ಕನ್ನಡದ ಮುದ್ದಾದ ನಟಿಯನ್ನು ಅವಕಾಶಕ್ಕಾಗಿ ಮಂಚಕ್ಕೆ ಕರೆದ ಡೈರೆಕ್ಟರ್
May 31, 2025, 17:57 IST
|

ಹೌದು, ದರ್ಶನ್ ನಟಿಸಿದ 'ಗಜ', 'ಬೃಂದಾವನ', ಪುನೀತ್ ರಾಜ್‌ಕುಮಾರ್ ನಟಿಸಿದ 'ರಾಮ್', 'ಪವರ್' ಅಂತಹ ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದ್ದ ಮಾದೇಶ ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದಾರೆ. ಪವರ್ ಟಿವಿ ನಡೆಸಿದ ರಹಸ್ಯ ಕಾರ್ಯಚರಣೆಯಲ್ಲಿ ನಿರ್ದೇಶಕ ಮಾದೇಶ ಅವರು 'ಬೆಡ್ ಶೇರಿಂಗ್' ಬಗ್ಗೆನೂ ಬೇಡಿಕೆ ಇಟ್ಟಿದ್ದಾರೆಂದು ವರದಿಯಾಗಿದೆ. ನಿರ್ದೇಶಕ ಮಾದೇಶ ಅವರು ಕಮಿಂಟ್‌ಮೆಂಟ್ ಬಗ್ಗೆ ಮಾತಾನಾಡುತ್ತಾ 'ಬೆಡ್ ಶೇರಿಂಗ್' ಬಗ್ಗೆ ಬೇಡಿಕೆ ಇಟ್ಟಿದ್ದಾರೆ.
ಪವರ್ ಟಿವಿ ನಡೆಸಿದ ಈ ರಹಸ್ಯ ಕಾರ್ಯಾಚರಣೆಯಿಂದಾಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಸಂಚಲನವನ್ನು ಸೃಷ್ಟಿಸಿದೆ. ನಟಿಯೊಂದಿಗೆ ನಿರ್ದೇಶಕ ಮಾದೇಶ ನಡೆಸಿರುವ ಈ ಮಾತುಕತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರುವಾಗಿದ್ದು, ಚಿತ್ರರಂಗಕ್ಕೆ ಏನಾಗಿದೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗ ಪಾತಾಳದ ಕಡೆ ಮುಖ ಮಾಡುತ್ತಿರುವ ಸಂದರ್ಭದಲ್ಲಿ ನಿರ್ದೇಶಕ ಮಾದೇಶ ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಹೊಟೇಲ್ ಒಂದರಲ್ಲಿ ನಟಿಯೊಂದಿಗೆ ನಿರ್ದೇಶಕ ಮಾದೇಶ ಆಡಿದ ಮಾತುಗಳು ಪವರ್ ಟಿವಿಯ ಸ್ಟಿಂಗ್ ಆಪರೇಷನ್‌ನಲ್ಲಿ ಸೆರೆಯಾಗಿವೆ. ಈ ವಿಡಿಯೋದಲ್ಲಿ ಮೊದಲು ನಿರ್ಮಾಪಕರೊಂದಿಗೆ ಎಲ್ಲದಕ್ಕೂ ಹೊಂದಾಣಿಯಾಗಬೇಕು. ಎಲ್ಲಾ ಆಪ್ಷನ್‌ಗೂ ರೆಡಿಯಿರಬೇಕು ಅಂತವರನ್ನೇ ಹುಡುಕುತ್ತೇನೆ ಎಂದೂ ಹೇಳಿದ್ದಾರೆ. ಇವರಿಬ್ಬರು ಮಾತನಾಡುವಾಗ ನಟಿಯ ಎಂಟ್ರಿ ಆಗುತ್ತೆ. ಆಗ ನಿರ್ಮಾಪಕ ನಟಿಯೊಂದಿಗೆ ಮಾತಾಡುವುದಕ್ಕೆ ಶುರು ಮಾಡಿತ್ತಾರೆ. ಆಗ ನಟಿ ನಿರ್ದೇಶಕರು ಬೆಡ್ ಶೇರಿಂಗ್ ಮಾಡ್ಬೇಕು ಅಂತ ಹೇಳಿದ್ದರು. ನನಗೂ ಅದೇನು ಅಂತ ಅರ್ಥ ಆಗಿಲ್ಲ. ನೀವೇ ಹೇಳಿ ಎನ್ನುತ್ತಾರೆ. ಆಗ ನಟಿ ಅವರು ಏನು ಕಮಿಟ್ಮೆಂಟ್ ಹೇಳಿದರೋ ನೀವೇ ಹೇಳಿಬಿಡಿ. ನನಗೆ ಅವರು ಕಮಿಟ್ಮೆಂಟ್ ಅಂತ ಹೇಳಿದರು. ನನಗೆ ಏನೂ ಅರ್ಥ ಆಗಿಲ್ಲ. ನಾನು ಕಮಿಟ್‌ಮೆಂಟ್ ಎಲ್ಲಾ ಮಾಡುವುದಿಲ್ಲ ಎಂದು ಹೇಳಿದೆ. ಇಂತಹದ್ದೇ ಒಂದಿಷ್ಟು ಆಫರ್ ಬಂತು ನಾನು ಬಿಟ್ಟೆ ಎಂದು ನಟಿ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023