ಬಾಲಿವುಡ್ ನಲ್ಲಿ ಕಸದ ಬುಟ್ಟಿಯಂತೆ ಕಾಣುತ್ತಾರೆ, ಬೆಂಗಳೂರಿನಲ್ಲಿ ಅಮ್ಮನ ಜೊತೆ ಚೆನ್ನಾಗಿದ್ದೆ ಎಂದ ದೀಪಿಕಾ ಪಡುಕೋಣೆ
Feb 13, 2025, 15:10 IST
|

ಮುಂಬೈಗೆ ಬಂದು ನಟನಾ ವೃತ್ತಿಯನ್ನು ಆರಂಭಿಸಿದ ಆರಂಭಿಕ ದಿನಗಳಲ್ಲಿ ತಾನು ಯಾವ ರೀತಿಯ ಮಾನಸಿಕ ಖಿನ್ನತೆಯನ್ನು ಅನುಭವಿಸಿದ್ದೆ, ಅದರಿಂದ ಹೊರಗೆ ಬರಲಾರದೆ ಹೇಗೆ ಒದ್ದಾಡಿದ್ದೆ, ಜೀವವನ್ನೇ ಕಳೆದುಕೊಳ್ಳಲು ಯೋಚಿಸಿದ್ದೆ ಎಂಬುದೆಲ್ಲದರ ಬಗ್ಗೆಯೂ ದೀಪಿಕಾ ಮುಕ್ತವಾಗಿ ಮಾತನಾಡಿದ್ದಾರೆ. ಒಂದು ಸಮಯದಲ್ಲಿ ನಾನು ನನ್ನ ತಾಯಿಯ ಬಳಿ ನನಗೆ ಇನ್ನು ಬದುಕೋಕೇ ಇಷ್ಟವಿಲ್ಲ ಎಂದು ಹೇಳಿದ್ದನ್ನು ದೀಪಿಕಾ ಪಡುಕೋಣೆ ನೆನಪಿಸಿಕೊಂಡಿದ್ದಾರೆ.
ಮಾನಸಿಕ ಆರೋಗ್ಯವೆನ್ನುವುದು ಎಲ್ಲರಿಗೂ ಬಹಳ ಮುಖ್ಯ. ಆದರೆ, ಬಹುತೇಕ ಜನರು ಖಿನ್ನತೆಗೆ ಒಳಗಾಗಿದ್ದರೂ ಅದನ್ನು ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ ಮತ್ತು ಅದಕ್ಕೆ ಪರಿಹಾರ ಪಡೆಯುವುದಿಲ್ಲ. ಆದರೆ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾನು ಕೂಡ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ ಎಂದು ಬಹಿರಂಗಪಡಿಸುವ ಮೂಲಕ ಮಾನಸಿಕ ಆರೋಗ್ಯವನ್ನು ನಿರ್ಲಕ್ಷ್ಯಿಸಬೇಡಿ ಎಂದು ಕರೆ ನೀಡಿದ್ದರು.
ಮಾಡೆಲಿಂಗ್ ಮತ್ತು ನಟನೆಯಲ್ಲಿ ಯಶಸ್ಸನ್ನು ಸಾಧಿಸಿದ್ದರೂ ನನಗೆ ನನ್ನ ಆರೋಗ್ಯದಲ್ಲಿ ಏನೋ ವ್ಯತ್ಯಾಸವಾಗಿದೆ ಎಂಬುದು ಗೊತ್ತಾಗಿತ್ತು. ಆದರೆ, ಅದೇನೆಂದು ಅರ್ಥವಾಗಿರಲಿಲ್ಲ. ನಾನು ಶಾಲಾ ದಿನಗಳಿಂದಲೂ ಕ್ರೀಡೆ, ಮಾಡೆಲಿಂಗ್ ಮತ್ತು ನಟನೆಯಲ್ಲಿ ತೊಡಗಿಸಿಕೊಂಡಿದ್ದೆ. ಹೀಗಾಗಿ, ನನಗೆ ಸ್ಟೇಜ್ ಭಯವೇನೂ ಇರಲಿಲ್ಲ.
ಆದರೆ, 2014ರಲ್ಲಿ ನಾನು ಇದ್ದಕ್ಕಿದ್ದಂತೆ ಮೂರ್ಛೆ ಹೋಗುವವರೆಗೂ ನನಗೆ ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದು ಗೊತ್ತಾಗಲೇ ಇಲ್ಲ. ನನ್ನ ಮನಸಿನ ಮೇಲೆ ನಾನು ಸಾಕಷ್ಟು ಒತ್ತಡ ಹೇರುತ್ತಿದ್ದೆ ಎಂದು ಆಗಲೇ ನನಗೆ ಅರ್ಥವಾಗಿದ್ದು. ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025