ಕಾಲ್ ಮಾಡಿ ಕರೆದರು ಆಟಕ್ಕೆ ಬರುತ್ತಿಲ್ಲ ದರ್ಶನ್, ಕುಚಿಕು ಗೆಳೆಯನ ಬಗ್ಗೆ ಸುದೀಪ್ ಗರಂ

 | 
Hdh

ಡಿ ಬಾಸ್’ ಖ್ಯಾತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್‍ಗೆ ಅಭಿಮಾನಿಗಳ ಬಹುದೊಡ್ಡ ಸಾಗರವೇ ಇದೆ. ಕರುನಾಡಿನ ಕಿಚ್ಚ ಅಭಿಮಾನಿಗಳನ್ನು ಫ್ರೆಂಡ್ಸ್ ಅಂದ್ರೆ, ದರ್ಶನ್ ಅಭಿಮಾನಿ ದೇವರುಗಳನ್ನು ಸೆಲೆಬ್ರಿಟಿಗಳು ಅಂತಾ ಕರೆಯುತ್ತಾರೆ. ಈ ಇಬ್ಬರೂ ಸ್ಟಾರ್‍ಗಳನ್ನು ಅಭಿಮಾನಿಗಳು ದೇವರಂತೆ ಪ್ರೀತಿಸುವುದರ ಜೊತೆಗೆ ಆರಾಧಿಸುತ್ತಾರೆ. ಈಗ ಏನಪ್ಪಾ ಮ್ಯಾಟರ್ ಅಂದ್ರೆ… ಈ ಇಬ್ಬರೂ ಸ್ಟಾರ್‍ಗಳದ ದೊಡ್ಡ ಅಭಿಮಾನಿ ಬಳಗವು ದರ್ಶನ್ ಮತ್ತು ಸುದೀಪ್ ಮುಂದೆ ಒಂದು ಬೇಡಿಕೆ ಇಟ್ಟಿದ್ದಾರೆ. ಅದೇನಪ್ಪ ಅಂದ್ರೆ, ನೀವು ಇಬ್ಬರೂ ಮೊದಲು ಇದ್ದ ಹಾಗೇ ಮತ್ತೇ ಒಂದಾಗಿ ಅಂತಾ ಮನವಿ ಮಾಡಿಕೊಳ್ಳುತ್ತಿದ್ದಾರೆ. H

ಅಷ್ಟೇ ಅಲ್ಲ ಇಬ್ಬರೂ ಸೇರಿ ಕುಚಿಕು ಗೆಳೆಯರಂತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಮನವಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಈ ಕುರಿತಾಗಿ ಕೆಸಿಸಿ ಮ್ಯಾಚ ಅಲ್ಲಿ ಮಾತನಾಡಿದ ಕಿಚ್ಚ ದರ್ಶನ್ ಹಾಗೂ ನಾನು ಉತ್ತಮ ಸ್ನೇಹಿತರು. ಅವನು ಇಲ್ಲಿ ಕ್ರಿಕೇಟ್ ಆಡಲು ಬಂದಿಲ್ಲ ಅದಕ್ಕೆ ಕಾರಣ ನೂರಿರಬಹುದು ಆದರೂ ಇಲ್ಲಿ ನಿಮ್ಮ ಮೆಚ್ಚಿನ ಆಟಗಾರರಿಗೆ ಪ್ರೋತ್ಸಾಹ ನೀಡಿ. ಇನ್ನು ಅವನು ಒಪ್ಪಿದರೆ ಅವನೊಂದಿಗೆ ಸಿನಿಮಾ ಮಾಡಲು ನಾನ್ ರೆಡಿ ಎಂದು ಅಚ್ಚರಿ ಮೂಡಿಸಿದ್ದಾರೆ. ಈ ಹಿಂದೆ ಹೊಸಪೇಟೆಯಲ್ಲಿನ ಘಟನೆ ಖಂಡಿಸಿ ಸುದೀಪ್‌ ಟ್ವೀಟ್‌ ಮಾಡಿದ್ದರು. ಅದಕ್ಕೆ ದರ್ಶನ್‌ ಪ್ರತಿಕ್ರಿಯಿಸಿದ್ದಾರೆ. ಈ ಒಂದು ಟ್ವೀಟ್‌ ಕ್ಷಣವನ್ನು ಈ ಇಬ್ಬರ ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದಾರೆ, ಸಂಭ್ರಮಿಸಿದ್ದಾರೆ. Gz

