ವಿಜಯ್ ರಾಘವೇಂದ್ರ ಎಷ್ಟು ‌ಮುದ್ದಾಗಿ ತುಳು ಮಾತಾನಾಡುತ್ತಾರೆ ಗೊತ್ತಾ, ಅಚ್ಚರಿ ಪಟ್ಟ ಕರುನಾಡು

 | 
H

ಸ್ಯಾಂಡಲ್‌ ವುಡ್‌ ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಸುದ್ದಿ ಸ್ಯಾಂಡಲ್‌ ವುಡ್‌ ಗೆ ದೊಡ್ಡ ಆಘಾತವನ್ನು ನೀಡಿದೆ. ಅಪ್ಪು ಅವರನ್ನು ಕಳೆದುಕೊಂಡ ದುಃಖದಲ್ಲೇ ಇರುವ ಚಂದನವನ ಈಗ ಸ್ಪಂದನಾ ಅವರನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದೆ. ಸ್ಪಂದನಾ ಅವರು ಮೂಲತಃ ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರು ದಕ್ಷ ಸಹಾಯಕ ಪೊಲೀಸ್ ಆಯುಕ್ತ ಬಿ.ಕೆ.ಶಿವರಾಂ ಅವರ ಮಗಳಾಗಿರುವ ಸ್ಪಂದನಾ 2004 ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಕಾಫಿ ಡೇಯಲ್ಲಿ ವಿಜಯ್‌ ರಾಘವೇಂದ್ರ ಅವರನ್ನು ಭೇಟಿಯಾಗಿದ್ದರು. 

2007 ರಲ್ಲಿ ಮತ್ತೆ ಭೇಟಿಯಾಗಿದ್ದ ವೇಳೆ ಅವರಿಬ್ಬರಲ್ಲಿ ಸ್ನೇಹ ಹುಟ್ಟಿತು. ಈ ಸ್ನೇಹ ಪ್ರೀತಿಗೆ ಬದಲಾಗಿ ಅದೇ ವರ್ಷದ ಆಗಸ್ಟ್‌ 26 ರಂದು ವಿವಾಹವಾಗಿದ್ದರು. ಗುರು ಹಿರಿಯರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆದಿತ್ತು. ನಮ್ಮ ಮೊದಲ ಭೇಟಿಯಲ್ಲೇ ಸಂಗೀತದ ವಿಚಾರದಲ್ಲಿ ಗಲಾಟೆ ನಡೆಯುವಂತೆ ಸಂಭಾಷಣೆ ನಡೆದಿತ್ತೆಂದು ಟಿವಿ ಕಾರ್ಯಕ್ರಮದಲ್ಲಿ ಚಿನ್ನಾರಿ ಮುತ್ತ ತಮ್ಮ ಪ್ರೇಮಕಥೆಯನ್ನು ಹೇಳಿದ್ದರು. ಎರಡನೇ ಭೇಟಿಯಲ್ಲಿ ಸ್ಪಂದನಾ ಅವರನ್ನು ಆತ್ಮೀಯವಾಗಿ ಮಾತನಾಡಿಸಿದ್ದೆ ಎಂದು ವಿಜಯ್‌ ಈ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇನ್ನು ಬೆಳ್ತಂಗಡಿ ಮೂಲದವರಾದ ಸ್ಪಂದನಾ ನಟ ವಿಜಯ್ ರಾಘವೇಂದ್ರ ಅವರಿಗೂ ತುಳುನಾಡಿನ ಹೆಮ್ಮೆಯ ಭಾಷೆ ತುಳುವನ್ನು ಕಲಿಸಿದ್ದರು ಹಾಗಾಗಿ ನಟ ವಿಜಯ್ ರಾಘವೇಂದ್ರ ಅವರು ಕೆಲ ದಿನಗಳ ಹಿಂದೆ ತುಳು ಸಿನಿಮಾ ದ ಹಾಡೊಂದನ್ನು ಕೂಡ ಹೇಳಿದ್ದರು. 
ಅಲ್ಲದೆ ವಿಜಯ್ ರಾಘವೇಂದ್ರ ಚೆನ್ನಾಗಿ ತುಳು ಭಾಷೆ ಮಾತನಾಡಬಲ್ಲರು ಹಾಗೂ ಓದಬಲ್ಲರು ಮಾಲ್ಗುಡಿ ಡೇಸ್ ಸಿನಿಮಾ ತೆರೆಕಂಡ ಸಂದರ್ಭದಲ್ಲಿ ತುಳುವಿನಲ್ಲೇ ಸಂದರ್ಶನ ಕೂಡ ಮಾಡಿದಾಗ ತುಳುವಿನಲ್ಲೇ ಸ್ಪಷ್ಟವಾಗಿ ಮಾತನಾಡಿ ಎಲ್ಲರನ್ನು ಕೂಡ ದಂಗಾಗಿಸಿದ್ದರು.

ವಿಜಯ್‌ ರಾಘವೇಂದ್ರ ಅವರು ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅವರೊಂದಿಗೆ ಸುತ್ತಾಟದ ಕ್ಷಣಗಳನ್ನು,ಹಬ್ಬದ ದಿನದ ವಿಶೇಷತೆಯನ್ನು ಪತ್ನಿಯೊಂದಿಗಿನ ಫೋಟೋವನ್ನು ಹಂಚಿಕೊಂಡು ಸಂಭ್ರಮಿಸಿ, ಅಭಿಮಾನಿಗಳಿಗೆ ಶುಭಾಶಯವನ್ನು ಕೋರುತ್ತಿದ್ದರು. ʼಬೇರೆ ಏನು ಬೇಕು ನೀನು ಇರುವಾಗʼ ಎಂದು ಎಂಗೇಜ್ ಮೆಂಟ್‌ ಆದ ದಿನಕ್ಕೆ ಪತ್ನಿಯೊಂದಿಗಿನ ಫೋಟೋವನ್ನು ಈ ಹಿಂದೆ ಹಂಚಿಕೊಂಡಿದ್ದರು. 

ಆಗಸ್ಟ್‌ 26 ರಂದು 16ನೇ ವರ್ಷದ ವಿವಾಹ ವಾರ್ಷಿಕೋತ್ಸವ. ಈ ಸಂಭ್ರಮಕ್ಕೆ ಇನ್ನು 19 ದಿನಗಳು ಬಾಕಿಯಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷವಾಗಿ ಮದುವೆ ವಾರ್ಷಿಕೋತ್ಸವ ಆಚರಿಸಬೇಕೆಂದುಗೊಂಡಿದ್ದ ದಂಪತಿಯ ಬಾಳಲಿ ವಿಧಿ ಬೇರೆಯೇ ಆಟವನ್ನಾಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannnada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.