ಡಿಕೆ ಶಿವಕುಮಾರ್ ಸಿಎಮ್ ಭಾಗ್ಯ ಸಿಗುತ್ತಾ, ಮಹತ್ವದ ಭವಿಷ್ಯ‌ ನುಡಿದ ಕೋಡಿಶ್ರೀ

 | 
Jd
ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದರು ಅಂದ್ರೆ ಅದು ಅಕ್ಷರಶಃ ನಿಜವಾಗುತ್ತದೆ ಎಂಬ ಭಾವನೆ ಹಲವರಲ್ಲಿ ಮನೆ ಮಾಡಿದೆ.ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ, ಸಿಎಂ ಬದಲಾವಣೆ ಹಾಗೂ ವರ್ಷದ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಸ್ವಾಮೀಜಿ ಪ್ರಕಾರ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಕಷ್ಟ. ಸ್ವತಃ ಸಿದ್ದರಾಮಯ್ಯನವರೇ ಅಧಿಕಾರ ತ್ಯಜಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಮುಂದಿನ ಸಿಎಂ ಯಾರಾಗ್ತಾರೆ, ಡಿಕೆ ಶಿವಕುಮಾರ್ ಜೊತೆ ಅಧಿಕಾರ ಹಂಚಿಕೆ ಯಾವಾಗ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಭವಿಷ್ಯವಾಣಿ ಹೊರಬಿದ್ದಿದೆ. ಪಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಸಿಎಂ ಸ್ಥಾನ ಭದ್ರ ಎಂಬ ಭವಿಷ್ಯವಾಣಿಯನ್ನು ಕೋಡಿಶ್ರೀ ನುಡಿದಿದ್ದಾರೆ.
ಮುಂಬರುವ ವರ್ಷದಲ್ಲಿ ರಾಜ್ಯಕ್ಕೆ ಉತ್ತಮ ಮಳೆ, ಬೆಳೆ ಮತ್ತು ಸುಭೀಕ್ಷೆ ಇರುತ್ತದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಆದರೆ, ಜಾಗತಿಕವಾಗಿ ತೊಂದರೆಗಳು ಹೆಚ್ಚಾಗಲಿವೆ ಎಂದು ಎಚ್ಚರಿಸಿದ್ದಾರೆ. ಭೂಕಂಪ, ಸುನಾಮಿಗಳು ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಯುಗಾದಿ ನಂತರ ವಿವರವಾದ ಭವಿಷ್ಯ ನುಡಿಯುವುದಾಗಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಕುರ್ಚಿ ಸೇಫಾ, ಸಿಎಂ ಗದ್ದುಗೆಯಿಂದ ಇಳಿಸುವದು ಕಷ್ಟನಾ, ಸಿಎಂ ಸಿದ್ದರಾಮಯ್ಯ ತಾನಾಗೇ ಅಧಿಕಾರ ತ್ಯಜಿಸಬಹುದಾ ಎಂಬ ಬಗ್ಗೆ ಹೇಳಿದ್ದಾರೆ. ಹಾಲುಮತ ಸಮಾಜದ ಬಗ್ಗೆ ಮಾತನಾಡುತ್ತ, "ಹಾಲು ಮತ ಸಮಾಜವು ಪ್ರಾಚೀನ ಕಾಲದಿಂದ ದೈವದಾರಾಧನೆ ಮಾಡುವ ಸಮಾಜ, ಹಾಲು ಕೆಟ್ಟರು ಹಾಲು ಸಮಾಜ ಕೆಡದು, ಹಕ್ಕು ಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು, ಹಾಲು ಮತ ಸಮಾಜದವರಲ್ಲಿ ರಾಜ್ಯದ ಅಧಿಕಾರವಿದೆ, ಸಿಎಂ ಕುರ್ಚಿಯಿಂದ ಬಿಡಿಸುವದು ಅಷ್ಟು ಸುಲಭವಲ್ಲ, ಸಿಎಂ ಸಿದ್ದರಾಮಯ್ಯ ಅವರು ಅವರಾಗೆ ಸಿಎಂ ಸ್ಥಾನ ಬಿಡಬೇಕು ಹೊರತು ನೀವು ಬಿಡಿಸಿಕೊಳ್ಳುವದು ಅಷ್ಟು ಸುಲಭವಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.