FactCheck:ಮೇಘನಾ ರಾಜ್ ಹಾಗೂ ವಿಜಯ್ ರಾಘವೇಂದ್ರ ಮದುವೆ, ಎಲ್ಲದಕ್ಕೂ ಉತ್ತರ ಕೊಟ್ಟ ಪೋಷಕರು
Jun 4, 2025, 20:16 IST
|

ಎಲ್ಲರಿಗೂ ತಿಳಿದಿರುವಂತೆ ಕೆಲ ವರ್ಷಗಳ ಹಿಂದೆ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ವಿಜಯ ರಾಘವೇಂದ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಇದಾದ ಕೆಲವೇ ತಿಂಗಳಲ್ಲಿ ಕೆಲ ಸೋಶಿಯಲ್ ಮೀಡಿಯಾದಲ್ಲಿ ನಟಿ ಮೇಘನಾ ರಾಜ್ ಮತ್ತು ವಿಜಯ ರಾಘವೇಂದ್ರ ಅವರು ಎರಡನೇ ಮದುವೆ ಆಗಲಿದ್ದಾರೆ ಅನ್ನೋ ಸುದ್ದಿಗಳು ವೈರಲ್ ಆಗಲು ಶುರುವಾಗಿದ್ದವು.
Fact check: ಆದರೆ ಇದರ ಬಗ್ಗೆ ಯಾವತ್ತೂ ಕೂಡ ಮೇಘನಾ ರಾಜ್ ಆಗಿರಬಹುದು ಅಥವಾ ವಿಜಯ ರಾಘವೇಂದ್ರ ಅವರಾಗಿರಬಹುದು ಮಾತನಾಡಿಲ್ಲ. ಆದರೆ ಕೊನೆಗೂ ಮೆಘನಾ ರಾಜ್ ಹಾಗೂ ವಿಜಯರಾಘವೇಂದ್ರ ಈ ವಿಷಯದ ಬಗ್ಗೆ ಮೌನ ಮುರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.ಫೇಕ್ ಸುದ್ದಿಗಳನ್ನು ಮಾಡೋರ ವಿರುದ್ಧ ಮೇಘನಾ ರಾಜ್ ಹಾಗೂ ವಿಜಯ ರಾಘವೇಂದ್ರ ಲೀಗಲ್ ಆಗಿ ಆಕ್ಸನ್ ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದರ ಕುರಿತಾಗಿ ಪ್ರೆಸ್ ಮೀಟ್ ತೆಗೆದುಕೊಳ್ಳುವ ಬಗ್ಗೆ ಕೂಡ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಮೇಘನಾ ರಾಜ್ ವಿಜಯ್ ರಾಘವೇಂದ್ರ 2ನೇ ಮದುವೆ ಆಗಲಿದ್ದಾರೆ ಎಂದು ಫೇಕ್ ನ್ಯೂಸ್ ಮಾಡೋರಿಗೆ ತಕ್ಕ ಪಾಠ ಕಲಿಸಿದ್ದಾರೆ ಎನ್ನಲಾಗುತ್ತಿದೆ.ಈ ಬಗ್ಗೆ ಸುದ್ದಿಗಾರರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ ಮೇಘನಾ ರಾಜ್ ಕುಟುಂಬಸ್ಥರು, ಇವೆಲ್ಲಾ ಫೇಕ್ ನ್ಯೂಸ್. ಇಂತಹ ಸುದ್ದಿಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ. ಅವರಿಬ್ಬರು ಸಿನಿಮಾದಲ್ಲಿ ಸ್ನೇಹಿತರು ಅಷ್ಟೆ. ಅವರಿಬ್ಬರ ನಡುವೆ ಆ ರೀತಿ ಯಾವುದೇ ಭಾವನೆಗಳು ಇಲ್ಲ ಎಂದಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023