ದರ್ಶನ್.ಗೆ ಭಯಪಟ್ಟು ಒಮ್ಮೆಲೇ ಸೀಟ್ ಬಿಟ್ಟು ಕೊಟ್ಟ ಧ್ರುವ ಸರ್ಜಾ, ಸರ್ಜಾ ಕುಟುಂಬದ ಗೌರವ ಕಂಡು ಮೆಚ್ಚಿಕೊಂಡ ದಾಸ

 | 
Nxxh

ಕಾವೇರಿ ಹೋರಾಟ ತಣ್ಣಗಾಗುವಂತೆ ಕಾಣುತ್ತಿಲ್ಲ. ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ನೀಡಿದ ಆದೇಶದಿಂದ ರಾಜ್ಯದ ರೈತರು ಹಾಗೂ ಹೋರಾಟಗಾರರು ಮತ್ತಷ್ಟು ಕೆರಳಿದ್ದಾರೆ. ಕರ್ನಾಟಕ ಬಂದ್ ಸೇರಿದಂತೆ ಪ್ರತಿಭಟನೆಗಳನ್ನು ಮಾಡುತ್ತಿದ್ದರೂ ಕರ್ನಾಟಕ ವಿರುದ್ಧದ ತೀರ್ಪುಗಳೇ ಬರುತ್ತಿವೆ.

ಇನ್ನು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಕರೆಯನ್ನು ನೀಡಿದ್ದವು. ಈ ಬಂದ್‌ಗೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಕೂಡ ಬೆಂಬಲ ಸೂಚಿಸಿತ್ತು. ಈ ವೇಳೆ ಕನ್ನಡ ಚಿತ್ರರಂಗದ ಪ್ರಮುಖ ನಟ, ನಟಿಯರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಭಾಗವಹಿಸಿದ್ದರು.

ಕನ್ನಡ ಚಿತ್ರರಂಗದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಧ್ರುವ ಸರ್ಜಾ ರಾಜಕೀಯ ಮಾಡಲು ಕನ್ನಡ ಚಿತ್ರರಂಗವನ್ನು ಒಡೆಯಬೇಡಿ ಎಂದು ಗುಡುಗಿದ್ದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾವೇರಿ ಹೋರಾಟದಲ್ಲಿ ಕನ್ನಡ ಚಿತ್ರರಂಗದ ಕಲಾವಿದರು ಬೆಂಬಲ ನೀಡುತ್ತಿಲ್ಲವೆಂದು ಹಲವು ಕನ್ನಡ ಪರ ಸಂಘಟನೆಗಳು ಆರೋಪ ಮಾಡಿದ್ದವು. 

ಇದೇ ವಿಚಾರವಾಗಿ ಪ್ರತಿಭಟನಾ ಸಭೆಯಲ್ಲಿ ಧ್ರುವ ಸರ್ಜಾ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ.
ರಾಜಕೀಯ ಮಾಡುವುದಕ್ಕೆ ರಾಜಕಾರಣಿಗಳು ಇದ್ದಾರೆ. ರಾಜಕೀಯ ಮಾಡುವುದಕ್ಕೆ ದಯವಿಟ್ಟು ಕಲಾವಿದರನ್ನು ಬಳಸಿಕೊಳ್ಳಬೇಡಿ. ಕನ್ನಡ ಚಿತ್ರರಂಗ ಶುದ್ಧವಾಗಿದೆ. ನಿಮ್ಮ ಕೆಟ್ಟ ಸಂಚಿನಿಂದ ಒಡೆದು ಹಾಕಬೇಡಿ. ನಾವು ಯಾವತ್ತೂ ಮುಂದೆನೂ ಅಷ್ಟೇ.. ಹಿಂದೆನೂ ಅಷ್ಟೇ.. ರೈತರ ಪರನೇ ಇರುತ್ತೇವೆ. 

ಒಬ್ಬ ರೈತನ ಮಗನಾಗಿ, ಕನ್ನಡಿಗನಾಗಿ ಈ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ತಮಿಳುನಾಡು, ಕರ್ನಾಟಕ ಎರಡೂ ರಾಜ್ಯದಲ್ಲೂ ಒಳ್ಳೆ ಮಳೆ, ಒಳ್ಳೆ ಬೆಳೆ ಆಗಲಿ. ರೈತರಿಗೆ ಒಳ್ಳೆಯದಾಗಲಿ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಇನ್ನು ಕಾವೇರಿ ನೀರಿಗಾಗಿ ಮಾಡಿದ ಬಂದ್ ಅಲ್ಲಿ ಭಾಗವಹಿಸಿದ್ದ ಧ್ರುವ ಸರ್ಜಾ ಅವರು ನಟ ದರ್ಶನ್ ಅವರು ಬರುತ್ತಿದ್ದಂತೆ ಅವರಿಗಾಗಿ ಖುರ್ಚಿ ಬಿಟ್ಟು ಹಿಂದೆ ನಡೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.