ಚಂದನವನದ ಕುಚಿಕು ಗೆಳೆಯರು ಅಂದರೆ ನೆನಪಾಗುವುದು ಅಂಬಿ-ವಿಷ್ಣುದಾದ ಜೋಡಿ. ಈ ದಿಗ್ಗಜರ ಸ್ನೇಹವನ್ನು ಮರುಕಳಿಸಿದ ಜೋಡಿ ಚಾಲೆಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್. ಆದರೆ ಇವರಿಬ್ಬರ ಸ್ನೇಹಕ್ಕೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಕುಚಿಕು ಗೆಳೆಯರಾಗಿದ್ದವರ ಮಧ್ಯೆ ಕಿಚ್ಚು ಹೊತ್ತುಕೊಂಡಿತ್ತು. ಸ್ಯಾಂಡಲ್​​ವುಡ್'ನಲ್ಲಿ ಆರಡಿ ಹೀರೋಗಳ ಹವಾ ಶುರುಮಾಡಿದವ್ರು ಈ ಇಬ್ಬರು ನಾಯಕ ನಟರೇ. ಇವರಿಬ್ಬರಿಗೂ ಸ್ಪರ್ಶ ಮತ್ತು ಮೆಜೆಸ್ಟಿಕ್ ಚಿತ್ರಗಳ ಮೂಲಕ ಲಕ್ಕಿ ಹೀರೊಯಿನ್ ಆದವ್ರು ರೇಖಾ... ಸುಮಾರು 15 ರಿಂದ 17 ವರ್ಷಗಳ ನಂಟು ಈ ನಲ್ಲ ಮತ್ತು ಅಯ್ಯನದು. Hd

ಉಭಯ ನಾಯಕರು ತಮ್ಮ ಸಿನಿ ಬದುಕಿನ ಜೊತೆ ಜೊತೆಗೆ, ಸ್ನೇಹ ಸಾಗರವನ್ನು ವಿಶಾಲಗೊಳಿಸಿದ್ದರು. ಆದ್ರೆ ಖಾಸಗಿ ವಾಹಿನಿಯಲ್ಲಿ ಸುದೀಪ್ ಕೊಟ್ಟ ಒಂದು ಇಂಟರ್ವ್ಯೂ ಇವರಿಬ್ಬರ ಸ್ನೇಹಕ್ಕೆ ಸಾಗರದಲ್ಲಿ ಸುನಾಮಿ ಎಬ್ಬಿಸಿತ್ತು. ಆದ್ರೆ ಈಗ ಸುದೀಪ್ ಅವರೇ ದಚ್ಚು ಗೆಳೆತನಕ್ಕೆ ಮತ್ತೊಮ್ಮೆ ಮುಂದಾಗಿರೋದು ನೋಡಿದ್ರೆ ಎಲ್ಲವೂ ಮೊದಲಿನಂತಾಗುವ ಶುಭ ಲಕ್ಷಣಗಳು ಕಾಣುತ್ತಿವೆ.ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಬಗೆಬಗೆ ಟ್ವಿಟ್‌ ಹಂಚಿಕೊಳ್ಳುವ ಮೂಲಕ ಈ ಜೋಡಿಯ ಸ್ನೇಹದ ಪುನರ್ಮಿಲನ ಯಾವಾಗ ಎಂದು ಅಭಿಮಾನಿಗಳು ಜಪಿಸುತ್ತಿದ್ದಾರೆ.ಒಟ್ಟಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಶುಭ ಸುದ್ದಿಯೊಂದು ನೀಡೋದು ಬಾಕಿಯಿದೆ.

(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.