ಸ್ಪಂದನಾ ಅವರನ್ನು ಮದುವೆಯಾಗಲು ರಾಘು ಪಟ್ಟ ಕಷ್ಟ ಎಷ್ಟು ಗೊತ್ತಾ

 | 
Hgg

ಚಿನ್ನಾರಿ ಮುತ್ತುವಿನ ಮುತ್ತು ಸ್ಪಂದನಾ ಮೂಲತ: ಬೆಳ್ತಂಗಡಿಯವರು. ತಂದೆ ನಿವೃತ್ತ ಪೊಲೀಸ್‌ ಅಧಿಕಾರಿ ಬಿಕೆ ಶಿವರಾಂ ಬೆಂಗಳೂರಿನ ಮಲ್ಲೇಶ್ವರಂನಲ್ಲೇ ನೆಲೆಸಿದ್ದರು. ಸ್ಪಂದನಾ ಓದಿದ್ದು ಕೂಡಾ ಬೆಂಗಳೂರಿನಲ್ಲಿ. ಸ್ಪಂದನಾ ಮಾತೃಭಾಷೆ ತುಳು. 2006ರಲ್ಲಿ ಸ್ಪಂದನಾ ಕಾಫಿ ಡೇಯಲ್ಲಿದ್ದಾಗ ಮೊದಲ ಬಾರಿ ವಿಜಯ್‌ ರಾಘವೇಂದ್ರ, ಅವರನ್ನು ನೋಡಿದ್ದಾರೆ. ಮೊದಲ ನೋಟದಲ್ಲೇ ವಿಜಯ್‌ಗೆ ಸ್ಪಂದನಾ ಇಷ್ಟವಾಗಿದ್ದಾರೆ. 

ಆದರೆ ಆಕೆ ಯಾರು ಎಂಬುದು ವಿಜಯ್‌ಗೆ ಗೊತ್ತಿರಲಿಲ್ಲ. ಅದಾದ 3 ವರ್ಷಗಳ ಬಳಿಕ ಮತ್ತೆ ವಿಜಯ್‌ ರಾಘವೇಂದ್ರ ಮತ್ತೊಂದು ಕಡೆ ಸ್ಪಂದನಾ ಅವರನ್ನು ನೋಡಿದ್ದಾರೆ. ಇಂದು ಮಾತನಾಡಿಸದಿದ್ದರೆ ಇನ್ನೆಂದೂ ಮಾತನಾಡಿಸಲು ಆಗುವುದಿಲ್ಲ ಎಂದುಕೊಂಡ ರಾಘು ಆಕೆಯ ಬಳಿ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ. ಅಂದಿನ ಇವರ ಪರಿಚಯ ಪ್ರೀತಿಗೆ ತಿರುಗಿದೆ.

ಸ್ಪಂದನಾ ಅವರನ್ನು ಸ್ನೇಹಿತರು, ಕುಟುಂಬದ ಇತರ ಸದಸ್ಯರು ಹೆಸರಿಡಿದು ಕರೆಯುತ್ತಿದ್ದರೂ ಅವರ ಅಪ್ಪ ಹಾಗೂ ಆತ್ಮೀಯರು ಮಾತ್ರ ಅಚ್ಚು ಎಂದೇ ಕರೆಯುತ್ತಿದ್ದರು. ಸ್ಪಂದನಾಗೆ ಅಣ್ಣ ಇದ್ದಾರೆ. ರಕ್ಷಿತ್‌ ಶಿವರಾಂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಸ್ಪಂದನಾ ಕೂಡಾ ಅಣ್ಣನ ಪರವಾಗಿ ಪ್ರಚಾರ ನಡೆಸಿದ್ದರು. ಮಗಳನ್ನು ತಂದೆ, ತಾಯಿ ಬಹಳ ಮುದ್ದಾಗಿ ಬೆಳೆಸಿದ್ದರು. ಅಣ್ಣನಿಗೆ ಕೂಡಾ ತಂಗಿ ಎಂದರೆ ಪಂಚ ಪ್ರಾಣ.

