ಈ ಕೂಡಲೇ ದರ್ಶನ್ ಅರೆಸ್ಟ್ ಆಗಬೇಕು, ತಲೆಕೆಡಿಸಿಕೊಂಡ ಅರಣ್ಯ ಅಧಿಕಾರಿ

ಸದ್ಯ ಕರ್ನಾಟಕದಲ್ಲಿ ಹುಲಿ ಉಗುರಿನ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಹುಲಿ ಉಗುರು ಹೊಂದಿರುವ ಆರೋಪದ ಮೇಲೆ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲಿ ಅರೆಸ್ಟ್ ಆದ ಬಳಿಕ ಅನೇಕ ಸೆಲೆಬ್ರಿಟಿಗಳು ಹುಲಿ ಉಗುರಿನ ಲಾಕೆಟ್ ಹೊಂದಿದ್ದರು ಎನ್ನುವ ಫೋಟೋ ವೈರಲ್ ಆಗುತ್ತಿದೆ.
ನಟ ದರ್ಶನ್ ಕತ್ತಿನಲ್ಲೂ ಹುಲಿ ಉಗುರಿನ ಲಾಕೆಟ್ ಇತ್ತು ಎನ್ನಲಾಗಿದೆ. ಈ ಸಂಬಂಧ ಅರಣ್ಯಾಧಿಕಾರಿಗಳು ಅಕ್ಟೋಬರ್ 26ರಂದು ದರ್ಶನ್ ಮನೆಗೆ ತೆರಳಿ ಶೋಧಕಾರ್ಯ ನಡೆಸಿದ್ದರು. ಮನೆಯ ಸರ್ಚ್ಗೆ ಬಂದ ವೇಳೆ ಅಧಿಕಾರಿಗಳಿಗೆ ದರ್ಶನ್ ಸಂಪೂರ್ಣ ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಬಂದ ತಕ್ಷಣ ಮನೆ ಬಾಗಿಲು ಓಪನ್ ಮಾಡಿ ಅವರನ್ನು ಸ್ವಾಗತಿಸಿದ್ದಾರೆ.
ಮೂಲಗಳ ಪ್ರಕಾರ ದರ್ಶನ್ ಮನೆಯಲ್ಲಿ ಸಿಕ್ಕಿದ್ದು ಒಂದಲ್ಲ ಎರಡಲ್ಲ 8ರಿಂದ 10 ಹುಲಿ ಉಗುರಿನ ಮಾದರಿಯ ಪೆಂಡೆಂಟ್ಗಳು. ಆದರೆ, ಯಾವುದೂ ಅಸಲಿ ಅಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ದರ್ಶನ್ ಶೂಟಿಂಗ್ನಲ್ಲಿ ಸದಾ ಬ್ಯುಸಿ ಇರುತ್ತಾರೆ. ಅವರು ಕೆಲವೊಮ್ಮೆ ಶೂಟಿಂಗ್ಗಾಗಿ ಹುಲಿ ಉಗುರಿನ ಮಾದರಿಯ ಲಾಕೆಟ್ ಬಳಸಿದ್ದಾರೆ. ಅವರ ಬಳಿ ಇರುವ ಎಲ್ಲಾ ಲಾಕೆಟ್ಗಳು ಹುಲಿ ಉಗುರಿನ ಮಾದರಿಯ ಲಾಕೆಟ್ಗಳು ಅಷ್ಟೇ ಎನ್ನಲಾಗಿದೆ.
ತಮ್ಮ ಬಳಿ ಇದ್ದ 8 ರಿಂದ 10 ಪೆಂಡೆಂಟ್ಗಳನ್ನ ಅವರು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಪರಿಶೀಲಿಸಿದ ಬಳಿಕವೇ ಇದು ಅಸಲಿಯೋ ಅಥವಾ ನಕಲಿಯೋ ಅನ್ನೋದು ಗೊತ್ತಾಗಲಿದೆ. ಹಸುವಿನ ಕೊಂಬಿನಿಂದ ಪೆಂಡೆಂಟ್ಗಳನ್ನು ಮಾಡಲಾಗುತ್ತದೆ. ಅದನ್ನು ಹುಲಿ ಉಗುರಿನ ಪೆಂಡೆಂಟ್ ರೀತಿಯಲ್ಲೇ ಇರುತ್ತದೆ.
ದರ್ಶನ್ ಧರಿಸಿದ್ದು ಇದೇ ಪೆಂಡೆಂಟ್ ಇರಬಹುದು ಎಂಬುದು ಅನೇಕರ ಊಹೆ. ಇನ್ನು ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಬೇಕು ಎಂದು ಹಲವರು ಈಗಾಗಲೇ ಒತ್ತಾಯಿಸಿ ಕಾಮೆಂಟ್ ಮಾಡಿದ್ದರು. ಆದರೆ ನಿಜವಾದ ಹುಲಿ ಉಗುರು ಎಂದು ಸಾಬೀತಾಗದ ಹೊರತು ಏನೂ ಮಾಡಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.