲೋಕೇಶ್‌ ಹೇಳಿದ್ದಾರೆ.10 ವರ್ಷಗಳಿಂದ ನೀವು ‘ಮಜಾ ಟಾಕೀಸ್‌’ನ ಪ್ರೀತಿಸಿದ್ದೀರಾ. ಬೆಂಬಲ ಕೊಟ್ಟಿದ್ದೀರಾ. ನಮ್ಮ ಪ್ರತಿಯೊಂದು ಹಂತದಲ್ಲೂ ಬೆಂಬಲ ಕೊಟ್ಟಿದ್ಧೀರಾ. ಥ್ಯಾಂಕ್ಯು ವೆರಿ ಮಚ್. ನನ್ನ ಜೀವನವನ್ನ ತಿರುಗಿಸಿ, ಬೇರೆ ಕಡೆಗೆ ಕರೆದುಕೊಂಡು ಹೋದ ಕಾರ್ಯಕ್ರಮ ಮಜಾ ಟಾಕೀಸ್ ಇದಕ್ಕೆ ನಾನು ಕೃತಜ್ಞತೆಗಳನ್ನ ಹೇಳಲೇಬೇಕು.
ಪರಂಗೆ ನಾನು ಥ್ಯಾಂಕ್ಸ್ ಹೇಳಲೇಬೇಕು. ಕಲರ್ಸ್ ಕನ್ನಡ ವಾಹಿನಿ, ಲೋಕೇಶ್ ಪ್ರೊಡಕ್ಷನ್ಸ್‌ನ ಇಡೀ ತಂಡಕ್ಕೆ, ಇಡೀ ಚಿತ್ರರಂಗಕ್ಕೆ ಥ್ಯಾಂಕ್ಸ್. ಮಜಾ ಟಾಕೀಸ್‌’ನಲ್ಲಿ ನಾವು ಹಲವು ಸಿನಿಮಾಗಳನ್ನ ಪ್ರಮೋಟ್ ಮಾಡಿದ್ದೇವೆ. ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್‌ ಹಿಟ್‌ ಆಗಿವೆ ಎಂದು ಶೋ ಬಗ್ಗೆ ಸೃಜನ್‌ ಲೋಕೇಶ್‌ ಎಮೋಷನಲ್‌ ಆಗಿ ಮಾತನಾಡಿದರು. ಹಾಗೇ, ‘ಮಜಾ ಟಾಕೀಸ್‌’ ಶೋನಲ್ಲಿ ನಟನೆ ಮಾಡಿರುವ ವಿ ಮನೋಹರ್‌, ಶ್ವೇತಾ ಚೆಂಗಪ್ಪ, ಅಪರ್ಣಾ, ಕುರಿ ಪ್ರತಾಪ್, ತರಂಗ ವಿಶ್ವ, ಪವನ್, ಇಂದ್ರಜಿತ್ ಲಂಕೇಶ್, ರಜಿನಿ ಸೇರಿದಂತೆ ಎಲ್ಲಾ ಕಲಾವಿದರಿಗೂ ಸೃಜನ್‌ ಲೋಕೇಶ್‌ ಧನ್ಯವಾದಗಳನ್ನ ಅರ್ಪಿಸಿದರು. ಈ ಸೀಸನ್‌ನಲ್ಲಿ ಬಂದ ಯೋಗರಾಜ್‌ ಭಟ್‌ ಹಾಗೂ ಗಿಚ್ಚಿ ಗಿಲಿಗಿಲಿ ಕಲಾವಿದರಿಗೂ ಸೃಜನ್ ಲೋಕೇಶ್ ಥ್ಯಾಂಕ್ಸ್ ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.