ಇನ್ನು ನಟ ವಿಜಯ್ ರಾಘವೇಂದ್ರ ತಾಯಿ ಅನ್ನಪೂರ್ಣೆಗೆ ಹರಕೆ ಹೊತ್ತಮೇಲೆ ಸಿಕ್ಕಿರುವ ಅನ್ನಪೂರ್ಣೆಯ ಮಗಳು ಸ್ಪಂದನಾ. ಬಿಕೆ ಶಿವರಾಮ್‌ ಆತ್ಮೀಯರಾದ ನಿರ್ದೇಶಕಿ ಆಶಾರಾಣಿ ವಿಜಯ್‌ ರಾಘವೇಂದ್ರ ಹಾಗೂ ಸ್ಪಂದನಾ ಲವ್‌ ಸ್ಟೋರಿಯನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಒಮ್ಮೆ ಸ್ಪಂದನಾ ಕಾರಿನಲ್ಲಿ ಕುಳಿತು ಯುವಕನೊಬ್ಬನ ಜೊತೆ ಮಾತನಾಡುತ್ತಿದ್ದನ್ನು ನೋಡಿ ನನಗೆ ಗಾಬರಿ ಆಯ್ತು. ಕೊನೆಗೆ ಆ ಹುಡುಗ ವಿಜಯ ರಾಘವೇಂದ್ರ ಎಂಬ ವಿಷಯ ತಿಳಿಯಿತು. 

ತಂದೆಗೆ ಹೇಳಬೇಕು ಎಂದುಕೊಳ್ಳುವಷ್ಟರಲ್ಲಿ ಅವರಿಗೆ ವಿಷಯ ಗೊತ್ತಾಗಿದೆ. ಇಬ್ಬರ ಮನೆಯವರೂ ಒಪ್ಪಿ ಮದುವೆ ನಿಶ್ಚಯ ಮಾಡಿದ್ದಾರೆ. 20 ಏಪ್ರಿಲ್‌ 2007ರಲ್ಲಿ ನಿಶ್ಚಿತಾರ್ಥ ನಡೆದರೆ, 26 ಆಗಸ್ಟ್‌ 2007ರಲ್ಲಿ ಮದುವೆ ನೆರವೇರಿದೆ. 2010ರಲ್ಲಿ ಈ ಮುದ್ದಾದ ದಂಪತಿಗೆ ಜನಿಸಿದ ಗಂಡು ಮಗುವಿಗೆ ಶೌರ್ಯ ಎಂದು ಹೆಸರಿಟ್ಟಿದ್ದಾರೆ. ಅನೇಕ ಇಂಟರ್‌ವ್ಯೂಗಳಲ್ಲಿ ವಿಜಯ ರಾಘವೇಂದ್ರ ಹೇಳಿರುವಂತೆ ಸ್ಪಂದನಾ ಮಿತಭಾಷಿ, ಬಹಳ ನಾಚಿಕೆಯ ಸ್ವಭಾವದವರು. 

ಫ್ಯಾಮಿಲಿ, ಆತ್ಮೀಯರ ಕಾರ್ಯಕ್ರಮ ಬಿಟ್ಟರೆ ಬೇರೆ ಎಲ್ಲೂ ಹೋಗುತ್ತಿರಲಿಲ್ಲ. ಮಾಧ್ಯಮಗಳ ಮುಂದೆ ಎದುರಾಗಿದ್ದು ಬಹಳ ಅಪರೂಪ. ಅಂತದ್ದರಲ್ಲಿ ಆಕೆ ವೀಕೆಂಡ್‌ ವಿತ್‌ ಕಾರ್ಯಕ್ರಮಕ್ಕೆ ಮಗನೊಂದಿಗೆ ಬಂದಾಗ ವಿಜಯ್‌ ರಾಘವೇಂದ್ರ ಭಾವುಕರಾಗಿ ಕಣ್ಣೀರಿಟ್ಟಿದ್ದರು. ಥ್ಯಾಂಕ್ಸ್‌ ಚಿನ್ನ ಎಂದಿದ್ದರು. ಅಂತಹ ಕುಟುಂಬದ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.