ಏಕಾಏಕಿ ಲಕ್ಷ್ಮಿನಿವಾಸ್ ಧಾರಾವಾಹಿಯ ಇಬ್ಬರು ಕಲಾವಿದರನ್ನು ಕೈಬಿಟ್ಟ ನಿರ್ದೇಶಕ, ಅಮೃತಧಾರೆ ಭೂಮಿಕಾ ಎಂಟ್ರಿ
Jan 8, 2025, 22:37 IST
|

ಆದ್ರೆ ಅದು ಕನ್ನಡದಲ್ಲಲ್ಲ ಬದಲಿಗೆ ಜೀ ತಮಿಳು ವಾಹಿನಿಯಲ್ಲಿ ಧಾರಾವಾಹಿಯ ಪ್ರೋಮೋ ಬಿಡುಗಡೆ ಮಾಡಿದೆ. ಕನ್ನಡದ ರೀತಿಯಲ್ಲಿಯೇ ಈ ಪ್ರೋಮೋ ಇದೆ ಎನ್ನೋದೆ ವಿಶೇಷ. ‘ಗಟ್ಟಿಮೇಲಂ’ ಎಂದು ಹೆಸರಿಡಲಾಗಿದೆ. ತಮಿಳಿನ ರಿಮೇಕ್ ಧಾರಾವಾಹಿಯಲ್ಲಿ ಛಾಯಾ ಸಿಂಗ್ ಭಾವನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಆಗಿ ಛಾಯಾ ಸಿಂಗ್ ನಟಿಸುತ್ತಿದ್ದಾರೆ.
ಈಗಾಗಲೇ 400ಕ್ಕೂ ಅಧಿಕ ಸಂಚಿಕೆಗಳನ್ನು ಪೂರ್ಣಗೊಳಿಸಿರುವ ಲಕ್ಷ್ಮೀ ನಿವಾಸ, ಟಿಆರ್‌ಪಿ ವಿಚಾರದಲ್ಲಿಯೂ ಮೊದಲ ಸ್ಥಾನದಲ್ಲಿಯೇ ಮುಂದುವರಿಯುತ್ತಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ ಟೈಮ್ ಬದಲಾದ ಬಳಿಕ, ಟಿಆರ್‌ಪಿಯಲ್ಲಿಯೂ ಪುಟ್ಟಕ್ಕ ಕುಸಿತ ಕಂಡಿತ್ತು. ಈ ಬದಲಾವಣೆಯಿಂದ ನಂತರದ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಸೀರಿಯಲ್ ಟಿಆರ್‌ಪಿಯಲ್ಲಿ ನಂಬರ್ 1 ಸ್ಥಾನದಲ್ಲಿ ಬಂದು ಕೂತಿದೆ. ಇಂತಿಪ್ಪ ಧಾರಾವಾಹಿ ಇದೀಗ ತಮಿಳಿಗೂ ರಿಮೇಕ್ ಆಗುತ್ತಿದೆ. ಅಚ್ಚರಿಯ ವಿಚಾರ ಏನೆಂದರೆ, ತಮಿಳು ಸೀರಿಯಲ್‌ನಲ್ಲಿ ಕನ್ನಡದ ಮೂವರು ಕಲಾವಿದರೂ ನಟಿಸುತ್ತಿದ್ದಾರೆ.
ತಮಿಳಿನಲ್ಲಿ ಗಟ್ಟಿಮೇಳಂ ಹೆಸರಿನಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ರಿಮೇಕ್ ಆಗುತ್ತಿದೆ. ಇದೇ ಸೀರಿಯಲ್‌ನ ಹೊಸ ಪ್ರೋಮೋ ಇದೀಗ ಜೀ ತಮಿಳು ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಬಿಡುಗಡೆ ಆಗಿದೆ. ಫೇಸ್‌ಬುಕ್‌ನಲ್ಲಿ ಈ ಪ್ರೋಮೋ ಬಿಡುಗಡೆ ಆಗುತ್ತಿದ್ದಂತೆ, ವೀಕ್ಷಕರ ಕಣ್ಣರಳಿವೆ. ಅದಕ್ಕೆ ಕಾರಣ; ಅಮೃತಧಾರೆ ಸೀರಿಯಲ್ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಮತ್ತು ವೆಂಕಿ ಪಾತ್ರದಲ್ಲಿ ಅದೇ ಅಮೃತಧಾರೆ ಸೀರಿಯಲ್‌ನ ಆನಂದ್ ನಟಿಸುತ್ತಿದ್ದಾರೆ. ಅಷ್ಟಕ್ಕೇ ಮುಗಿದಿಲ್ಲ, ಅಮೃತಧಾರೆ ಸೀರಿಯಲ್‌ನಲ್ಲಿ ಆನಂದ್ ಪತ್ನಿ ಅಪರ್ಣಾ ಪಾತ್ರಧಾರಿ ರಾಯಲ್ ಸ್ವಾತಿ ಸಹ ನಟಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023